
ಸಾಕು ನಾಯಿಗಳನ್ನು ಕಂಡರೆ ಮಾಲೀಕರು ಅದನ್ನು ಮುದ್ದು ಮಾಡುವುದು, ಪ್ರೀತಿಯಿಂದ ತಬ್ಬಿಕೊಳ್ಳುವುದನ್ನು ಮಾಡುತ್ತಿರುತ್ತಾರೆ. ಆದರೆ, ನಾಯಿಗಳಿಗೆ ತಬ್ಬಿಕೊಳ್ಳುವುದು ಎಂದರೆ ಇಷ್ಟವಾಗುವುದಿಲ್ಲವಂತೆ...!
ಹೀಗೆಂದು ಸಂಶೋಧನೆಯೊಂದು ಹೇಳಿದ್ದು, ಪ್ರಾಣಿಗಳ ಮನರೋಗಶಾಸ್ತ್ರಜ್ಞರು ಹೇಳುವ ಪ್ರಕಾರ, ಮಾಲೀಕರಾಗಲಿ ಅಥವಾ ಇನ್ನಾರೇ ಆದರೂ ನಾಯಿಗಳನ್ನು ತಬ್ಬಿಕೊಂಡರೆ ಅವುಗಳಿಗೆ ಒತ್ತಡ ಹೇರಿದಂತಾಗುತ್ತದೆ. ಮಾಲೀಕರ ಈ ವರ್ತನೆಯಿಂದ ಬೇಸರಗೊಂಡು ನಾಯಿಗಳು ಓಡಿಹೋಗಲು ನೋಡುತ್ತವೆ ಎಂದು ಹೇಳಿದ್ದಾರೆ.
ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಮನೋವಿಜ್ಞಾನ ಪ್ರಾಧ್ಯಾಪಕ ಹಾಗೂ ತಜ್ಞರಾಗಿರುವ ಡಾ. ಸ್ಟೇನ್ಲೀ ಕೊರೆನ್ ಅವರು ಈ ಅಧ್ಯಾಯನವನ್ನು ನಡೆಸಿದ್ದಾರೆ. ಅಧ್ಯಾಯನಕ್ಕೆ ಇವರು 25ಕ್ಕೂ ಹೆಚ್ಚು ತಬ್ಬಿಕೊಂಡಿರುವ ನಾಯಿಗಳ ಫೋಟೋಗಳನ್ನು ಬಳಸಿಕೊಂಡಿದ್ದಾರೆ. ಇದರಂತೆ ಸಂಶೋಧನೆಯಲ್ಲಿ ತಬ್ಬಿಕೊಂಡ ವೇಳೆಯಲ್ಲಿ ನಾಯಿಗಳು ಒತ್ತಡ ರೀತಿಯಲ್ಲಿರುವುದು ಕಂಡು ಬಂದಿದೆ. ಒತ್ತಡದಲ್ಲಿದ್ದ ನಾಯಿಗಳು ಕೆಲವೊಮ್ಮೆ ಮಾಲೀಕರನ್ನು ದ್ವೇಷಿಸಲು ಆರಂಭಿಸುತ್ತದೆ. ಇದರ ಕೋಪದಲ್ಲಿ ಕಚ್ಚುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದ್ದಾರೆ.
ಒತ್ತಡದಲ್ಲಿದ್ದಾಗ ನಾಯಿಗಳು ತಮ್ಮ ಕಿವಿಗಳನ್ನು ಕೆಳಗೆ ಮಾಡಿರುತ್ತವೆ. ಅರ್ಧ ಕಣ್ಣು ತೆಗೆದಿರುತ್ತದೆ ಅಥವಾ ನೇರವಾಗಿ ನಮ್ಮ ಕಣ್ಣುಗಳನ್ನು ನೋಡುವುದಿಲ್ಲ. ಒಂದು ವೇಳೆ ನಾಯಿಗಳು ಪೂರ್ಣವಾಗಿ ಕಣ್ಣು ಮುಚ್ಚಿ ನಾಲಿಗೆಯನ್ನು ಮುಂದೆ ಹಾಕುತ್ತಿದ್ದರೆ, ಅತಂಕದಲ್ಲಿದೆ ಎಂದರ್ಥವೆಂದು ಸಂಶೋಧನೆ ಹೇಳಿದೆ.
81.6ರಷ್ಟು ಫೋಟೋಗಳಲ್ಲಿ ನಾಯಿಗಳು ಒತ್ತಡದಲ್ಲಿರುವ ಸ್ಥಿತಿಯಲ್ಲಿಯೇ ಕಂಡು ಬಂದಿದೆ. ಕೇವಲ 7.6ರಷ್ಟು ಫೋಟೋಗಳಲ್ಲಿ ಮಾತ್ರ ನಾಯಿಗಳು ಆರಾಮವಾಗಿರುವುದು ಕಂಡಬಂದಿದೆ. ಇನ್ನು 10.8ರಷ್ಟು ಫೋಟೋಗಳಲ್ಲಿ ಮಧ್ಯಮದಲ್ಲಿ ಅಂದರೆ, ಅರಾಮವಾಗಿಯೂ ಅಲ್ಲ, ಒತ್ತಡದಲ್ಲಿಯೂ ಅಲ್ಲ ಎಂಬಂತಿದೆ ಕೊರೆನ್ ಹೇಳಿದ್ದಾರೆ.
ಇನ್ನು ಈ ಸಂಶೋಧನೆಯನ್ನು ಕೆನ್ನಲೆ ಕ್ಲಬ್ ಮತ್ತು ಬಟ್ಟರ್ ಡಾಗ್ಸ್ ಆ್ಯಂಡ್ ಆ್ಯಂಪ್, ಕ್ಯಾಟ್ ಹೋಮ್ ನಂತಹ ಪ್ರಾಣಿ ತಜ್ಞ ಸಂಸ್ಥೆಗಳು ಒಪ್ಪಿಕೊಂಡಿದ್ದು, ಮಾಲೀಕರು ತಮ್ಮ ಸಾಕು ಪ್ರಾಣಿಗಳನ್ನು ಮಕ್ಕಳಂತೆ ನೋಡಿಕೊಳ್ಳಲು ಇಚ್ಛಿಸುತ್ತಾರೆ. ಆದರೆ, ಈ ಪ್ರೀತಿ ಪ್ರಾಣಿಗಳಿಗೆ ಇಷ್ಟವಾಗುವುದಿಲ್ಲ. ತಬ್ಬಿಕೊಂಡು ಪ್ರೀತಿ ತೋರಿಸುವುದು ಮನುಷ್ಯರಿಗೆ ಸರಿ ಹೊಂದುತ್ತದೆ. ಆದರೆ, ನಾಯಿಗಳಿಗೆ ಇಂದು ಅಹಿತಕರವೆನಿಸುತ್ತದೆ ಎಂದು ಹೇಳಿದೆ.
ನಾಯಿಗಳನ್ನು ಕುಟುಂಬದ ಸದಸ್ಯನಾಗಿ ನೋಡಬಹುದು. ಆದರೆ, ಅದನ್ನು ಮನುಷ್ಯನಂತೆ ನೋಡಬಾರದು, ನಾಯಿಗಳಿಗೆ ಅದರದ್ದೇ ಆದ ಕೆಲವು ಪ್ರತಿಕ್ರಿಯೆಗಳಿರುತ್ತವೆ. ತಬ್ಬಿಕೊಳ್ಳುವುದನ್ನು ನಾಯಿಗಳು ಇಷ್ಟಪಡುವುದಿಲ್ಲ. ನಾಯಿಗಳು ಮನುಷ್ಯರೊಂದಿಗೆ ವೇಗವಾಗಿ ಬೆರೆತುಕೊಳ್ಳುವ ಪ್ರಾಣಿ ಹೌದು, ಮನುಷ್ಯರಂತೆ ಅವುಗಳೂ ಪ್ರೀತಿ ಮಾಡುತ್ತವೆ. ಆದರೆ, ಮಾಲೀಕರು ತಮ್ಮ ಪ್ರಾಣಿಗಳು ಯಾವಾಗ ಒತ್ತಡದಲ್ಲಿರುತ್ತವೆ, ಆತಂಕದಲ್ಲಿರುತ್ತವೆ ಎಂಬುದನ್ನು ಗುರ್ತಿಸಬೇಕೆಂದು ಕೆನ್ನೆಲ್ ಕ್ಲಬ್ ಹೇಳಿದೆ.
Advertisement