ಶೇಕ್ಸಸ್ಪಿಯರ್ ಜಯಂತಿ-ಪುಣ್ಯ ತಿಥಿ ನೆನಪಿಗಾಗಿ ಗೂಗಲ್ ಡೂಡಲ್

ವಿಶ್ವವಿಖ್ಯಾತ ಲೇಖಕ ವಿಲಿಯಂ ಶೇಕ್ಸಸ್ಪಿಯರ್ ನೆನಪಿಗಾಗಿ ಇಂದು ಸರ್ಚ್ ದೈತ್ಯ ಗೂಗಲ್, ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.
ಶೇಕ್ಸಸ್ಪಿಯರ್ ಜಯಂತಿ-ಪುಣ್ಯ ತಿಥಿ ನೆನಪಿಗಾಗಿ ಗೂಗಲ್ ಡೂಡಲ್
ಶೇಕ್ಸಸ್ಪಿಯರ್ ಜಯಂತಿ-ಪುಣ್ಯ ತಿಥಿ ನೆನಪಿಗಾಗಿ ಗೂಗಲ್ ಡೂಡಲ್

ನವದೆಹಲಿ: ವಿಶ್ವವಿಖ್ಯಾತ ಲೇಖಕ ವಿಲಿಯಂ ಶೇಕ್ಸಸ್ಪಿಯರ್ ನೆನಪಿಗಾಗಿ ಇಂದು ಸರ್ಚ್ ದೈತ್ಯ ಗೂಗಲ್, ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.

ಏಪ್ರಿಲ್ ೨೩ ೧೫೬೪ ರಂದು ಜನಿಸಿ, ಇದೇ ದಿನ ೧೬೧೬ ರಲ್ಲಿ ನಿಧನರಾಗಿದ್ದ ಶೇಕ್ಸಸ್ಪಿಯರ್ ವಿಶ್ವದ ಶ್ರೇಷ್ಟ ನಾಟಕ ರಚನಕಾರರಲ್ಲಿ ಒಬ್ಬರು.  ೫೨ನೆ ವಯಸ್ಸಿಗೆ ನಿಧರಾಗಿದ್ದ ಶೇಕ್ಸಸ್ಪಿಯರ್ ನ ೪೦೦ ನೆ ಪುಣ್ಯತಿಥಿ ಇಂದು.

ಶೇಕ್ಸಸ್ಪಿಯರ್ ನ ನಾಟಕಗಳ ಹಲವು ಪಾತ್ರಗಳನ್ನು ಡೂಡಲ್ ನಲ್ಲಿ ಬಿಡಿಸುವ ಮೂಲಕ ಗೌರವ ಸಲ್ಲಿಸಲಾಗಿದೆ.

ಮೆಕ್ಬೆತ್, ಹ್ಯಾಮ್ಲೆಟ್, ಜೂಲಿಯಸ್ ಸೀಸರ್, ಕಿಂಗ್ ಲಿಯರ್ ಶೇಕ್ಸಸ್ಪಿಯರ್ ನಾಟಕಗಳಲ್ಲಿ  ಮಹತ್ವವಾದ ಕೆಲವು. ಇವರನ್ನು ಅತಿ ಪ್ರಭಾವಿ ಇಂಗ್ಲಿಶ್ ಬರಹಗಾರರಾಗಿ ಗುರುತಿಸಲಾಗುತ್ತದೆ.

ಇದೇ ದಿನವನ್ನು ವಿಶ್ವ ಪುಸ್ತಕ ದಿನವಾಗಿ ಕೂಡ ಆಚರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com