ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನಕ್ಕೆ ಮಂಗಳೂರು ನಗರ ಸಜ್ಜು

ಭಾರತ ಸಂತರಿಗೆ ತಪೋಭೂಮಿಯಾದರೆ ಸಾಧಕರಿಗೆ ಕರ್ಮಭೂಮಿ. ಸ್ವಾಮಿ ವಿವೇಕಾನಂದರುಚಸಂತರಾಗಿ ಸಾಧಕರಾದರೆ, ಅಕ್ಕ ನಿವೇದಿತೆ ಸಾದಕಿಯಾಗಿ ಸಂತರಾದರು. ಈರ್ವರೂ ಬದುಕಿದ್ದು ಭಾರತಕ್ಕಾಗಿ !
ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನಕ್ಕೆ ಮಂಗಳೂರು ನಗರ ಸಜ್ಜು
ಭಾರತ ಸಂತರಿಗೆ ತಪೋಭೂಮಿಯಾದರೆ ಸಾಧಕರಿಗೆ ಕರ್ಮಭೂಮಿ. ಸ್ವಾಮಿ ವಿವೇಕಾನಂದರುಚಸಂತರಾಗಿ ಸಾಧಕರಾದರೆ, ಅಕ್ಕ ನಿವೇದಿತೆ ಸಾದಕಿಯಾಗಿ ಸಂತರಾದರು. ಈರ್ವರೂ ಬದುಕಿದ್ದು ಭಾರತಕ್ಕಾಗಿ ! ಈ ಇಬ್ನರಿಂದಲೂ ರಚಿತವಾದ ,  ಕೋಟಿ ಕೋಟಿ ಮನಸ್ಸುಗಳಿಗೆ ಶತಶತಮಾನಗಳು ಉರುಳಿದರೂ ಸ್ಪೂರ್ತಿಯಾಗಬಲ್ಲಂತಹ ಸಾಹಿತ್ಯದ ಭಂಡಾರವೇ ನಮ್ಮ ಮುಂದಿದೆ . 
ಈ ವರ್ಷ ಅಕ್ಕ ನಿವೇದಿತಾರ 150 ನೇ ಜಯಂತಿಯನ್ನು ಯುವಾಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ಹಬ್ಬವನ್ನಾಗಿ ಆಚರಿಸುತ್ತಿದೆ. ಅದರ ಆದ್ಯ ಹಂತವೇ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ . ಯುವ ಮನಸ್ಸುಗಳಿಗೆ ರಾಷ್ಟ್ರದ ಕುರಿತು ಪ್ರೇರಣೆಯ ನಂದಾದೀಪವನ್ನು ಇನ್ನಷ್ಟು ಉಜ್ವಲವಾಗಿ ಬೆಳಗಿಸುವ ಉದ್ದೇಶದಿಂದ ಸಾಧಕರಿಬ್ಬರ ಸಾಹಿತ್ಯದ ಕುರಿತಾದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳುವ ಕನಸು ಕಂಡಿದೆ ಯುವಾಬ್ರಿಗೇಡ್.
ದೇಶದಲ್ಲಿಯೇ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದರ ಹಾಗೂ ಸೋದರಿ ನಿವೇದಿತಾರ ಸಾಹಿತ್ಯಗಳ ದೊಡ್ಡ ಮಟ್ಟಿನ ಉತ್ಸವ ನಡೆಯುತ್ತಿದೆ . ಕರಾವಳಿ ನಗರ ಮಂಗಳೂರು ಈ ಉತ್ಸವಕ್ಕೆ ಸಾಕ್ಷಿಯಾಗುತ್ತಿದೆ . ಫೆಬ್ರವರಿ 11 ಹಾಗೂ 12 ಅಂದರೆ ಶನಿವಾರ ಹಾಗೂ ಭಾನುವಾರ ಇಡೀ ನಗರವೇ  ಸಾಹಿತ್ಯ ರಸಲಹರಿಯಲ್ಲಿ ಮಿಂದೇಳಲಿದೆ. ಮಂಗಳೂರಿನ ಕೇಂದ್ರ ಮೈದಾನದ ಬೃಹತ್ ಪೆಂಡಾಲಿನಲ್ಲಿ ಅನೇಕ ವಿಭಿನ್ನ ಕಾರ್ಯಕ್ರಮಗಳ ಸುಲಲಿತ ಸಮ್ಮಿಶ್ರಣದೊಂದಿಗೆ ಮಾತಾಜಿ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ ಯವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಜರುಗಲಿದೆ .
ಮೊದಲ ದಿನ 11 ರಂದು ಬೆಳಗ್ಗೆ ಸ್ವಾಮಿ ವಿವೇಕಾನಂದರ ಹಾಗೂ ಅಕ್ಕ ನಿವೇದಿತಾರ ಪ್ರಕಟಿತ ಸಾಹಿತ್ಯ ಭಂಡಾರವನ್ನು ಯುವಕರು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಜಿಲ್ಲಾಧಿಕಾರಿ ಕಛೇರಿಯಿಂದ ನಗರ ಪ್ರದಕ್ಷಿಣೆ ಮಾಡಿ ಕೇಂದ್ರ ಮೈದಾನವನ್ನು ಪ್ರವೇಶಿಸಿ ಸಮ್ಮೇಳನ ಉದ್ಗಾಟನೆಗೊಳ್ಳಲಿದೆ . ಗುಜರಾತ್ ನ ಬರೋಡಾದ ರಾಮಕೃಷ್ಣ ಮಿಷನ್ ನ ಸ್ವಾಮಿ ನಿಖಿಲೇಶ್ವರಾನಂದ ಜೀ ಮಹಾರಾಜ್ , ಮಂಗಳೂರು ರಾಮಕೃಷ್ಣ ಮಿಷನ್ ನ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹಾಗೂ ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಜೀ ಮಹಾರಾಜರ ಅಮೃತ ಹಸ್ತದಿಂದ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ.  ಸಮ್ಮೇಳನದ ವಿಶೆಷ ಆಕರ್ಷಣೆ "ಪಶ್ಚಿಮದಲ್ಲಿ ವಿವೇಕಾನಂದ- ಪೂರ್ವದಲ್ಲಿ ನಿವೇದಿತಾ " ಪ್ರದರ್ಶಿನಿಯನ್ನು ಶ್ರೀಮತಿ ಸಂಧ್ಯಾ ಪೈ ಅವರು ಉದ್ಘಾಟಿಸಲಿದ್ದಾರೆ. ನೂರಾರು ಪ್ರತಿನಿಧಿಗಳು ಭಾಗವಹಿಸುವ ವಿಚಾರ ಮಂಥನದಲ್ಲಿ ಒಟ್ಟು ಆರು ಗೋಷ್ಟಿಗಳು ಸಮ್ಮೇಳನದ ವೇದಿಕೆಯಲ್ಲಿ ನಡೆಯಲಿವೆ. 

ನಿವೇದಿತೆಯ ವಿವೇಕಾನಂದ' ವಿಷಯದ ಬಗ್ಗೆ ಸಾಧನಾ ಆಶ್ರಮದ ಅಧ್ಯಕ್ಷರಾದ ಮಾತಾ ಯೋಗಾನಂದಮಯಿ,ವಿವೇಕಾನಂದರ ಭಾರತ' ವಿಷಯದ ಬಗ್ಗೆ ಮೈಸೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ನ ಸ್ಥಾಪಕ ಅಧ್ಯಕ್ಷರಾದ  ಡಾ! ಆರ್ ಬಾಲಸುಬ್ರಹ್ಮಣ್ಯಂ, 'ನಿವೇದಿತೆಯ ಸಾಂಸ್ಕೃತಿಕ ತಾಕಲಾಟಗಳು' ವಿಷಯದ ಬಗ್ಗೆ ಡಾ! ಗುರುರಾಜ್ ಕರ್ಜಗಿ  ಗುರು ಶಿಷ್ಯೆ' ವಿಷಯದ ಬಗ್ಗೆ ಮೈಸೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ನ ಕಾರ್ಯದರ್ಶಿಗಳಾದ ಡಾ! ಎಂ ಎ ಬಾಲಸುಬ್ರಹ್ಮಣ್ಯ ಅವರು ವಿಚಾರ ಮಂಡಿಸಲಿದ್ದಾರೆ. ಮೊದಲನೇ ದಿನದ ಎರಡನೆಯ ಭಾಗದಲ್ಲಿ "ಪ್ರೇರಣೆಯ ಮಾತುಗಳಿಗೆ ಪ್ರತಿನಿಧಿಗಳ ದನಿ ಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಂದ ವಿಚಾರ ವಿನಿಮಯ ನಡೆಯಲಿದೆ. 

ನಂತರ ರಾಷ್ಟ್ರ ಭಕ್ತಿ ಕುರಿತಾದ ಗೋಷ್ಠಿಯಲ್ಲಿ ಸ್ವಾತಂತ್ರ್ಯದ ಕಿಡಿ ವಿವೇಕಾನಂದ ವಿಷಯದ ಬಗ್ಗೆ ಮೀಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ವಿ ನಾಗರಾಜ್, 'ದಗದಗಿಸುವ ಸ್ವಾತಂತ್ರ್ಯ ಜ್ವಾಲೆ ನಿವೇದಿತ' ವಿಷಯವನ್ನು  ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಮಂಡಿಸಲಿದ್ದಾರೆ. "ನರೇಂದ್ರ ಭಾರತ" ಎಂಬ ವಿಶಿಷ್ಠ ಕಾರ್ಯಕ್ರಮ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ನಡೆಯಲಿದೆ . ಆದಿಚುಂಚನಗಿರಿ ಪೀಠದ ಸ್ವಾಮಿಗಳಾದ ನಿರ್ಮಲಾನಂದನಾಥ ಸ್ವಾಮಿಗಳು ಆಶಿರ್ವಚನ ನೀಡಲಿದ್ದಾರೆ. ಜೊತೆಗೆ 'ಕಿರಿಕ್ ಪಾರ್ಟಿ ' ಖ್ಯಾತಿಯ ರಕ್ಷಿತ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ. 

'ಜಗತ್ತಿಗೆ ಬೋಧಿಸಿದ ವಿವೇಕಾನಂದ' ವಿಷಯದ ಬಗ್ಗೆ ಎರಡನೇ ದಿನದ ಕಾರ್ಯಕ್ರಮದಲ್ಲಿ  ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಮಿತಿಯ ವಿಶೇಷ ಅಧಿಕಾರಿಯಾದ ಡಾ! ತೇಜಸ್ವಿನಿ, "ಭಾರತೀಯರಿಗೆ ಶಿಕ್ಷಣ ನೀಡಿದ ನಿವೇದಿತಾ " ಬಗ್ಗೆ ಸಂವಹನ ತಜ್ಞೆ ಸೋದರಿ ಪೋಷಿಣಿ  ಅವರು ವಿಚಾರ ಮಂಡನೆ ಮಾಡಲಿದ್ದಾರೆ. ವಿವೇಕಾನಂದರ ರಾಜಯೋಗ " ವಿಷಯದ ಬಗ್ಗೆ ಸ್ವಾಮಿ ನಿರ್ಭಯಾನಂದ ಜೀ ಮಹಾರಾಜ್ ವಿಚಾರಗಳನ್ನು ಹಂಚಿಕೊಳ್ಳಲಿದ್ದು , "ನಿವೇದಿತೆಯ ಕರ್ಮಯೋಗ" ದ ಬಗ್ಗೆ ಕಲ್ಕತ್ತಾ ದ ಹೆಸರಾಂತ ಪತ್ರಕರ್ತ ಹಾಗೂ ಲೇಖಕರಾದ ಡಾ! ರಾಂತಿದೇವ್ ಸೇನ್ ಗುಪ್ತ ಅವರು ಪ್ರಸ್ತುತಪಡಿಸಲಿದ್ದಾರೆ. ಇದೇ ಗೋಷ್ಠಿಯಲ್ಲಿ "ಚಾರಿತ್ರಿಕ ದೃಷ್ಠಿಕೋನ" ದ ಬಗ್ಗೆ ಭವತಾರಿಣಿ ಆಶ್ರಮದ ಅಧ್ಯಕ್ಷರಾದ ಮಾತೆ ವಿವೇಕಮಯಿ ಅವರು ಹಾಗೂ " ವೈಜ್ಞಾನಿಕ ಮನೋಭಾವ" ವಿಷಯದ ಬಗ್ಗೆ ನಿವೃತ್ತ ಇಸ್ರೋ ವಿಜ್ಞಾನಿಗಳಾದ ಡಾ! ಟಿ ಜಿ ಕೆ ಮೂರ್ತಿ ಅವರು ವಿಚಾರ ಮಂಡಿಸಲಿದ್ದು ಒಟ್ಟಾರೆ ಎರಡು ದಿವಸಗಳಲ್ಲಿ ಸ್ವಾಮಿ ವೆವೇಕಾನಂದ ಹಾಗೂ ಅಕ್ಕ ನಿವೇದಿತಾರ ಸಾಹಿತ್ಯದ ಅನೇಕ ಆಯಾಮಗಳ ದರ್ಶನವಾಗಲಿದೆ. ನಂತರ ಜಿಲ್ಲೆಯಾದ್ಯಂತ 15 ಕ್ಕೂ ಮಿಕ್ಕ ಕಾಲೇಜುಗಳಲ್ಲಿ ಸಮಾನಾಂತರವಾಗಿ ಸ್ವಾಮಿ ವಿವೇಕಾನಂದರ ಹಾಗೂ ಅಕ್ಕ ನೊವೇದಿತಾರ ಸಾಹಿತ್ಯದ ಕುರಿತು ಅನೇಕ ಉಪನ್ಯಾಸಗಳು, ಚರ್ಚೆಗಳು "ಶಕ್ತಿ ಸ್ವರೂಪಿಣಿ " ಸ್ತ್ರೀ ಸಮಾವೇಶ , "ಗೆಲುವೇ ಗುರಿ" ಶಿರ್ಷಿಕೆಯಡಿ ಮಕ್ಕಳ ಸಮಾವೇಶ ಕಾರ್ಯಕ್ರಮಗಳು ನಡೆಯಲಿವೆ.  

ಒಮ್ಮೆ ಬಾಲ್ಯದಲ್ಲಿ ವಿವೇಕಾನಂದರು ನೀನು ಏನಾಗಲು ಬಯಸುತ್ತೀಯ ಎಂದು ಕೇಳಿದಾಗ ಸಾರೋಟುವಾಲ ಎಂದಿದ್ದರಂತೆ. ಅಟೋರಿಕ್ಷಾ ಚಾಲಕರೇ ತಾನೆ ಆಧುನಿಕ ಸಾರೋಟುವಾಲಗಳು ಅದಕ್ಕಾಗಿಯೇ ವಿಶೇಷವಾಗಿ ಅಟೋರಿಕ್ಷಾ ಚಾಲಕರ ಸಮಾವೇಶ " ರಾಷ್ಟ್ರರಥದ ಚಾಲಕ ಶಕ್ತಿ" ಯನ್ನು ಸಮಾನಾಂತರವಾಗಿ ನಗರದಲ್ಲಿ ಆಯೋಜಿಸಲಾಗಿದೆ. ಮೊಗವೀರರು ಹಾಗೂ ವಿವೇಕಾನಂದರದ್ದು ಅವಿನಾಭಾವ ಸಂಬಂಧ. ಅದಕ್ಕಾಗಿಯೇ ಮೊಗವೀರರ ಸಮಾವೇಶ " "ಅವಕಾಶಗಳ ಸಾಗರ" ಕೂಡಾ ಸಮ್ಮೇಳನದ ಭಾಗವಾಗಲಿದೆ . ವಿವೇಕಾನಂದರು ದೃಢವಾದ ದೇಹಕ್ಕೆ ಮಹತ್ವ ನೀಡಿದ್ದರು , ಅದರಿಂದಲೇ ಶಕ್ತವಾದ ಮನಸ್ಸು , ಸಮಾಜವನ್ನು ರೂಪಿಸಬಹುದು ಎಂದರು . ಆದ್ದರಿಂದಲೇ "ಸದೃಢ ದೇಹ ಸುಭದ್ರ ಭಾರತ" ಶಿರ್ಷಿಕೆಯ ಗರಡಿಯಾಳುಗಳ ಸಮಾವೇಶವನ್ನು ಸಮ್ಮೇಳನದ ಅಂಗವಾಗಿ ಪ್ರಸ್ತುತಪಡಿಸಲಾಗುತ್ತಿದೆ. ಅಷ್ಟೇ ಅಲ್ಲ. ಸಮ್ಮೇಳನದ ಪ್ರತಿಯೊಂದು ವಿಚಾರಗಳೂ ವಿವೇಕಮಯವಾಗಿರಲಿದೆ. ಮಧ್ಯಾಹ್ನದ ಭೋಜನ ಸಾಮಾನ್ಯವಲ್ಲ , ಅದು " ಪ್ರೇಮ ಪ್ರಸಾದ ". ಮೊದಲ ದಿನ ಮಧ್ಯಾಹ್ನ ಮಂಗಳೂರು ನಗರದ "ಸಂವೇದನಾ" ದ ಮಕ್ಕಳೊಂದಿಗೆ ಬೆಳಗಾವಿಯ ' ಆಶ್ರಯ ಫೌಂಡೇಷನ್ ನ ನಾಗರತ್ನ ಅವರು ಹಾಗೂ ಎರನೇ ದಿನ ರೋಮನ್ ಕ್ಯಾಥರಿನ್ ಅಂಧ ಮಕ್ಕಳ ಶಾಲೆಯ ಮಕ್ಕಳೊಂದಿಗೆ ಬೆಳಕು ಅಕ್ಯಾಡಮಿ ಯ ಕು. ಅಶ್ವಿನಿ ಅಂಗಡಿ ಅವರು ತಮ್ಮ ಪ್ರೇರಣೆಯ ಮಾತುಗಳ ಜೊತೆಗೆ ಸಹಭೋಜನವನ್ನ ಸವಿಯಲಿದ್ದಾರೆ .

ಎರಡನೇ ದಿನ ಅಂದರೆ ಫೆ.12 ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಗುಜರಾತ್ ರಾಜ್ ಕೋಟ್ ನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಸರ್ವಸ್ಥಾನಂದ ಜಿ ಮಹಾರಾಜ್ ಆಶೀರ್ವದಿಸಲಿದ್ದು , ಹಾಲೇಶ್ವರ ಸಂಸ್ಥಾನ ಮಠದ ಅಭಿನವ ಹಾಲಶ್ರೀ ಸ್ವಾಮಿಜಿ , ಕರ್ನಾಟಕ ಸರ್ಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್ ಕುಮಾರ್, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ್ ಹೆಗಡೆ ಅವರು ಉಪಸ್ಥಿತರಿರಲಿದ್ದಾರೆ.  ಈ ಸಾಹಿತ್ಯ ಉತ್ಸವಕ್ಕೆ ಸಾಕ್ಷಿಯಾಗಲು ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ, ಅಧ್ಯಾತ್ಮ ಯೋಗದ ಅಧ್ಯಕ್ಷರಾದ ಸುಬ್ರಹ್ಮಣ್ಯ ಆನಂದ ವೆಂಕಟ, ಖ್ಯಾತ ನರ ವಿಜ್ಞಾನಿಗಳಾದ ಉಷಾ ವಸ್ತಾರೆ ಹಾಗೂ ಅನೇಕ ಅಭ್ಯಾಗತರು ಆಗಮಿಸಲಿದ್ದಾರೆ. ಒಟ್ಟಾರೆ ವಿನೂತನ ರೀತಿಯ ಸಾಹಿತ್ಯ ಸಮ್ಮೇಳನಕ್ಕೆ ಮಂಗಳೂರು ನಗರ ಸರ್ವ ಸನ್ನದ್ಧವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com