ದೃಷ್ಟಿಯು ನಿನ್ನದೆ ಆರದಿರಲಿ ಬೆಳಕು

ಪ್ರತಿ ಬಾರಿಯಂತೆ ಬರುವ ಬೆಳಕಿನ ಹಬ್ಬ ನಿಮ್ಮ ಬದುಕಿನ ಹಬ್ಬವನ್ನು ಕಿತ್ತುಕೊಳ್ಳಬಾರದು. ದೀಪಾವಳಿ ಮನೆಯಲ್ಲಿ ಹೊಸ ಬೆಳಕ ಮೂಡಿಸುತ್ತದೆ. ಆದರೆ, ಇದರ ಆಚರಣೆ ಮಾಡುವಾಗ ಕೆಲವರು ಜೀವನವಿಡೀ ಕತ್ತಲಲ್ಲಿ ಕಳೆಯುವಂತೆ ಮಾಡಿಕೊಳ್ಳುತ್ತಾರೆ...
ದೃಷ್ಟಿಯು ನಿನ್ನದೆ ಆರದಿರಲಿ ಬೆಳಕು
ದೃಷ್ಟಿಯು ನಿನ್ನದೆ ಆರದಿರಲಿ ಬೆಳಕು
Updated on

ಪ್ರತಿ ಬಾರಿಯಂತೆ ಬರುವ ಬೆಳಕಿನ ಹಬ್ಬ ನಿಮ್ಮ ಬದುಕಿನ ಹಬ್ಬವನ್ನು ಕಿತ್ತುಕೊಳ್ಳಬಾರದು. ದೀಪಾವಳಿ ಮನೆಯಲ್ಲಿ ಹೊಸ ಬೆಳಕ ಮೂಡಿಸುತ್ತದೆ. ಆದರೆ, ಇದರ ಆಚರಣೆ ಮಾಡುವಾಗ ಕೆಲವರು ಜೀವನವಿಡೀ ಕತ್ತಲಲ್ಲಿ ಕಳೆಯುವಂತೆ ಮಾಡಿಕೊಳ್ಳುತ್ತಾರೆ.

ಪಟಾಕಿ ಸಿಡಿಸುವ ವೇಳೆ ಜಾಗ್ರತೆ ವಹಿಸಿದರೆ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ದೀಪಾವಳಿಯಲ್ಲಿ ಹೆಚ್ಚಿನ ಜನ ಪಟಾಕಿ ಸಿಡಿಸಿದ ಘಟನೆಗಳಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ಕಿವಿಯ ತಮಟೆಗೆ ಪೆಟ್ಟಾಗುವುದರಿಂದ ಶಬ್ದ ಗ್ರಹಣ ಶಕ್ತಿ ದುರ್ಬಲ ಸಾಧ್ಯತೆಗಳಿರುತ್ತವೆ. ಮಕ್ಕಳು ಆಸಕ್ತಿ ಮತ್ತು ಖುಷಿಯಿಂದ ಪಟಾಕಿ ಸಿಡಿಸುವ ದಿನ ಸಂಭ್ರಮ ತರಬೇಕೇ ವಿನಃ ಕತ್ತಲ ದಿನವಾಗಿ ಪರಿಣಮಿಸಬಾರದು.

ಹೆಚ್ಚಿನ ಪಟಾಕಿ ದುರಂತಗಳು ಮಕ್ಕಳಲ್ಲಿಯೇ ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡುವ ಜೊತೆಗೆ ಎಚ್ಚರಿಕೆ ವಹಿಸಿದರೆ ಯಾವುದೋ ಒಂದು ಸಂತಸದ ಕ್ಷಣಕ್ಕೆ ಜೀವನಪೂರ್ತಿ ನರಳುವಂತಾಗಬಾರದು. ಇಂತಹ ಸಂತಸಮಯ ಸಂದರ್ಭ ಜೀವನಪೂರ್ತಿ- ಯಾಗಿರಬೇಕು ಎಂದಾದರೆ ಪಟಾಕಿ ಹಚ್ಚುವಾಗ ಎಚ್ಚರಿಕೆ ವಹಿಸಲೇಬೇಕು. ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಜೊತೆಯಲ್ಲಿದ್ದು ಮಾರ್ಗದರ್ಶನ ನೀಡಬೇಕು.

ಪಟಾಕಿ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಹೀಗೆ ಕಳೆದ ವರ್ಷವೂ ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಮಕ್ಕಳಿಗೆ ಕಣ್ಣಿಗೆ ಸಂಬಂಧಿಸಿದ ಅನಾಹುತಗಳಾಗಿದ್ದವು. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಸುರಕ್ಷತೆ ದೃಷ್ಟಿಯಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಗರ ಪೊಲೀಸ್ ಆಯುಕ್ತರು ಸಲಹೆ ನೀಡಿದ್ದು ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಾಗ ಹೇಗಿರಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಏನು ಮಾಡಬೇಕು?

  • ದೊಡ್ಡಮಟ್ಟದ ಅಪಾಯಕಾರಿ ಪಟಾಕಿಗಳನ್ನು ಖರೀದಿಸದಿರುವುದು ಒಳಿತು
  • ಪಟಾಕಿ ಸಿಡಿಸಿ ಪರಿಸರ ಹಾನಿ ಮಾಡುವ ಬದಲು ಹಣತೆಗಳನ್ನು ಹಚ್ಚಿ ಹಬ್ಬ ಆಚರಿಸಿ
  • ಕಿವಿ ಹಾನಿ ತಪ್ಪಿಸಲು ಕಿವಿ ಪ್ಲಗ್ ಗಳನ್ನು ಉಪಯೋಗಿಸಿ
  • ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳು ಪಟಾಕಿ ಸಿಡಿಸಲಿ ಪಟಾಕಿಯನ್ನು ಕೈಯಲ್ಲಿ ಹಿಡಿದು ಬೆಂಕಿ ಹಚ್ಚಬೇಡಿ.
  • ಪಟಾಕಿ ಸಿಡಿಸುವಾಗ ಸಡಿಲ ಹಾಗೂ ನೈಲಾನ್ ಬಟ್ಟೆ ಬದಲು ಹತ್ತಿ ಬಟ್ಟೆ ಧರಿಸಿ
  • ಕಿರಿದಾದ ಪ್ರದೇಶದಲ್ಲಿ ಪಟಾಕಿಗಳನ್ನು ಹಚ್ಚದಿರಿ, ಕನಿಷ್ಠ ಒಂದು 2-3 ಅಡಿ ದೂರ ಅಂತರ ಕಾಪಾಡಿಕೊಳ್ಳಿ, ತಪ್ಪದೇ ಪಾದರಕ್ಷೆ ಧರಿಸಿ
  • ಬೆಂಕಿಪೊಟ್ಟಣ ಮತ್ತು ಲೈಟರ್ ಗಳಿಂದ ಪಟಾಕಿ ಹಚ್ಚದಿರಿ, ಮನೆಯಲ್ಲಿ ಪಟಾಕಿ ತಂದು ಅಗರಬತ್ತಿ, ಬೆಂಕಿಪಟ್ಟಣದ ಬಳಿ ಇಡದಿದ್ದರೆ ಉತ್ತಮ
  • ಒಮ್ಮೆ ಹಚ್ಚಿದ ಪಟಾಕಿಗಳು ಆರಿದರೆ, ಮತ್ತೆ ಹಚ್ಚದೆ ಅದರಿಂದ ದೂರವಿರಿ.
ಪೊಲೀಸ್ ಇಲಾಖೆ ಸಲಹೆ
  • ಕಣ್ಣಿಗೆ ಪೆಟ್ಟಾಗದ ರೀತಿಯಲ್ಲಿ ಎಚ್ಚರದಿಂದ ಪಟಾಕಿ ಸಿಡಿಸಿ.
  • ಆಸ್ಪತ್ರೆ, ದೇವಸ್ಥಾನ, ಚರ್ಚ್ , ಮಸೀದಿಗಳ ಬಳಿ ಪಟಾಕಿ ಸಿಡಿಸಬಾರದು
  • ಅನ್ಯ ಕೋಮಿನ ಜನರಿರುವ ಸ್ಥಳದಲ್ಲಿ ವಿನಾಕಾರಣ ಪಟಾಕಿ ಸಿಡಿಸಬಾರದು
  • ರೋಗಿಗಳಿಗೆ ತೊಂದರೆ ಉಂಟಾಗದಂತೆ ಕಡಿಮೆ ಶಬ್ದದ ಪಟಾಕಿ ಬಳಸಿ
  • ಓಡಾಟದ ಸದ್ಧಳ, ಸಂಚಾರಕ್ಕೆ ಅಡೆತಡೆಯುಂಟಾಗದಿರಲಿ
  • ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಪಟಾಕಿ ಸಿಡಿಸಬಾರದು
  • ಅನುಮಾನಾಸ್ಪದ ವ್ಯಕ್ತಿ, ವಸ್ತುಗಳ ಬಗ್ಗೆ ಸದ್ಧಳೀಯ ಪೊಲೀಸರಿಗೆ ತಿಳಿಸಿ
  • ಪೊಲೀಸರು ತಮ್ಮ ಕರ್ತವ್ಯ ಸೂಕ್ತ ರೀತಿಯಲ್ಲಿ ಪಾಲಿಸಿ ಕಾನೂನು
  • ಸುವ್ಯವಸ್ಧೆಯನ್ನು ಕಾಪಾಡುವಲ್ಲಿ ಸಾರ್ವಜನಿಕರು ಸಹಕರಿಸಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com