ತಂದೆ ಇಲ್ಲದ 472 ಹೆಣ್ಣುಮಕ್ಕಳಿಗೆ ತ೦ದೆಯಾಗಿ ಕನ್ಯಾದಾನ ಮಾಡಿದ ಉದ್ಯಮಿ!

ಸಾಮೂಹಿಕ ವಿವಾಹದ ಮೂಲಕ ಬಡ ಹೆಣ್ಣುಮಕ್ಕಳ ಮದುವೆ ಮಾಡಿಸಿ ಔದಾರ್ಯ ಮೆರೆದ ಸಮಾಜ ಸೇವಕರ ಬಗ್ಗೆ ನೀವು ಕೇಳಿರಬಹುದು..ಆದರೆ ಇಲ್ಲೊಬ್ಬ ಉದ್ಯಮಿ ತಂದೆ ಇಲ್ಲದ ಹೆಣ್ಣು ಮಕ್ಕಳಿಗೆ ತಾವೇ ತಂದೆಯಾಗಿ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದಾರೆ...
ಮಹೇಶ್ ಸಾವನಿ ಮತ್ತು ಮದುವೆ (ಚಿತ್ರಕೃಪೆ: ಫೇಸ್ ಬುಕ್)
ಮಹೇಶ್ ಸಾವನಿ ಮತ್ತು ಮದುವೆ (ಚಿತ್ರಕೃಪೆ: ಫೇಸ್ ಬುಕ್)

ಅಹಮದಾಬಾದ್: ಸಾಮೂಹಿಕ ವಿವಾಹದ ಮೂಲಕ ಬಡ ಹೆಣ್ಣುಮಕ್ಕಳ ಮದುವೆ ಮಾಡಿಸಿ ಔದಾರ್ಯ ಮೆರೆದ ಸಮಾಜ ಸೇವಕರ ಬಗ್ಗೆ ನೀವು ಕೇಳಿರಬಹುದು..ಆದರೆ ಇಲ್ಲೊಬ್ಬ ಉದ್ಯಮಿ ತಂದೆ ಇಲ್ಲದ ಹೆಣ್ಣು ಮಕ್ಕಳಿಗೆ ತಾವೇ ತಂದೆಯಾಗಿ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದಾರೆ.

ಈ ಅಪೂರ್ವ ಕಾರ್ಯದಲ್ಲಿ ತೊಡಗಿರುವುದು ಗುಜರಾತ್ ಮೂಲದ ವಜ್ರದ ವ್ಯಾಪಾರಿ ಮಹೇಶ ಸಾವನಿ. ವಿಶ್ವ ಅಪ್ಪಂದಿರ ದಿನದಂದು ಮಹೇಶ್ ಸಾವನಿ ಅವರಿಗೆ 472 ಹೆಣ್ಣುಮಕ್ಕಳಿಂದ ಶುಭಾಷಯ ಹರಿದು ಬಂದಿದೆ. ವಾಸ್ತವದಲ್ಲಿ ಈ ಹೆಣ್ಮಕ್ಕಳೆಲ್ಲಾ ಇವರ ಸ್ವ೦ತ ಮಕ್ಕಳಲ್ಲ. ಚಿಕ್ಕ ವಯಸ್ಸಿಗೆ ತ೦ದೆಯನ್ನು ಕಳೆದುಕೊ೦ಡ ದುರ್ದೈವಿಗಳಿವರು. ಆದರೆ ಇವರಿಗೆ ಸಾವನಿ ಅವರು ತ೦ದೆಯ ಸ್ಥಾನದಲ್ಲಿ ಇ೦ತಹ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ.  ತಂದೆ ಇಲ್ಲದೆ ಮದುವೆಗಾಗಿ ಪರಿತಪಿಸುತ್ತಿದ್ದ ಅವರನ್ನು ಗುರುತಿಸಿ ಮಹೇಶ್ ಸಾವನಿ ಅವರೇ ತಂದೆ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟಿದ್ದಾರೆ. ಹೀಗೆ ಮಹೇಶ್ ಸಾವನಿ ಈ ವರೆಗೂ ಸುಮಾರು 472 ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದ್ದಾರಂತೆ.

ಮೂಲತಃ ಭಾವನಗರದ ರಪಾದ೯ ಗ್ರಾಮದ ನಿವಾಸಿಯಾಗಿರುವ ಸಾವನಿ ಅವರ ತ೦ದೆ ವಲ್ಲಭಭಾಯಿ ಅವರು 40 ವಷ೯ಗಳ ಹಿ೦ದೆ ಗುಜರಾತ್ ಭಾವ್ನಗರಕ್ಕೆ ಬ೦ದು ನೆಲೆಸಿದ್ದರು. ಅಲ್ಲಿ ವಜ್ರದ ಪಾಲಿಶ್ ಕೆಲಸ ಶುರುಮಾಡಿದ್ದ ವಲ್ಲಭಭಾಯಿ ಅವರು, ಕ್ರಮೇಣ ಅವರೇ ಸ್ವ೦ತ ವಜ್ರದ ಅ೦ಗಡಿ ತೆರೆದಿದ್ದರು. ಈಗ ಸಾವನಿ ಕುಟು೦ಬವು ಶ್ರೀಮ೦ತವಾಗಿದ್ದು, ತ೦ದೆ ಕಳೆದುಕೊ೦ಡ ಹೆಣ್ಣು ಮಕ್ಕಳ ಮದುವೆಗೆ ಸಾವನಿ ಕುಟುಂಬ 4 ಲಕ್ಷ ರುಪಾಯಿ ವೆಚ್ಚ ಮಾಡಿ ಮದುವ ಮಾಡುತ್ತಿದ್ದಾರೆ.

ಹೀಗಾಗಿ ಮದುವೆಯಾಗಿ ಪತಿಯ ಮನೆ ಸೇರಿದ್ದರೂ ಇವರಿಂದ ನೆರವು ಪಡೆದ ಹೆಣ್ಣುಮಕ್ಕಳೆಲ್ಲಾ ಅವರನ್ನು ತಮ್ಮ ತ೦ದೆಗಿ೦ತಲೂ ಮಿಗಿಲು ಎ೦ದೇ ಭಾವಿಸಿ ಗೌರವಿಸುತ್ತಾರೆ. ಇದೇ ಕಾರಣಕ್ಕೆ ಅಪ್ಪಂದಿರ ದಿನದಂದು ಮರೆಯದೇ ಅವರಿಗೆ ಶುಭಾಷಯ ಕೋರಿದ್ದಾರೆ.

ಮಹೇಶ್ ಸಾವನಿ ಸಮಾಜ ಕಾರ್ಯಕ್ಕೆ ಪ್ರೇರಣೆಯಾದ ತಮ್ಮನ ಮಗಳು

ಈಗ್ಗೆ 10 ವಷ೯ಗಳ ಹಿಂದೆ ಮಹೇಶ್ ಸಾವನಿ ಅವರ ಸಹೋದರ ಅಕಾಲಿಕ ಸಾವನ್ನಪ್ಪಿದ್ದರು. ಆಗ ಸಹೋದರನ ಪುತ್ರಿಯರನ್ನು ಸಾವನಿ ಅವರೇ  ತಂದೆ ಸ್ಥಾನದಲ್ಲಿ ನಿಂತು ಕನ್ಯಾದಾನ ನೆರವೇರಿಸಿದ್ದರು. ಆಗ ಸಾವನಿ ಅವರಿಗೆ ಒಂದು ಚಿಂತೆ ಕಾಡಿತ್ತು. ಅದೇನೆಂದರೆ ನನ್ನ ತಮ್ಮನ ಮಗಳ೦ತೆ ಅಪ್ಪ೦ದಿರು ಇಲ್ಲದ ಹೆಣ್ಮಕ್ಕಳ ಮದುವೆಯನ್ನು ಯಾರು ನೆರವೇರಿಸುತ್ತಾರೆ ಎ೦ಬ ಅವರಲ್ಲಿ ಮೂಡಿತ್ತು. ಈ ಬಗ್ಗೆ ಗಂಭೀರವಾಗಿ ಚಿಂತಿಸಿದ್ದ ಸಾವನಿ ತಂದೆ ಇಲ್ಲದ ಹೆಣ್ಣುಮಕ್ಕಳನ್ನು ಹುಡುಕಿ ತಾವೇ ತಂದೆ ಸ್ಥಾನದಲ್ಲಿ ನಿಂತು ಮದುವೆ ಮಾಡಿಸುತ್ತಿದ್ದಾರೆ. 2008ರಿ೦ದ ಅವರ ಈ ಅಪೂರ್ವ ಕಾರ್ಯ ಸಾಗಿದ್ದು, ಈ ವರೆಗೂ ಸಾವನಿ ಸುಮಾರು 472 ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ಅ೦ದಿನಿ೦ದ ಪ್ರತಿವಷ೯ವೂ ತಂದೆ ಇಲ್ಲದ ಹೆಣ್ಣುಮಕ್ಕಳ ಸಾಮೂಹಿಕ ಮದುವೆಗಳನ್ನು ಅದ್ದೂರಿಯಾಗಿ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com