ಮೂತಿಗೆ 'ಪಂಚ್‌' ಕೊಟ್ರೆ ಮಳೆ ಬರುತ್ತೆ!

ಇವರ್ಯಾರೂ ಮೇರಿ ಕೋಂ ಅಲ್ಲ. ಅವಳಂತೆಯೇ ಪಂಚ್ ಬಾರಿಸ್ತಾರೆ ಆದರೂ ಒಲಿಂಪಿಕ್ಸ್‌ಗೇನೂ ಬರೋದಿಲ್ಲ. ಇವರು ಮೆಕ್ಸಿಕೋ ಮೇರಿಯರು!...
ಪರಸ್ಪರ ಪಂಚ್ ನಲ್ಲಿ ತೊಡಗಿರುವ ಮಹಿಳೆಯರು
ಪರಸ್ಪರ ಪಂಚ್ ನಲ್ಲಿ ತೊಡಗಿರುವ ಮಹಿಳೆಯರು

ಇವರ್ಯಾರೂ ಮೇರಿ ಕೋಂ ಅಲ್ಲ. ಅವಳಂತೆಯೇ ಪಂಚ್ ಬಾರಿಸ್ತಾರೆ ಆದರೂ ಒಲಿಂಪಿಕ್ಸ್‌ಗೇನೂ ಬರೋದಿಲ್ಲ. ಇವರು ಮೆಕ್ಸಿಕೋ ಮೇರಿಯರು! ಆ ದೇಶದ ಗಿರ್ರೇರೋ ಪ್ರಾಂತ್ಯದ ನಾಹುವಾ ಹಳ್ಳಿಯಲ್ಲಿ ಇವರು ಮುಖಮೂತಿ ನೋಡದೆ ಪರಸ್ಪರ ಪಂಚ್ ಬಾರಿಸಿಕೊಳ್ತಾರೆ. ಪ್ರತಿ ವರ್ಷದ ಈ ಆಚರಣೆ ಮೊನ್ನೆಯೂ ನಡೆಯಿತು.

ಇಲ್ಲಿ ಹೆಣ್ಮಕ್ಕಳು ಪರಸ್ಪರ ಪಂಚ್ ಬಾರಿಸ್ಕೊಂಡು ರಕ್ತ ಚೆಲ್ಲಿಕೊಳ್ಳಬೇಕು. ಆ ರಕ್ತವನ್ನು ಬಕೆಟ್ಟಿನಲ್ಲಿ ನೀರಿನೊಂದಿಗೆ ಮಿಕ್ಸ್ ಮಾಡಿ, ಹೊಲಕ್ಕೆ ಸುರಿಯಬೇಕು. ಹೀಗೆ ಮಾಡಿದ್ರಷ್ಟೇ ಇಲ್ಲಿ ಮಳೆ ಬರೋದು ಅನ್ನೋದು ಈ ಬುಡಕಟ್ಚು ಕ್ಯಾಥೋಲಿಕ್ ಪಂಥದವರ ನಂಬಿಕೆ.

'ಬ್ಲಡಿ ಫಸ್ಟ್‌ಫೈಟ್‌' ಎಂಬ ಹೆಸರಿನ ಈ ಹಬ್ಬದಂದು ಮಹಿಳೆಯರು ಬೇಗನೆ ಏಳುತ್ತಾರಂತೆ. ಬೆಳಗ್ಗೆ ಮುಂಚೆಯೇ ಶಕ್ತಿದಾಯಕ ಆಹಾರಗಳನ್ನು ತಯಾರಿಸುತ್ತಾರೆ. ಟರ್ಕಿ ಕೋಳಿ, ಚಿಕನ್, ರೈಸ್, ಬೇಯಿಸಿದ ಮೊಟ್ಟೆ, ಮಟನ್-ಹೀಗೆ ಮಾಂಸಾಹಾರವನ್ನು ಹೊಲದಲ್ಲಿಯೇ ಸಿದ್ಧಪಡಿಸಿ, ಚೆನ್ನಾಗಿ ತಿನ್ನುತ್ತಾರೆ.

ಈ ಹೊಲ ಇರುವುದು ನಾಹುವಾ ಮತ್ತು ಎಲ್ ರಾಂಚೋ ಲಾಸ್ ಲೋಮಸ್ ಎಂಬ ಎರಡು ಹಳ್ಳಿಗಳ ನಡುವೆ. ಹೀಗೆ ಹೊಡೆದಾಡಿಕೊಳ್ಳುವಾಗ ಯಾರು ಗೆಲ್ಲುತ್ತಾರೆಂಬುದು ಮುಖ್ಯವಾಗಿರುವುದಿಲ್ಲ. ಯಾರೆಷ್ಟು ರಕ್ತವನ್ನು ನೆಲಕ್ಕೆ ಸುರಿಸುತ್ತಾರೆಂಬುದು ಮುಖ್ಯವಾಗುತ್ತದಂತೆ. ಇದೆಂಥ ಆಚರಣೆ ಮಾರ್ರೆ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com