ತಮಿಳುನಾಡಿನ ಈ ಗ್ರಾಮದಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ

ಇವಿಆರ್ ಪೆರಿಯಾರ್ ಅವರ ತತ್ವಗಳಿಂದ ಪ್ರೇರಿತರಾದ ಸಂಘಟನೆಯೊಂದರ ಸದಸ್ಯರು ಅಂತರ್ಜಾತಿ ಜೋಡಿಯ ವಿವಾಹ ನೆರವೇರಿಸಿದ ಘಟನೆ ಪೊಲ್ಲಚಿಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಯಂಬತ್ತೂರು: ಇವಿಆರ್ ಪೆರಿಯಾರ್ ಅವರ ತತ್ವಗಳಿಂದ ಪ್ರೇರಿತರಾದ ಸಂಘಟನೆಯೊಂದರ ಸದಸ್ಯರು ಅಂತರ್ಜಾತಿ ಜೋಡಿಯ ವಿವಾಹ ನೆರವೇರಿಸಿದ ಘಟನೆ ಪೊಲ್ಲಚಿಯ ಕಲಿಯಪ್ಪಫೌಂದೆನ್ಪುದುರಿನಲ್ಲಿ ನಡೆದಿದೆ.

ಪೆರಿಯರ್ ದ್ರಾವಿಡ ಕಜ್ಹಗಮ್ ಸಂಘಟನೆಯ ಸ್ಥಾಪಕ ಕೆ.ಎಸ್.ನಾಗರಾಜನ್ ಮತ್ತು ಸ್ಥಳೀಯರು ಹೇಳುವ ಪ್ರಕಾರ, ಜಾತಿ ತಾರತಮ್ಯದ ವಿರುದ್ಧ ಇಡೀ ಗ್ರಾಮಸ್ಥರು ಹೋರಾಟಕ್ಕಿಳಿದಿದ್ದಾರೆ. ಪ್ರಸ್ತುತ ಗ್ರಾಮದ 300 ಕುಟುಂಬಗಳಲ್ಲಿ 20 ಮಂದಿ ತಮ್ಮ ಜಾತಿಯವರನ್ನು ಬಿಟ್ಟು ಬೇರೆ ಜಾತಿಯವರನ್ನು ಮದುವೆಯಾಗಿದ್ದಾರೆ. ಕೆಲವೊಮ್ಮೆ ಮನೆಯವರ ವಿರೋಧದಿಂದ ಓಡಿ ಹೋಗುವ ಜೋಡಿಗಳು ಈ ಗ್ರಾಮದಲ್ಲಿ ಆಶ್ರಯ ಪಡೆಯುತ್ತಾರಂತೆ.

ಮೊನ್ನೆ ಶನಿವಾರ ಸ್ಟಾಲಿನ್ ಮತ್ತು ಕೃತಿಕಾ ಎಂಬ ಅಂತರ್ಜಾತಿ ಜೋಡಿಗಳು ಸುಮಾರು 400 ಅತಿಥಿಗಳ ಸಮ್ಮುಖದಲ್ಲಿ ಮದುವೆಯಾದರು. ಕೃತಿಕಾ ಮತ್ತು ಸ್ಟಾಲಿನ್ ಅವರ ಪೋಷಕರು ವಧೂ ವರರ ಹುಡುಕಾಟ ನಡೆಸುತ್ತಿದ್ದರಂತೆ. ಆಗ ಸಂಘಟನೆಯ ಕಾರ್ಯಕರ್ತರು ಪೋಷಕರನ್ನು ಭೇಟಿ ಮಾಡಿ ಬೇರೆ ಜಾತಿಯೊಳಗೆ ಮದುವೆ ಮಾಡಿಸುವಂತೆ ಮನವಿ ಮಾಡಿಕೊಂಡರಂತೆ.

ನಾಗರಾಜನ್ ಮತ್ತು ಅವರ ತಂಡದ ಸದಸ್ಯರು ಕಳೆದ 15 ವರ್ಷಗಳಿಂದ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಅಂತರ್ಜಾತಿ ವಿವಾಹದ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ನಾವು ಪೂಂಚೋಲೈ ಎಂಬ ಸಾಮಾಜಿಕ ಅಭಿವೃದ್ಧಿ ಸಂಘಟನೆಯನ್ನು ನಡೆಸುತ್ತಿದ್ದು ಅದು ಬಾಲಕಿಯರ ಶಿಕ್ಷಣಕ್ಕೆ ಉತ್ತೇಜನ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡುವ ಕೆಲಸದಲ್ಲಿ ನಿರತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com