ಕಳೆದುಕೊಂಡ ದಾಖಲೆಗಳನ್ನು ಒಂದುಕ್ಲಿಕ್ ಮೂಲಕ ಟ್ರ್ಯಾಕ್ ಮಾಡಿ

ನೀವು ಮ್ನಿಮ್ಮ ಪ್ರಮುಖವಾದ ಗುರುತಿನ ಚೀಟಿ, ದಾಖಲೆಗಳನ್ನು ಕಳೆದುಕೊಂಡಿದ್ದೀರ? ಮತ್ತೆ ಅದರ ನಕಲು ಪ್ರತಿ ಪಡೆಯಲು ಆಯಾ ಕಛೇರಿಗಳ ಬಾಗಿಲು ಅಲೆಯುತ್ತಿದ್ದೀರಾ? ಇನ್ನು ಹಾಗೆ ಮಾಡಬೇಕಾಗಿಲ್ಲ.
ಕಳೆದುಕೊಂಡ ದಾಖಲೆಗಳನ್ನು ಒಂದುಕ್ಲಿಕ್ ಮೂಲಕ ಟ್ರ್ಯಾಕ್ ಮಾಡಿ
ಕಳೆದುಕೊಂಡ ದಾಖಲೆಗಳನ್ನು ಒಂದುಕ್ಲಿಕ್ ಮೂಲಕ ಟ್ರ್ಯಾಕ್ ಮಾಡಿ
ಮಧುರೈ:ನೀವು ಮ್ನಿಮ್ಮ ಪ್ರಮುಖವಾದ ಗುರುತಿನ ಚೀಟಿ, ದಾಖಲೆಗಳನ್ನು ಕಳೆದುಕೊಂಡಿದ್ದೀರ? ಮತ್ತೆ ಅದರ ನಕಲು ಪ್ರತಿ ಪಡೆಯಲು ಆಯಾ ಕಛೇರಿಗಳ ಬಾಗಿಲು ಅಲೆಯುತ್ತಿದ್ದೀರಾ? ಇನ್ನು ಹಾಗೆ ಮಾಡಬೇಕಾಗಿಲ್ಲ. 
ಇದೇ ಬರುವ ಸಪ್ಟೆಂಬರ್ 1ರಿಂದನಿಮ್ಮ ಕಳೆದ್ ದಾಖಲೆಯ ಕುರಿತಂತೆ ದೂರು ಸಲ್ಲಿಸಲು ಮತ್ತು ಆ ದೂರಿನ ಸ್ಥಿತಿಯನ್ನು ಅರಿಯಲು ಆನ್ ಲೈನ್ ನಲ್ಲಿ ಹೋಗಿ ಒಂದು ಕ್ಲಿಕ್ ಮಾಡಿದ್ದರಾಯಿತು.
ಆರಂಭಿಕ ಹಂತದಲ್ಲಿ, ತಮಿಳುನಾಡು ಆರಕ್ಷಕ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಲಾಸ್ಟ್ ಡಾಕ್ಯುಮೆಂಟ್ ರಿಪೋರ್ಟ್ ಪೋರ್ಟಲ್ ಮೂಲಕ ಕಳೆದುಹೋದ ಪಾಸ್ ಪೋರ್ಟ್, ವಾಹನ ನೋಂದಣಿ ಪ್ರಮಾಣಪತ್ರ , ಡ್ರೈವಿಂಗ್ ಪರವಾನಗಿ(ಡಿಎಲ್), ಶಾಲಾ / ಕಾಲೇಜು ಪ್ರಮಾಣಪತ್ರ ಮತ್ತು ಐಡಿ ಕಾರ್ಡ್ ಬಗ್ಗೆ ದೂರುಗಳನ್ನು ನೀಡಬಹುದು.
ಈ ಯೋಜನೆಯು ಸಾಮಾನ್ಯ ಜನರ ದೀರ್ಘ ಕಾಲದ ಬೇಡಿಕೆಯಾಗಿತ್ತು. ಈಗ ತಮಿಳು ನಾಡಿನ ರಾಜ್ಯ ಪೊಲೀಸ್ ಇಲಾಖೆಯ ಇ ಗವರ್ನೆನ್ಸ್ ಕಾರ್ಯಕ್ರಮದಡಿಯಲ್ಲಿ ಕಾರ್ಯರೂಪಕ್ಕೆ ಬರುತ್ತಲಿದೆ೩.
ಲಾಸ್ಟ್ ಡಾಕ್ಯುಮೆಂಟ್ ಪೋರ್ಟಲ್ ಮೂಲಕ, ನೀವು ಆನ್ ಲೈನ್ ದೂರುಗಳನ್ನು ನೋಂದಾಯಿಸಬಹುದು, ಆನ್ ಲೈನ್ ನಲ್ಲಿ ತಮ್ಮ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು, ಎಫ್ಐಆರ್ / ಸಿ.ಎಸ್.ಆರ್, ಟ್ರ್ಯಾಕ್ ನಲ್ಲಿ ಪಾಲ್ಗೊಳ್ಳುವುದು, ಎಫ್ ಐಆರ್ ಮತ್ತು ನಾಪತ್ತೆಯಾದ ವ್ಯಕ್ತಿಗಳ ಬಾವಚಿತ್ರ ಮತ್ತು ಅಧಿಕೃತ ಅಪರಿಚಿತ ಮೃತದೇಹದ ವಿವರಗಳನ್ನು ಸಹ ವೆಬ್ ಸೈಟಿನಲ್ಲಿ  ದಾಖಲಿಸಬಹುದು.
ಈ ಆನ್ಲೈನ್ ಸೌಲಭ್ಯದ ಮೂಲಕ ಯಾವುದೇ ನಾಗರಿಕನು ದಾಖಲೆಗಳು ಲಾಶ್ಸ್ಟ್ ಆಗಿರುವುದನ್ನು ವರದಿ ಮಾಡಬಹುದು ಮತ್ತು ಲಾಸ್ಟ್ ಡಾಕ್ಯುಮೆಂಟ್ ರಿಪೋರ್ಟ್ (ಎಲ್ಡಿಆರ್) ಅನ್ನು ಯಾವುದೇ ವಿಳಂಬವಿಲ್ಲದೆ ಪಡೆಯಬಹುದು. ಇದು ಸಂಬಂಧಪಟ್ಟ ಇಲಾಖೆಯಲ್ಲಿ ನಕಲಿಗಾಗಿ ಅರ್ಜಿ ಸಲ್ಲಿಸಲು ಅವರಿಗೆ ಅವಕಾಶ ನೀಡುತ್ತದೆ. ಎಲ್ಡಿಆರ್ ನ ವ್ಯವಸ್ಥೆಯ ಬಗ್ಗೆ ಹೇಳುತ್ತಾ  ನೀಡುತ್ತಾ, ಪ್ರತಿ ರಿಪೋರ್ಟ್ ಸಹ ಆಧಾರ್ ಸಂಖ್ಯೆಯನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರನ್ನು ಫೈಲ್ ಮಾಡಿ
ದೂರು ಸಲ್ಲಿಸುವ ಸಂದರ್ಭದಲ್ಲಿ ಅರ್ಜಿದಾರರು ಸರ್ಕಾರ ನೀಡುವ ಫೋಟೋ ಐಡಿ ಯನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ಕಳೆದುಹೋದ ಡಾಕ್ಯುಮೆಂಟ್ ಗಳನ್ನು ವರದಿ ಮಾಡಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com