ವ್ಯಕ್ತಿಯ ಸ್ವಭಾವಕ್ಕೆ ಹಿಡಿದ ಕನ್ನಡಿ ಫೇಸ್‌ಬುಕ್ ಸ್ಟೇಟಸ್

ಫೇಸ್‌ಬುಕ್ ಸ್ಟೇಟಸ್ ಎಂಬುದು ಕೇವಲ ಫೇಸ್‌ಬುಕ್‌ನಲ್ಲಿ ನಾವು ಬರೆಯುವ, ಬರೆದು ಲೈಕ್, ಕಾಮೆಂಟ್ ಗಿಟ್ಟಿಸುವ ಸಾಲುಗಳು ಮಾತ್ರವಲ್ಲ, ಅದು ನಮ್ಮ ವ್ಯಕ್ತಿತ್ವ, ನಡವಳಿಕೆಗೆ ಹಿಡಿದ ಕನ್ನಡಿಯಾಗಿದೆ
ಫೇಸ್ಬುಕ್
ಫೇಸ್ಬುಕ್
Updated on

ವ್ಯಕ್ತಿಯೊಬ್ಬರ ಫೇಸ್‌ಬುಕ್ ಸ್ಟೇಟಸ್ ನೋಡಿ, ಆ ವ್ಯಕ್ತಿ ಹೇಗೆ ಎಂಬುದನ್ನು  ಅರಿಯಬಹುದಾಗಿದೆ. ಈ ಬಗ್ಗೆ ಅಧ್ಯಯನಗಳು ನಡೆದಿದ್ದು, ಫೇಸ್‌ಬುಕ್ ಸ್ಟೇಟಸ್ ಎಂಬುದು ಕೇವಲ ಫೇಸ್‌ಬುಕ್‌ನಲ್ಲಿ ನಾವು ಬರೆಯುವ, ಬರೆದು ಲೈಕ್, ಕಾಮೆಂಟ್ ಗಿಟ್ಟಿಸುವ ಸಾಲುಗಳು ಮಾತ್ರವಲ್ಲ, ಅದು ನಮ್ಮ ವ್ಯಕ್ತಿತ್ವ, ನಡವಳಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಲಾಗುತ್ತಿದೆ.

ಹಾಗಾದರೆ ನಿಮ್ಮ ಅಥವಾ ನಿಮ್ಮ ಗೆಳೆಯರ ಫೇಸ್‌ಬುಕ್ ಸ್ಟೇಟಸ್ ಏನು ಹೇಳುತ್ತದೆ? ಬ್ರಿಟನ್‌ನ ಬ್ರೂನಲ್ ವಿಶ್ವ ವಿದ್ಯಾಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿ ವರದಿ ತಯಾರಿಸಿದೆ.  ಈ ವರದಿ ಪರ್ಸನಾಲಿಟಿ ಆ್ಯಂಡ್ ಇಂಡಿವಿಜ್ಯುವಲ್ ಡಿಫರೆನ್ಸ್  ಜರ್ನಲ್‌ನಲ್ಲಿ  ಪ್ರಕಟವಾಗಿದೆ.

ಈ ಅಧ್ಯಯನಕ್ಕಾಗಿ 555 ಫೇಸ್‌ಬುಕ್ ಬಳಕೆದಾರರ ಸ್ಟೇಟಸ್‌ಗಳನ್ನು  ಬಳಸಿಕೊಳ್ಳಲಾಗಿತ್ತು ಅವರಲ್ಲಿನ ಸ್ವಭಾವಗಳನ್ನು 5 ರೀತಿಯಲ್ಲಿ ವಿಂಗಡಿಸಲಾಗಿದೆ.

ಫೇಸ್‌ಬುಕ್ ಸ್ಟೇಟಸ್ ಏನು ಹೇಳುತ್ತದೆ?

1. ನಿಮ್ಮ ಸಂಗಾತಿಯ ಬಗ್ಗೆ ಪ್ರೇಯಸಿ/ಪ್ರಿಯಕರನ ಬಗ್ಗೆಯೇ ನೀವು ಸಿಕ್ಕಾಪಟ್ಟೆ ಸ್ಟೇಟಸ್ ಹಾಕುತ್ತಿದ್ದರೆ..

ಇಂಥಾ ಸ್ಟೇಟಸ್‌ಗಳು ನಿಮ್ಮಲ್ಲಿರುವ ಅಭದ್ರತೆ ಮತ್ತು ಆತ್ಮ ವಿಶ್ವಾಸದ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ. ತನ್ನ ಸಂಗಾತಿ ನನ್ನ ಬಿಟ್ಟು ಹೋದರೆ ಎಂಬ ಭಯ ನಿಮ್ಮಲ್ಲಿರುತ್ತದೆ. ಒಬ್ಬ ವ್ಯಕ್ತಿಗೆ ಅಸುರಕ್ಷಿತ ಭಾವ ಕಾಡುವಾಗ, ತನ್ನ ಸಂಬಂಧವನ್ನು ಪ್ರತಿಫಲಿಸುವ ಪೋಸ್ಟ್ ಗಳನ್ನು ಆತ ಹಾಕುತ್ತಾನಂತೆ


2. ಏನು ತಿಂದರೂ, ಆ ವಸ್ತುಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ಮಾಡುವವರು

ತಾವು ಸೇವಿಸುವ ಆಹಾರ ಅಥವಾ ವ್ಯಾಯಾಮದ ಪೋಸ್ಟ್ ಹಾಕುವವರು, ಅದರಿಂದ ತಾನೇನು ಪಡೆದು ಪಡೆದೆ ಎಂಬುದನ್ನು ಹೇಳುವವರು ಆತ್ಮರತಿ ಇಷ್ಟ ಪಡುವವರಾಗಿದ್ದಾರೆ ಎಂದು ಅಧ್ಯಯನ ತಂಡ ಹೇಳಿದೆ. ಗರಿಷ್ಠ ಲೈಕ್ ಗಳಿಸುವ ಮೂಲಕ ಇನ್ನೊಬ್ಬರನ್ನು ತಮ್ಮತ್ತ ಸೆಳೆಯುವುದು ಇವರ ಉದ್ದೇಶ. ಪರೀಕ್ಷೆಯಲ್ಲಿ ವಿಜಯಿಗಳಾದಾಗ ಅಥವಾ ಇನ್ಯಾವುದೋ ಸಾಧನೆ ಮಾಡಿದಾಗ ಅದರ ಬಗ್ಗೆ ಬರೆದ ಪೋಸ್ಟ್‌ಗಳಿಗೆ ಹೆಚ್ಚಿನ ಲೈಕ್  ಸಿಗುತ್ತದೆ. ಇಂಥಾ ವೈಯಕ್ತಿಕ ಸಾಧನೆಗಳನ್ನು ಮತ್ತೆ ಮತ್ತೆ ಹಾಕುವುದಕ್ಕೂ ಇದೇ ಪ್ರೇರಣೆಯಾಗಿರುತ್ತದೆ.


3. ಜಗತ್ತಿನ ವಿಷಯಗಳ ಬಗ್ಗೆ ಪೋಸ್ಟ್ ಹಾಕುವವರು

ಬೌದ್ಧಿಕ ಚಿಂತನೆಗಳ ಬಗ್ಗೆ ಪೋಸ್ಟ್ ಹಾಕುವವರು ಓಪನ್ ಮೈಂಡೆಡ್ ಜನರಾಗಿರುತ್ತಾರೆ. ಅವರಿಗೆ ಹೊಸ ವಿಷಯಗಳನ್ನು ಅರಿಯುವ ಕುತೂಹಲವಿರುತ್ತದೆ. ಸಮಕಾಲೀನ ಸಂಗತಿಗಳ ಬಗ್ಗೆ, ಸಂಶೋಧನೆಗಳ ಬಗ್ಗೆ ಅಥವಾ ತಮ್ಮ ನಿಲುವುಗಳ ಬಗ್ಗೆ ಧೈರ್ಯವಾಗಿ ಹೇಳುವವರು ಮುಕ್ತ ಮನಸ್ಸಿನವರಾಗಿರುತ್ತಾರೆ


5. ತಮ್ಮ ಮಕ್ಕಳ ಬಗ್ಗೆಯೇ ಹೆಚ್ಚಾಗಿ ಪೋಸ್ಟ್ ಮಾಡುವವರು

ಇವರು ಇನ್ನೊಬ್ಬರಿಗಿಂತ ತಮ್ಮ ಬಗ್ಗೆಯೇ ಹೆಚ್ಚಿನ ಕಾಳಜಿ ವಹಿಸುವವರಾಗಿದ್ದಾರೆ ಅವರು. ತಮ್ಮ ಮಕ್ಕಳ ಬಗ್ಗೆ ತುಸು ಹೆಚ್ಚು ಕಾಳಜಿ ವಹಿಸುವವರು ಇವರಾಗಿದ್ದು, ನೋಡಿ, ನಮ್ಮ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತಿದ್ದೇವೆ ಎಂಬುದನ್ನು ಇನ್ನೊಬ್ಬರಿಗೆ ತೋರಿಸಿಕೊಡುವುದು ಇವರ ಉದ್ದೇಶವಾಗಿರುತ್ತದೆ ಎಂದು ಅಧ್ಯಯನ ತಂಡ ಅಭಿಪ್ರಾಯ ಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com