ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಜಲ್ಲಿಕಟ್ಟು ಪಂದ್ಯದ ಎತ್ತು

ದಷ್ಟಪುಷ್ಟವಾದ ದೇಹ, ಚೂಪಾದ ಉದ್ದವಾದ ಕೊಂಬನ್ನು ಹೊಂದಿರುವ ಎತ್ತನ್ನು ನೋಡಿದರೆ ಸಾಕು ಅದರ ಹತ್ತಿರ ಹೋಗಲು...
ತಮ್ಮ ಎತ್ತು ಪರವಸಪರವೈಯೊಂದಿಗೆ ಕನ್ನಗಿ
ತಮ್ಮ ಎತ್ತು ಪರವಸಪರವೈಯೊಂದಿಗೆ ಕನ್ನಗಿ

ನಮಕ್ಕಲ್(ತಮಿಳುನಾಡು): ದಷ್ಟಪುಷ್ಟವಾದ ದೇಹ, ಚೂಪಾದ ಉದ್ದವಾದ ಕೊಂಬನ್ನು ಹೊಂದಿರುವ ಎತ್ತನ್ನು ನೋಡಿದರೆ ಸಾಕು ಅದರ ಹತ್ತಿರ ಹೋಗಲು ಜನ ಭಯಪಡುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಇಂತಹ ಎತ್ತನ್ನು ತನ್ನ ಮಕ್ಕಳಂತೆಯೇ ಸಾಕಿ ಸಲಹುತ್ತಿದ್ದಾರೆ. ಅಲ್ಲದೆ ತಮಿಳುನಾಡು ರಾಜ್ಯದ ಪೊಂಗಲ್ ಸಮಯದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಈ ಎತ್ತು ಭಾಗವಹಿಸುತ್ತದೆ.

ತಮಿಳುನಾಡು ರಾಜ್ಯದ ಕೊಲ್ಲಿ ಬೆಟ್ಟದ ತಪ್ಪಲಾದ ಅಲಂಗನಾಥಮ್ ಕೆಜಕೊಂಬೈ ಎಂಬಲ್ಲಿ 35 ವರ್ಷದ ಮಹಿಳೆ ಕನ್ನಗಿ ಎಂಬುವವರು ಜಮೀನನ್ನು ಹೊಂದಿದ್ದಾರೆ. ಇವರ ಹತ್ತಿರ ಒಂದು ಎತ್ತು ಇದೆ. ಪರವಸಪರವೈ ಅಂತ ಅದರ ಹೆಸರು. ಅದನ್ನು ಕನ್ನಗಿ ಮನೆಯವರು 'ಅಮ್ಮ ಮಾಡು' ಎಂದು ಪ್ರೀತಿಯಿಂದ ಕರೆಯುತ್ತಾರೆ. ನೋಡಲು ತುಂಬಾ ಕ್ರೂರಿಯಂತೆ ಕಂಡರೂ ಸಾಧು ಸ್ವಭಾವದ ಪ್ರಾಣಿ ಎನ್ನುತ್ತಾರೆ ಕನ್ನಗಿ. ಅವರ ಭಾಷೆ, ಹಾವಭಾವವನ್ನು ಚೆನ್ನಾಗಿ ಅನುಕರಣೆ ಮಾಡುತ್ತದಂತೆ. ನನ್ನನ್ನು ಬಿಟ್ಟರೆ ನಮ್ಮ ಮನೆಯಲ್ಲಿ ಬೇರೆ ಯಾರಿಗೂ ಆ ಎತ್ತನ್ನು ಮುಟ್ಟುವ ಧೈರ್ಯ ಇಲ್ಲ, ನನ್ನ ಪತಿ ಕೂಡ ಅದರ ಹತ್ತಿರ ಹೋಗುವುದಿಲ್ಲ ಎನ್ನುತ್ತಾರೆ ನಾಲ್ಕು ಮಕ್ಕಳ ತಾಯಿಯಾಗಿರುವ ಕನ್ನಗಿ.

ಕನ್ನಗಿ ಒಂಥರಾ ರಿಂಗ್ ಮಾಸ್ಟರ್ ಥರ. ಅದನ್ನು ಸುಲಭವಾಗಿ ಹೇಳಿದಂತೆ ಕೇಳಿಸುತ್ತಾರೆ. ಅಷ್ಟೇ ಪ್ರೀತಿಯಿಂದ ಎತ್ತನ್ನು ಆರೈಕೆ ಮಾಡುತ್ತಾರೆ. ಇಂತಿಪ್ಪ ಪರವಸಪರವೈ ಹಲವಾರು ವರ್ಷಗಳಿಂದ ಪೊಂಗಲ್ ಸಮಯದಲ್ಲಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಅಲಂಗನಾಥಮ್, ಪಲ್ಲವರಾಯನಪಟ್ಟಿ ಮತ್ತು ಚಕ್ಕಿಡಿ ಮೊದಲಾದ ಕಡೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ಈ ಬಾರಿ ನಾಡಿದ್ದು ಪೊಂಗಲ್ ಗೆ ಅಲಂಗನಾಥಮ್ ನಲ್ಲಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಲು ಕನಗಿ ಮತ್ತು ಅವರ ಪತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇವರು ಎತ್ತನ್ನು ಸಾಕಿ ಸ್ಪರ್ಧೆಗೆ ತಯಾರು ಮಾಡುತ್ತಿರುವುದನ್ನು ನೋಡಿ ಸುತ್ತಮುತ್ತಲ ನಿವಾಸಿಗಳು ಕೂಡ ಎತ್ತನ್ನು ಸಾಕಲು ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com