11 ವರ್ಷಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಬಾಲಕ!

ಸಾಧನೆಗೆ ವಯಸ್ಸಿನ ಮಿತಿಯಿಲ್ಲ...ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಇಲ್ಲೊಬ್ಬ ಪುಟ್ಟ ಬಾಲಕ ಸಾಬೀತು ಪಡಿಸಿದ್ದಾನೆ...
ಅಗಸ್ತ್ಯ ಜಸ್ವಾಲ್
ಅಗಸ್ತ್ಯ ಜಸ್ವಾಲ್
ಹೈದರಾಬಾದ್: ಸಾಧನೆಗೆ ವಯಸ್ಸಿನ ಮಿತಿಯಿಲ್ಲ...ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಇಲ್ಲೊಬ್ಬ ಪುಟ್ಟ ಬಾಲಕ ಸಾಬೀತು ಪಡಿಸಿದ್ದಾನೆ. 
11 ವರ್ಷದ ಪುಟ್ಟ ಬಾಲಕನೊಬ್ಬ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. 
ಹೈದರಾಬಾದ್ ಮೂಲಕ 11 ವರ್ಷದ ಅಗಸ್ತ್ಯ ಜಸ್ವಾಲ್ ಅಚ್ಚರಿ ಮೂಡಿರುವ ಬಾಲಕನಾಗಿದ್ದಾನೆ. ಈತನ ವಯಸ್ಸಿನ ಹುಡುಗರು ಈಗ 6 ಅಥವಾ 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರೆ, ಈ ಮಾತ್ರ ಈಗಾಲೇ ದ್ವಿತೀಯ ಪಿಯುಸಿ ಪರೀಕ್ಶೆ ಬರೆಯುವ ಮೂಲಕ ಸಾಧನೆ ಮಾಡಿದ್ದಾನೆ. ಜಸ್ವಾಲ್ ಮನೆಯಲ್ಲಿ ಇಂತಹ ಅಚ್ಚರಿಗಳು ಇದು ಮೊದಲನೇನಲ್ಲ. ಅಗಸ್ತ್ಯನ ಅಣ್ಣ ನೈನಾ ಜೈಸ್ವಾಲ್ ಅವರೂ ಕೂಡ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರನಾಗಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪಿಹೆಚ್ ಡಿ ಪದವಿಯನ್ನು ಪಡೆದಿದ್ದಾರೆ. ತಂಡೆ ಜಸ್ವಾಲ್ ಕೂಡ 15ನೇ ವಯಸ್ಸಿನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 
ಇದೀಗ ಸಾಧನೆ ಮಾಡಿರುವ ಅಗಸ್ತ್ಯ ಸೆಂಟ್ ಮೇರಿಸ್ ಜೂನಿಯರ್ ಕಾಜೇಲಿನ ವಿದ್ಯಾರ್ಥಿಯಾಗಿದ್ದು, ಪೌರನೀತಿ, ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳನ್ನು ಪರೀಕ್ಷೆಗಾಗಿ ಆಯ್ಕೆ ಮಾಡಿಕೊಂಡು ಹೈದರಾಬಾದಿನ ಚೈತನ್ಯ ಜುನಿಯರ್ ಕಲಾ ಶಾಲಾ ಜಿಬ್ಲಿ ಹಿಲರ್ ಕಾಜೇಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದಾನೆ. 
ತನ್ನ ಸಾಧನೆ ಕುರಿತಂತೆ ಮಾತನಾಡಿರುವ ಅಗಸ್ತ್ಯ ಜಸ್ವಾಲ್, 2ನೇ ವಯಸ್ಸಿನಲ್ಲಿ ನಾನು 300 ಪ್ರಶ್ನೆಗಳಿಗೆ ಉತ್ತರಿಸಿದ್ದೆ, 6ನೇ ವಯಸ್ಸಿನಲ್ಲಿ 3 ಸಾವಿರ ಪ್ರಶ್ನೆಗಳಿಗೆ ಉತ್ತರಿಸಿದ್ದೆ, 8ನೇ ವಯಸ್ಸಿನಲ್ಲಿಯೇ ನಾನು 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದೆ. ನಾನು ಯಾವುದನ್ನು ಕಂಠಪಾಠ ಮಾಡುವುದಿಲ್ಲ. ಓದಿದ್ದನ್ನು ಅರ್ಥಮಾಡಿಕೊಳ್ಳುತ್ತೇನೆ. ನಂತರ ಬರೆಯುತ್ತೇನೆ. ಓದುವುದು ನನಗೆ ಆಟದ ವಾತಾವರಣದಂತಿರುತ್ತದೆ. ನಾನು ಪ್ರತಿನಿತ್ಯ ಶಾಲೆಗೆ ಹೋಗುವುದಿಲ್ಲ. ನನ್ನ ಪೋಷಕರೇ ಮನೆಯಲ್ಲಿ ಹೇಳಿಕೊಡುತ್ತಾರೆ. ಐಎಎಸ್ ಅಧಿಕಾರಿಯಾಗಬೇಕೆಂಬುದು ನನ್ನ ಆಸೆಯಾಗಿದೆ ಎಂದು ಹೇಳಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com