ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಜನವರಿ 6, ಸಂಗೀತ ಮಾಂತ್ರಿಕ ಎ. ಆರ್ ರೆಹಮಾನ್ ಅವರ ಹುಟ್ಟುಹಬ್ಬ. ಮೊಜಾರ್ಟ್ ಆಫ್ ಮದ್ರಾಸ್ ಎಂದೇ ಕರೆಯಲ್ಪಡುವ ಎ. ಆರ್ ರೆಹಮಾನ್ ಹುಟ್ಟಿದ್ದು ಚೆನ್ನೈನಲ್ಲಿ...
ಎ. ಆರ್ ರೆಹಮಾನ್
ಎ. ಆರ್ ರೆಹಮಾನ್
ಜನವರಿ 6, ಸಂಗೀತ ಮಾಂತ್ರಿಕ ಎ. ಆರ್ ರೆಹಮಾನ್ ಅವರ ಹುಟ್ಟುಹಬ್ಬ. ಮೊಜಾರ್ಟ್ ಆಫ್ ಮದ್ರಾಸ್ ಎಂದೇ ಕರೆಯಲ್ಪಡುವ ಅಲ್ ರಾಖಾ ರೆಹಮಾನ್ (ಎ. ಆರ್ ರೆಹಮಾನ್ )ಹುಟ್ಟಿದ್ದು ಚೆನ್ನೈನಲ್ಲಿ.   1967ರಲ್ಲಿ ಜನಿಸಿದ ರೆಹಮಾನ್‌ನ ಮೊದಲ ಹೆಸರು ಎ.ಎಸ್ ದಿಲೀಪ್ ಕುಮಾರ್. ಸಂಗೀತವನ್ನೇ ಉಸಿರಾಗಿಸಿಕೊಂಡ ರೆಹಮಾನ್, ಭಾರತೀಯ ಸಿನಿಮಾ ಸಂಗೀತದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು. ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು
  • ಕೀಬೋರ್ಡ್ ನುಡಿಸುವುದರಲ್ಲಿ ರೆಹಮಾನ್ ಎತ್ತಿದ ಕೈ. ಆದರೆ ಬಾಲ್ಯದಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಬೇಕೆಂದು ರೆಹಮಾನ್ ಬಯಸಿದ್ದರು. 
  • ಬಾಲ್ಯದಲ್ಲಿ ರೆಹಮಾನ್ ನುಡಿಸುತ್ತಿದ್ದ ಕೀ ಬೋರ್ಡ್ ಈಗಲೂ ಚೆನ್ನೈ ಸ್ಟುಡಿಯೋದಲ್ಲಿದೆ.
  • ರೆಹಮಾನ್ ಮತ್ತು ಆತನ ಮಗನ ಹುಟ್ಟುಹಬ್ಬ ಒಂದೇ ದಿನ, ಜನವರಿ 6
  • ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಸಂಗೀತಕ್ಕಾಗಿ ರೆಹಮಾನ್‌ಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಇದಲ್ಲದೆ 125 ಅವರ್ಸ್, ಲಾರ್ಡ್ ಆಫ್ ವಾರ್ ಎಂಬೆರಡು ಹಾಲಿವುಡ್ ಚಿತ್ರಗಳಿಗೆ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದರು.
  • ಆಸ್ಕರ್ ಪ್ರಶಸ್ತಿ ಲಭಿಸಿದ ಸ್ಲಂ ಡಾಗ್ ಮಿಲೇನಿಯರ್ ಚಿತ್ರ ಜೈ ಹೋ ಹಾಡನ್ನು ಸಲ್ಮಾನ್ ಖಾನ್ ರ ಯುವರಾಜ್ ಸಿನಿಮಾಗಾಗಿ ರೆಹಮಾನ್ ಸಂಯೋಜನೆ ಮಾಡಿದ್ದರು.
  • 4 ರಾಷ್ಟ್ರ ಪ್ರಶಸ್ತಿ, 15 ಫಿಲ್ಮ್ ಫೇರ್ ಅವಾರ್ಡ್, 14 ಫಿಲ್ಮ್ ಫೇರ್ ಸೌಥ್ ಅವಾರ್ಡ್‌ಗಳು ಇವರಿಗೆ ಸಿಕ್ಕಿದೆ.
  • 138 ಬಾರಿ ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿದ್ದ ರೆಹಮಾನ್ ಅವರಿಗೆ 117 ಬಾರಿ ಪ್ರಶಸ್ತಿಗಳು ಲಭಿಸಿವೆ.
  • ಒಂದೇ ವರುಷ ಎರಡು ಆಸ್ಕರ್ ಪ್ರಶಸ್ತಿ ಗೆದ್ದ ಏಷ್ಯಾ ಖಂಡದ ಏಕೈಕ ವ್ಯಕ್ತಿ ಈತ
  • ಫುಟ್ಬಾಲ್ ದಂತಕತೆ ಜಿನದಿನ್ ಜಿದಾನ್ ಅಭಿನಯಿಸಿದ ಫ್ರೆಂಚ್ ಮಿನರಲ್ ವಾಟರ್ ಕಂಪನಿಯಾದ ವಾಲ್‌ವಿಕ್ ಜಾಹೀರಾತಿನಲ್ಲಿ ರೆಹಮಾನ್ ಸಂಗೀತ ಬಳಸಲಾಗಿತ್ತು.
  • ರೆಹಮಾನ್ ಕಂಪೋಸ್ ಮಾಡಿದ ಏರ್‌ಟೆಲ್ ನ ಸಿಗ್ನೇಚರ್ ಟ್ಯೂನ್ ಅತೀ ಹೆಚ್ಚು ಬಾರಿ ಡೌನ್ ಲೋಡ್ ಮಾಡಲ್ಪಟ್ಟ ಟ್ಯೂನ್ ಆಗಿದೆ. 150 ದಶಲಕ್ಷ ಜನ ಇದನ್ನು ಡೌನ್‌ಲೋಡ್ ಮಾಡಿದ್ದರು.
  • ಅಮೆಜಾನ್ ಡಾಟ್ ಕಾಂ ಮಾಡಿದ ಜಗತ್ತಿನ ಚಿರನೂತನ ಸಂಗೀತ ಆಲ್ಬಂಗಳಲ್ಲಿ ರೆಹಮಾನ್ ಸಂಗೀತದ ಲಗಾನ್ ಚಿತ್ರದ ಸೌಂಡ್ ಟ್ರ್ಯಾಕ್ 45ನೇ ಸ್ಥಾನ ಪಡೆದಿದೆ. 
  • 2005ರಲ್ಲಿ ರಿಚಾರ್ಡ್ ಕೋರ್‌ಲಿಸ್ ರೆಹಮಾನ್‌ರ ಮೊದಲ ತಮಿಳು ಸಿನಿಮಾ ರೋಜಾ ಚಿತ್ರದ ಹಾಡನ್ನು ಜಗತ್ತಿನ ಟಾಪ್ ಟೆನ್ ಸೌಂಡ್‌ಟ್ರ್ಯಾಕ್ ಗಳಲ್ಲಿ ಮೊದಲ ಸ್ಥಾನ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com