ಇಲ್ಲಿನ ಗ್ರಾಮಸ್ಥರಿಗೆ ಮಹಾತ್ಮಾ ಗಾಂಧಿಯೇ ದೇವರು!

ಪ್ರತಿ ಗ್ರಾಮದಲ್ಲಿಯೂ ಗ್ರಾಮ ದೇವತೆ ಎಂಬುದಿರುತ್ತದೆ. ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ...
ಮಹಾತ್ಮಾ ಗಾಂಧಿ(ಸಂಗ್ರಹ ಚಿತ್ರ)
ಮಹಾತ್ಮಾ ಗಾಂಧಿ(ಸಂಗ್ರಹ ಚಿತ್ರ)
ಶ್ರೀಕಾಕುಲಂ: ಪ್ರತಿ ಗ್ರಾಮದಲ್ಲಿಯೂ ಗ್ರಾಮ ದೇವತೆ ಎಂಬುದಿರುತ್ತದೆ. ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಕೇದರೀಪುರಂ ಗ್ರಾಮದಲ್ಲಿ ಕೂಡ ಗ್ರಾಮ ದೇವತೆಯನ್ನು ಇಲ್ಲಿನ ಜನ ಪೂಜಿಸುತ್ತಾರೆ. ಆದರೆ ವಿಚಿತ್ರವೆಂದರೆ ಇಲ್ಲಿ ಪೂಜೆ ಮಾಡುವುದು ಪುರಾಣದ ದೇವರನ್ನಲ್ಲ, ಬದಲಿಗೆ ಮಹಾತ್ಮಾ ಗಾಂಧಿಯನ್ನು. ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಇಲ್ಲಿ ದೇವತೆಯೆಂದು ಪೂಜಿಸುತ್ತಾರೆ.
ಪ್ರತಿ ಖಾರಿಫ್ ಋತುವಿನಲ್ಲಿ ಕೃಷಿ ಚಟುವಟಿಕೆ ಆರಂಭಿಸುವ ಮೊದಲು ಇಲ್ಲಿನ ಗ್ರಾಮಸ್ಥರು ಗಾಂದಮ್ಮ ಉತ್ಸವವನ್ನು ಆಚರಿಸಿಕೊಂಡು ಬಂದಿದ್ದಾರೆ.ಗಾಂಧಿಯನ್ನು ಪೂಜಿಸಿದರೆ ಉತ್ತಮ ಬೆಳೆಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು. ಸ್ವಾತಂತ್ರ್ಯ ಸಿಕ್ಕಿದ ನಂತರ ನಮ್ಮ ಪೂರ್ವಜರು ಗಾಂಧೀಜಿಯನ್ನು ಪೂಜಿಸಲು ಆರಂಭಿಸಿದರು. ಉತ್ಸವದ ಮೂಲ ಇನಾಂದಾರಿ ವ್ಯವಸ್ಥೆಯಲ್ಲಿದೆ. ಆಳ್ವಿಕೆ ನಡೆಸುತ್ತಿದ್ದವರು ಹಿಂದೆ 250 ಎಕರೆ ಜಮೀನನ್ನು ಸ್ಥಳೀಯ ಮುಖಂಡ ಪರಶುರಾಮ ಮತ್ತು ವೆಂಕಟ ರಾಮ ಚೌಧರಿ ಎಂಬವರಿಗೆ ನೀಡಿದ್ದರಂತೆ. ಅವರು ಜಮೀನನ್ನು ರೈತರಿಗೆ ನೀಡಿ ಬೆಳೆ ಬೆಳೆಯುವಂತೆ ಮಾಡಿದರು ಎನ್ನುತ್ತಾರೆ.
ನಮ್ಮ ಹಿರಿಯರು ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿ ಪಡೆದು ಸತ್ಯಾಗ್ರಹ ನಡೆಸಿ ಭೂಮಿ ಪಡೆದರು. ಗ್ರಾಮದಲ್ಲಿ ಗಾಂಧಿ .ಯುವ ಸಂಘಟನೆ ಮತ್ತ ಗಾಂಧಿ ಸಹಾಯ ಶಾಲೆಯನ್ನು ನಿರ್ಮಿಸಲಾಗಿದೆ'' ಎನ್ನುತ್ತಾರೆ ಕೇದಾರಿದಾಮದ ಸರ್ಪಂಚ್ 65 ವರ್ಷದ ಕೆ.ಫಾಲ್ಗುಣ ರಾವ್. 
ಆದರೆ ಗಾಂಧಿಯನ್ನು ದೇವರೆಂದು ಏಕೆ ಪೂಜಿಸುತ್ತಾರೆ ಎಂದು ಕೇಳಿದಾಗ, ಇನಾಂದಾರರ ವಿರುದ್ಧ ಗ್ರಾಮಸ್ಥರ ಒಗ್ಗಟ್ಟನ್ನು ತೋರಿಸಲು ಉತ್ಸವದ ಆಚರಣೆಯನ್ನು ಆರಂಭಿಸಲಾಯಿತು ಅದೀಗ ಸಂಪ್ರದಾಯವಾಗಿ ಮುಂದುವರಿದಿದೆ ಎನ್ನುತ್ತಾರೆ ರಾವ್.
ಕರಾವಳಿಯ ಆಂಧ್ರ ಭಾಗದಲ್ಲಿ ಗ್ರಾಮಸ್ಥರು ಕೃಷಿ ಚಟುವಟಿಕೆ ಆರಂಭಿಸುವ ಮುನ್ನ ದೇವರನ್ನು ಪೂಜಿಸುತ್ತಾರೆ. ನಾವು ಮಹಾತ್ಮಾ ಗಾಂಧಿಯನ್ನು ದೇವರೆಂದು ಪೂಜಿಸುತ್ತೇವೆ. ಹಾಗಾಗಿ ಉತ್ಸವಕ್ಕೆ ಗಾಂಧಮ್ಮ ಸಂಭ್ರಮ ಎಂದು ಹೆಸರಿಟ್ಟಿದ್ದೇವೆ ಎನ್ನುತ್ತಾರೆ ಫಾಲ್ಗುಣ ರಾವ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com