ಬೆಂಗಳೂರಿನ ಕಳಪೆ ರಸ್ತೆಗಳ ಕಾಮಗಾರಿ, ಹೇಳೋರು ಕೇಳೋರು ಯಾರು ಇಲ್ಲ!

ಬೆಂಗಳೂರಿಗೆ ಒಂದು ಹೊಸ ಬಗೆಯ ಸಾಂಕ್ರಾಮಿಕ ರೋಗ ಆವರಿಸಿಕೊಂಡಿದೆ. ಇದು ಯಾರನ್ನ ಬೇಕಾದರೂ ಬಲಿ ತೊಗೋಬಹುದು. ಜಾತಿ, ಮತ, ಲಿಂಗ ಅನ್ನೋ ಬೇದ ಭಾವ ಮಾಡದೆ ಸಮವಾಗಿ ಎಲ್ಲರನ್ನು ಪೀಡಿಸುವ...
ಬೆಂಗಳೂರಿನ ಕಳಪೆ ರಸ್ತೆಗಳ ಕಾಮಗಾರಿ, ಹೇಳೋರು ಕೇಳೋರು ಯಾರು ಇಲ್ಲ!
ಬೆಂಗಳೂರಿಗೆ ಒಂದು ಹೊಸ ಬಗೆಯ ಸಾಂಕ್ರಾಮಿಕ ರೋಗ ಆವರಿಸಿಕೊಂಡಿದೆ. ಇದು ಯಾರನ್ನ ಬೇಕಾದರೂ ಬಲಿ ತೊಗೋಬಹುದು. ಜಾತಿ, ಮತ, ಲಿಂಗ ಅನ್ನೋ ಬೇದ ಭಾವ ಮಾಡದೆ ಸಮವಾಗಿ ಎಲ್ಲರನ್ನು ಪೀಡಿಸುವ ಈ ರೋಗ ಎಲ್ಲ ಆಡಳಿತ ವರ್ಗದ ಕೊಡುಗೆ. ಕಳೆದ ಹಲವಾರು ತಿಂಗಳಿಂದ ಈ ರೋಗ ಇನ್ನೂ ಹೆಚ್ಚಾಗಿದೆ. ಈ ರೋಗಕ್ಕೆ ಚಿಕೆತ್ಸೆನೇ ಇಲ್ಲದಂತಾಗಿದೆ ಆದರೂ ಹೇಳೋರು ಕೇಳೋರು ಯಾರು ಇಲ್ಲ!. ಈಗಾಗಲೇ ಈ ರೋಗ ಕೆಲವರ ಜೀವವನ್ನೇ ಬಲಿ ತಗೊಂಡಿದೆ, ಲೆಕ್ಕವಿಲ್ಲದಷ್ಟು ಜನರು ಪ್ರತಿ ನಿತ್ಯ ಈ ರೋಗದಿಂದ ಕಷ್ಟ ಪಡುತ್ತಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. 
ಅದೆಂಥ ಭಯಾನಕ ರೋಗ ಇರಬಹುದು? ಬೆಂಗಳೂರು ಅನ್ನೋ ದೊಡ್ಡ ಊರಿಗೆ ಈ ರೋಗ ಅಂಟಿಕೊಂಡಿರಬೇಕಾದರೆ ಈ ರೋಗದ ಶಕ್ತಿ ಏನಿರಬಹುದು? ಅಷ್ಟಕ್ಕೂ ಇದು ಯಾವ ರೋಗ ಇರಬಹುದು? ಈ ರೋಗದ ಬುಡ ಏನಿರಬಹುದು? ಒಂದು ಕ್ಷಣ ಯೋಚಿಸಿ ಬಹುಶಃ ನಿಮಗೆ ಈ ರೋಗದ ಬಗ್ಗೆ ಒಂದೆರಡು ಸುಳಿವು ಸಿಗಬಹುದು, ಇಲ್ಲದಿದ್ದರೆ ಮುಂದೆ ಓದಿ!
ರೋಗದ ಹೆಸರು:- ಬೆಂಗಳೂರಿನ ಕಳಪೆ ರಸ್ತೆಗಳ ಕಾಮಗಾರಿ
ರೋಗ ಹರಡೋ ಸಮಯ:-  ಸಾಮಾನ್ಯವಾಗಿ ಹರಡೋ ಈ ರೋಗ ಮಳೆ ಬಂದಾಗ ಇನ್ನೂ ಹೆಚ್ಚು ಪ್ರಮಾಣದಲ್ಲಿ ಹರಡುತ್ತದೆ. 
ರೋಗದ ಲಕ್ಷಣಗಳು:- ರಸ್ತೆಯಲ್ಲಿ ಓಡಾಡುವಾಗ ಬಿಳಿವುದು, ರಸ್ತೆಯ ಮಧ್ಯೆ ಇರೋ ಗುಂಡಿಗೆ ಚಕ್ರ ಸಿಕ್ಕಾಕಿಕೊಂಡು ಕೆಳಗೆ ಬಿದ್ದು ತಲೆಗೆ ಏಟು ಬೀಳುವುದು, ರಸ್ತೆಗಳಲ್ಲಿ ಚರಂಡಿ ಹರಿಯುದು, ಬೇಡವಾದ ಮೇಲ ಸೇತುವೆಗಳನ್ನು ಕಟ್ಟೋ ನೆಪದಲ್ಲಿ ಕಲ್ಲುಗಳನ್ನು ಹರಡಿ ಬೇಕಂತ ಹಾಳು ಮಾಡುವುದು ಇತ್ಯಾದಿ. 
ರೋಗದಿಂದ ಉಂಟಾಗುವ ತೊಂದರೆಗಳು:- ಸಣ್ಣ ಪುಟ್ಟ ಗಾಯಗಳಿಂದ ಆರಂಭವಾಗಿ ಕೊನೆಗೆ ಜೀವ ಹೋಗೋ ಸ್ಥಿತಿ ಕೂಡ ಬರಬಹುದು.
ರೋಗದ ಕಾರಣಗಳು:- ಸಮಾಜದಲ್ಲಿ ಇರೋ ಅವ್ಯವಸ್ಥೆ.
ಚಿಕಿತ್ಸೆ:- ಅದೊಂದು ಬರೀ ನಿರೀಕ್ಷೆ!.
ಐಟ್ ಸಿಟಿ ಬೆಂಗಳೂರಿನ ಸ್ಥಿತಿ ಇಂದಿಗೆ ಹೀನಾಯವಾಗಿದೆ, 60 ಲಕ್ಷಕ್ಕೂ ಹೆಚ್ಚು ವಾಹನ ಚಾಲಕರು ಇದೇ ಕಳಪೆ ರಸ್ತೆಗಳಲ್ಲಿ ತಮ್ಮ ಜೇವವನ್ನು ಒತ್ತೆ ಇಟ್ಟು ಪ್ರಯಾಣಿಸುತ್ತಾರೆ. ಎಲ್ಲಿ, ಯಾವ ಗುಂಡಿಗೆ ತಮ್ಮ ಕಾರೋ, ಬೈಕೋ ಸಿಕ್ಕಿ, ಬಿದ್ದು ಜೀವ ಕಳೆದುಕೊಳ್ಳುತ್ತೀವಿ ಅನ್ನೋ ಭಯದಲ್ಲಿ ಮನೆ ಬಿಡಬೇಕಾದರೆ ದೇವ್ರಿಗೆ ಪೂಜೆ ಮಾಡೋ ಪ್ರಮೇಯ ಇಂದಿಗೆ ನಮಗೆ ಬಂದಿದೆ. ಒಂದಷ್ಟು ಮಳೆ ಸುರಿದರೆ ಸಾಕು ನಮ್ಮ ರಸ್ತೆಗಳು ಹಿಮಾಲಯದ ಗಡಿ ಪ್ರದೇಶದ ರಸ್ತೆಗಳಂತೆ ಬಾಂಬುಕುಳಿಗಳು(Crater)  ಬೀಳುವುದು ಖಚಿತ, ಇದಲ್ಲದೆ BWSSB, ಮೆಟ್ರೋ ಕಾಮಗಾರಿ, ಕೇಬಲ್ wiring, ಹೀಗೆ ಹಲವಾರು ವಿಭಾಗಗಳು ಈ ರೋಗಕ್ಕೆ ತಮ್ಮದೇ ಆದ ಶೈಲಿಯಲ್ಲಿ ಸಹಾಯಮಾಡಿದ್ದಾರೆ.
ಇತ್ತೀಚಿಗೆ ಬೆಂಗಳೂರು ರಸ್ತೆ ಮತ್ತೊಂದು ವಾಹನ ಚಾಲಕನ ಜೀವವನ್ನು ಬಲಿ ತೊಗೊಂಡಿತು, ಇದು ಮೇಲ್ನೋಟಕ್ಕೆ ಆಕ್ಸಿಡೆಂಟ್ ಅಂತ ಅನ್ನಿಸಿಕೊಂಡರು ಬಹುತೇಕೆ ಜನರಿಗೆ ಇದರ ಕರಣ ಗೊತ್ತಿರೋ ವಿಷಯ, ಆದರೂ ನಮ್ಮಲಿ ಹೇಳೋರು ಕೇಳೋರು ಯಾರು ಇಲ್ಲ, ಅಕಸ್ಮಾತ ಯಾರೋ ಒಬ್ಬರೋ ಇಬ್ಬರೋ ಕೇಳಿದರೆ "ನಿಮ್ಮ ಹಿಂದನ ಸರಕಾರ ಕಿಸ್ದ್ದಿದ್ ಏನು?" ಅನ್ನೋ ಉತ್ತರ ಗ್ಯಾರಂಟೀ. 
ಯುರೊಪ್ ಮಾದರಿಯ ಅತಿ ಖರ್ಚಿನ Tender For Sure ರಸ್ತೆಗಳನನ್ನ ಕಟ್ಟೋ ಉತ್ಸಾಹದಲ್ಲಿ ನಮ್ಮ ಸರಕಾರ "ಮತ್ತೊಮೆ ಈ ರಸ್ತೆಗಳ್ಳನ್ನು ಇನ್ನು ಜನ್ಮೇಪಿ ಅಗಿಯೋಲ್ಲ" ಅಂತ ಘೋಷಣೆ ಮಾಡಿ ಉದ್ಘಾಟನೆ ಮಾಡಿದ್ದೇನೋ ನಿಜ ಆದ್ರೆ ಅದೇ Tender For Sure" ನ Cunningham road, Saint marks ರಸ್ತೆಗಳನ್ನು ಪುನಃ ಕಳೆದ ವಾರ ಅಗೆದು, ಹಾಳು ಮಾಡಿ ಯುರೊಪ್ ಮಾದರಿಯ ರಸ್ತೆಯನ್ನು 'ಇದು ಭಾರತದ ರಸ್ತೆ" ಅನ್ನೋ ನಿಜಾಂಶಕ್ಕೆ ನಮ್ಮನು ಅರಿವು ಮಾಡಿಕೊಡುವುದರಲ್ಲಿ ಸಫಲರಾಗಿದ್ದಾರೆ.    
ಒಂದು ಏರಿಯಾ ಗೆ ಒಬ್ಬ ಕಾರ್ಪೊರೇಟರ್, ಅವರ ಮೇಲೆ ಒಬ್ಬ MLA ಅವರ ಮೇಲೆ ಒಂದು ಎಂಪಿ, ಅದಲ್ಲದೆ ಸಿವಿಲ್ ಎಂಜಿನ್ನೇರ್, division ಎಂಜಿನ್ನೇರ್, BBMP ಎಂಜಿನ್ನೇರ್ ಹೀಗೆ ಹಲವಾರು ಚುನಾವಣೆ ಹಾಗು ಸರಕಾರದಿಂದ ನೇಮಕರಾಗುತ್ತಾರೆ, ಆದರೂ staff ಕೊರತೆ ಇಂದಾಗಿ ಖಾಸಗಿ ಕಂಟ್ರಾಕ್ಟರ್ಗಳಿಗೆ ರಸ್ತೆ ಕಟ್ಟೋ ಜವಾಬ್ದಾರಿಯನ್ನು ಕೊಟ್ಟು ಕಡೇಪಕ್ಷ ಕೆಲಸವನ್ನು ಸರಿಯಾಗಿ ಪರಿಶೀಲಿಸದೆ "ಸತ್ತರೆ ಸಾಯ್ಲಿ" ಅನ್ನೋ ಮನೋಭಾವನೆ ಇಂದಾಗಿ ಈ ಬೆಂಗಳೂರಿನಲ್ಲಿ " ಕಳಪೆ ರಸ್ತೆಗಳ ಕಾಮಗಾರಿ" ಸಾಂಕ್ರಾಮಿಕವಾಗಿ ಹರಡುತ್ತಿದೆ. ಇಂತಹ ದೊಡ್ಡ ಐಟಿ ಸಿಟಿ ಯಲ್ಲಿ ರಸ್ತೆ ಅಗಿಬೇಕಾದರೆ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಐಟಿ ಮುಖಾಂತರ ಒಂದು ಸಣ್ಣ ಜಾಲವನ್ನು ನಿರ್ಮಿಸಿ ಎಲ್ಲರ ಕಾಮಗಾರಿ ಅದ್ಮೇಲೇನೇ ಟಾರ್ ಹಾಕೋ ವಿಧಾನವನ್ನು ಸೃಷ್ಟಿಸುವುದಕ್ಕೆ ಆಗೋದಿಲ್ಲ ಅನ್ನೋದು ಹಾಸ್ಯಾಸ್ಪದ. ನಮ್ಮ ಸರ್ಕಾರ ಹಾಗು ಖುರ್ಚಿಯ ಅಧಿಪತಿಗಳು ತಮ್ಮದೇ ಕೆಲಸವನ್ನು ಸುಲಭ ಮಾಡಿಕೊಳ್ಳುವುದಕ್ಕೆ ಮಾಡಬಹುದಾಗಿತ್ತಲ್ವಾ ಅನ್ನೋದೇ ಕಾಡೋ ಅಂಶ. ಅದೆಷ್ಟು deadline ಗಳಾದವೋ ಲೆಕ್ಕನೆ ಇಲ್ಲ, ದಿನನಿತ್ಯ ರಸ್ತೆಯಲ್ಲಿ ಓಡಾಡಿ ಬಿದ್ದು ಸಾಯೋ ಜನರ ಲೆಕ್ಕ ಮಾತ್ರ ಹೆಚ್ಚಾಗ್ತಾ ಇದೆ ಆದರೂ ನಮ್ಮಲಿ ಹೇಳೋರು ಕೇಳೋರು ಯಾರು ಇಲ್ಲ! ಈ ರೋಗಕೆ ನಾವು ಚಿಕಿತ್ಸೆ ಹುಡುಕಬೇಕಾಗಿದೆ ಆದರೆ ನಮ್ಮನು ಯಾರು ಕೇಳೋದು ಇಲ್ಲ ಹೇಳೋದು ಇಲ್ಲ. 
-ಅಭಿಷೇಕ್ ಐಯ್ಯಂಗಾರ್
abhishek.iyengar@wemovetheatre.in

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com