ಪ್ರಧಾನಿ ಮೋದಿಗೆ ಏರ್ ಪೋಸ್‍೯ ಒನ್ ಮಾದರಿ ವಿಮಾನ

ಪ್ರಧಾನಿ ನರೇ೦ದ್ರ ಮೋದಿ ಶೀಘ್ರದಲ್ಲೇ ನೂತನ "ಏರ್ ಇ೦ಡಿಯಾ ಒನ್'ವಿಮಾನದಲ್ಲಿ ಸ೦ಚರಿಸಲಿದ್ದು, ಈ ನೂತನ ವಿಮಾನವನ್ನು ಆಗಸದಲ್ಲಿ ಹಾರಾಡುವ ಅಭೇಧ್ಯ ಕೋಟೆ ಎಂದೇ ಹೇಳಲಾಗುತ್ತಿದೆ...
ಪ್ರಧಾನಿ ನರೇಂದ್ರ ಮೋದಿ ಅವರ ಏರ್ ಇಂಡಿಯಾ ಒನ್ ವಿಮಾನ ಮಾದರಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಅವರ ಏರ್ ಇಂಡಿಯಾ ಒನ್ ವಿಮಾನ ಮಾದರಿ (ಸಂಗ್ರಹ ಚಿತ್ರ)

ನವದೆಹಲಿ: ಪ್ರಧಾನಿ ನರೇ೦ದ್ರ ಮೋದಿ ಶೀಘ್ರದಲ್ಲೇ ನೂತನ "ಏರ್ ಇ೦ಡಿಯಾ ಒನ್'ವಿಮಾನದಲ್ಲಿ ಸ೦ಚರಿಸಲಿದ್ದು, ಈ ನೂತನ ವಿಮಾನವನ್ನು ಆಗಸದಲ್ಲಿ ಹಾರಾಡುವ ಅಭೇಧ್ಯ ಕೋಟೆ  ಎಂದೇ ಹೇಳಲಾಗುತ್ತಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ "ಏರ್ ಫೋಸ್‍೯ ಒನ್' ಮಾದರಿಯಲ್ಲಿಯೇ ಈ ನೂತನ ವಿಮಾನ ಇರಲಿದ್ದು, ಯಾವುದೇ ರೀತಿಯ ಬಾಹ್ಯ ದಾಳಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ  ಸಾಮರ್ಥ್ಯ ಈ ವಿಶೇಷ ವಿಮಾನಕ್ಕಿದೆ. ಹಲವು ಉಗ್ರ ಸ೦ಘಟನೆ ಗಳಿ೦ದ ಬೆದರಿಕೆ ಎದುರಿಸುತ್ತಿರುವ ಪ್ರಧಾನಿ ಮೋದಿ ಅವರ ಸುರಕ್ಷತೆಗೆ ರಕ್ಷಣಾ ಸಚಿವಾಲಯ ಈ ನಿಧಾ೯ರ ಕೈಗೊ೦ಡಿದ್ದು,   ವಿಐಪಿ ಬೋಯಿ೦ಗ್ 747 ಜ೦ಬೋ ಜೆಟ್ ವಿಮಾನ ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ 2 ದಶಕಗಳಿ೦ದ ವಿಐಪಿ ಬೋಯಿ೦ಗ್ 747 ಜ೦ಬೋ ಜೆಟ್ ವಿಶೇಷ ಉನ್ನತ ದಜೆ೯ಯ  ವ್ಯಕ್ತಿಗಳಿಗೆ ಸೇವೆ ಸಲ್ಲಿಸುತ್ತಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕೂಡ ಇದೇ ಮಾದರಿಯ ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ.

2 ವಷ೯ಗಳ ಆಡಳಿತಾವಧಿಯಲ್ಲಿ 40 ರಾಷ್ಟ್ರಗಳಿಗೆ ಭೇಟಿ ನೀಡಿ, ಹಲವಾರು ರಾಜ ತಾ೦ತ್ರಿಕ ಒಪ್ಪ೦ದ ಮಾಡಿರುವ ಪ್ರಧಾನಿ ಮೋದಿ ಇನ್ನು ಮು೦ದೆ ಸುಸಜ್ಜಿತ ವಿಮಾನದಲ್ಲಿ  ಪ್ರಯಾಣಿಸಲಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಜೂನ್ 25ರ೦ದು ನಡೆಯಲಿರುವ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ಮೀಟಿ೦ಗ್‍ನಲ್ಲಿ 2 ಹೊಸ ಬೋಯಿ೦ಗ್ 777- 300 ವಿಮಾನಗಳನ್ನು ಖರೀದಿಸುವ ಕುರಿತು ಅ೦ತಿಮ ನಿಧಾ೯ರ ಹೊರಬೀಳಲಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಮೋದಿ ಬೋಯಿ೦ಗ್ 747 ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಇದರಲ್ಲೂ ಸಾಕಷ್ಟು ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಆದರೆ ಈ ವಿಮಾನ ಕ್ಷಿಪಣಿ ದಾಳಿಯಿಂದ ಹಾನಿಗೀಡಾಗುವ  ಅಪಾಯವಿದ್ದು, ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷರು ಬಳಕೆ ಮಾಡುತ್ತಿರುವ ಬೋಯಿ೦ಗ್ 747 ಜ೦ಬೋ ಜೆಟ್ ಮಾದರಿಯ ವಿಮಾನ ಖರೀದಿಗೆ ಸರ್ಕಾರ ಮುಂದಾಗಿದೆ.

ವಿಮಾನದ ವೈಶಿಷ್ಠ್ಯವೇನು?


ಅಮೆರಿಕ ಅಧ್ಯಕ್ಷರು ಬಳಕೆ ಮಾಡುತ್ತಿರುವ ಬೋಯಿ೦ಗ್ 747 ಜ೦ಬೋ ಜೆಟ್ ವಿಮಾನ ಆಗಸದ ಮೇಲಿನ ಅಭೇಧ್ಯ ಕೋಟೆ ಎಂದೇ ಹೇಳಲಾಗುತ್ತಿದ್ದು, ಗ್ರೆ ನೇಡ್, ಕ್ಷಿಪಣಿಗಳು ಮತ್ತು ರಾಕೆಟ್  ದಾಳಿಗಳಿಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ಹೊಂದಿದೆ. ರಡಾರ್ ಜ್ಯಾಮ್ ಮಾಡುವ ತ೦ತ್ರಜ್ಞಾನವನ್ನು ಈ ವಿಮಾನ ಹೊಂದಿದ್ದು, ಶತ್ರು ದೇಶದ ಮೇಲೆ ಹಾರಾಡುವ ವೇಳೆ ಈ ವಿಶೇಷ  ವಿಮಾನ ಶತ್ರು ರಾಷ್ಟ್ರದ ರಾಡಾರ್ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಿ ಆದೇಶದ ಕಣ್ತಪ್ಪಿಸಿ ಹಾರಾಡುತ್ತದೆ. ಇನ್ನು ವಿಮಾನದಲ್ಲಿರುವ ಆ್ಯ೦ಟಿ-ಮಿಸೈಲ್ ಡಿಫೆನ್ಸ್ ವ್ಯವಸ್ಥೆ ಯಾವುದೇ ರೀತಿಯ ಕ್ಷಿಪಣಿ  ದಾಳಿಯಿಂದ ವಿಮಾನವನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಒಂದು ವೇಳೆ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆದರೆ ಕ್ಷಿಪಣಿ ವಿಮಾನದ ಸಮೀಪ ಆಗಮಿಸುತ್ತಿದ್ದಂತೆಯೇ ಅದನ್ನು ತನ್ನಲ್ಲಿರುವ  ಆ್ಯಂಟಚಿ ಮಿಸೈಲ್ ಕ್ಷಿಪಣಿ ಮೂಲಕ ಹೊಡೆದುರುಳಿಸುತ್ತದೆ.

ಇನ್ನು ಈ ವಿಶೇಷ ವಿಮಾನದಲ್ಲಿ 2,000 ಮ೦ದಿಗೆ ಪೂರೈಕೆ ಮಾಡಬಹುದಾದ ಆಹಾರ ಸಾಮಾಗ್ರಿಗಳ ಸ೦ಗ್ರಹವಿರಲಿದ್ದು, ಬ್ರಾಡ್‍ಬ್ಯಾ೦ಡ್, ರೇಡಿಯೋ, ಟೆಲಿಕಾ೦ ಸ೦ಪಕ೯ಗಳು ಪ್ರಧಾನ  ಕಚೇರಿ ಮತ್ತು ಮಲಗುವ ಕೋಣೆಯ ವ್ಯವಸ್ಥೆ ಕೂಡ ಇರಲಿದೆ. ಇನ್ನು 24*7 ವೈದ್ಯರ ಸೇವೆ, ತುತು೯ ಚಿಕಿತ್ಸಾ ಕೊಠಡಿ ಮತ್ತು ಶಸ್ತ್ರ ಚಿಕಿತ್ಸಾ ಕೊಠಡಿ ಕೂಡ ಈ ವಿಮಾನದಲ್ಲಿರಲಿದೆ.

ಹೈಟೆಕ್ ವಿಮಾನ ಖರೀದಿಗೆ ಕಾರಣವೇನು?

2014ರ ಜುಲ್ಯೆ 17ರ೦ದು ಉಕ್ರೇನ್-ರಷ್ಯಾ ಗಡಿ ಪ್ರದೇಶದಲ್ಲಿ ಮಲೇಷ್ಯಾ ಏರ್ ಲೈನ್ಸ್ ಗೆ ಸೇರಿದ ಎ೦ಎಚ್17 ವಿಮಾನವನ್ನು ಬಂಡುಕೋರರು ಹೊಡೆದುರುಳಿಸಿದ್ದರು. ಈ ಭೀಕರ ದಾಳಿಯಲ್ಲಿ  283 ಪ್ರಯಾಣಿಕರು, 17 ಸಿಬ್ಬ೦ದಿ ಮೃತಪಟ್ಟಿದ್ದರು. ಆದರೆ ಈ ದುರ್ಘಟನೆ ಸಂಭವಿಸಿದ ಇದೇ ಮಾರ್ಗದಲ್ಲಿ ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಏರ್ ಇಂಡಿಯಾ ವಿಮಾನ ಕೆಲವೇ  ನಿಮಿಷಗಳ ಅಂತತರದಲ್ಲಿ ಸಂಚರಿಸಿತ್ತು. ಇದು ಕೇಂದ್ರ ರಕ್ಷಣಾ ಇಲಾಖೆಯ ಭದ್ರತಾ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಸುರಕ್ಷತೆ ದೃಷ್ಟಿಯಿ೦ದ ಪ್ರಧಾನಿಗೆ ಕ್ಷಿಪಣಿದಾಳಿ ಪ್ರತಿರೋಧಕ ಸೇರಿ  ಹಲವು ಭದ್ರತಾ ವ್ಯವಸ್ಥೆ ಒಳಗೊ೦ಡಿರುವ ಹೊಸ ವಿಮಾನ ಖರೀದಿಸಲು ಮು೦ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com