ಆಸ್ಟ್ರೇಲಿಯಾದಲ್ಲಿ ೪೦ ಕೆಜಿ ತುಪ್ಪಟ ನೀಡಿದ ಒಂದೆ ಕುರಿ!

೪೦.೪೫ ಕೆಜಿ ತೂಗುವ ತುಪ್ಪಟ ನೀಡುವ ಮೂಲಕ ಆಸ್ಟ್ರೇಲಿಯಾದ ಕುರಿಯೊಂದ ನೂತನ ವಿಶ್ವದಾಖಲೆ ಮಾಡಿದೆ ಎಂದು ಗುರುವಾರ ಮಾಧ್ಯಮವೊಂದು ವರದಿ
೪೦ ಕೆಜಿ ತುಪ್ಪಟ ನೀಡಿದ ಆಸ್ಟ್ರೇಲಿಯಾ ಕುರಿ
೪೦ ಕೆಜಿ ತುಪ್ಪಟ ನೀಡಿದ ಆಸ್ಟ್ರೇಲಿಯಾ ಕುರಿ

ಕ್ಯಾನ್ಬೆರ್ರಾ: ೪೦.೪೫ ಕೆಜಿ ತೂಗುವ ತುಪ್ಪಟ ನೀಡುವ ಮೂಲಕ ಆಸ್ಟ್ರೇಲಿಯಾದ ಕುರಿಯೊಂದ ನೂತನ ವಿಶ್ವದಾಖಲೆ ಮಾಡಿದೆ ಎಂದು ಗುರುವಾರ ಮಾಧ್ಯಮವೊಂದು ವರದಿ ಮಾಡಿದೆ.

ಕ್ರಿಸ್ ಎಂದು ಹೆಸರಿಸಲಾಗಿರುವ ಈ ಕುರಿ ಬುಧವಾರ ಕಂಡುಬಂದಿತ್ತು ಮತ್ತು ೪೦.೪೫ ಕೆಜಿ ಉಣ್ಣೆಯನ್ನು ತೆಗೆಯುವ ಅಪಾಯಕಾರಿ ಕಾರ್ಯಕ್ಕೆ ತುತ್ತಾಯಿತು ಎಂದು ಎಬಿಸಿ ವರದಿಮಾಡಿದೆ.

ಈ ಹಿಂದೆ ನ್ಯೂಜೀಲ್ಯಾಂಡಿನಲ್ಲಿ ಶ್ರೆಕ್ ಎಂಬ ಕುರಿಯಿಂದ ತೆಗೆದಿದ್ದ ೨೭ ಕೆಜಿ ತುಪ್ಪಟವೇ ದಾಖಲೆಯಾಗಿತ್ತು.

ಕುರಿಗಳಿಗೆ ಕಾಲ ಕಾಲಕ್ಕೆ ತುಪ್ಪಟವನ್ನು ಸವರದೇ ಹೋದರೆ ಗಂಭೀರ ರೋಗಕ್ಕೆ ತುತ್ತಾಗುತ್ತವೆ ಎಂದು ಆಸ್ಟ್ರೇಲಿಯಾದ ಪ್ರಾಣಿ ಹಿಂಸಾ ವಿರೋಧಿ ರಾಯಲ್ ಸೊಸೈಟಿ (ಆರ್ ಎಸ್ ಪಿ ಸಿ ಎ) ತಿಳಿಸಿದೆ.

ತುಪ್ಪಟದ ತೂಕದಿಂದ ಈ ಕುರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದಿರುವ ಆರ್ ಎಸ್ ಪಿ ಸಿ ಎ, ಐದಾರು ವರ್ಷಗಳಿಂದ ಈ ಕುರಿಯ ತುಪ್ಪಟವನ್ನು ಸವರಲಾಗಿಲ್ಲ ಎಂದು ಅಂದಾಜು ಮಾಡಿದೆ.

ಈ ಕುರಿಯ ಮಾಲೀಕ ಸಿಗದಿದ್ದರೆ ಅದನ್ನು ದತ್ತು ಸ್ವೀಕರಿಸುವುದಾಗಿ ಆರ್ ಎಸ್ ಪಿ ಸಿ ಎ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com