ನಿಮಗೆ ಗೊತ್ತೆ? ಬೆಂಗಳೂರಿನಲ್ಲಿಯೂ ಇದೆ 'ಬರ್ಮುಡಾ ಟ್ರಯಾಂಗಲ್'!

ಹಲವು ನಿಗೂಢತೆಗಳನ್ನು ಅಡಗಿಸಿಕೊಂಡಿರುವ ಬರ್ಮುಡಾ ಟ್ರಯಾಂಗಲ್ ಬಗ್ಗೆನಾವೆಲ್ಲಾ ಕೇಳಿದ್ದೇವೆ, ಆದರೆ ಇದೇ ತರಹದ ಟ್ರಯಾಂಗಲ್ ಒಂದು ನಮ್ಮ ಬೆಂಗಳೂರಿನಲ್ಲಿಯೂ ಇದೆ ಎನ್ನುವ್ದು ಗೊತ್ತೆ?
ಹೂಡಿ ಮುಖ್ಯ ರಸ್ತೆ
ಹೂಡಿ ಮುಖ್ಯ ರಸ್ತೆ
Updated on
ಬೆಂಗಳೂರು: ಹಲವು ನಿಗೂಢತೆಗಳನ್ನು ಅಡಗಿಸಿಕೊಂಡಿರುವ ಬರ್ಮುಡಾ ಟ್ರಯಾಂಗಲ್ ಬಗ್ಗೆನಾವೆಲ್ಲಾ ಕೇಳಿದ್ದೇವೆ, ಆದರೆ ಇದೇ ತರಹದ ಟ್ರಯಾಂಗಲ್ ಒಂದು ನಮ್ಮ ಬೆಂಗಳೂರಿನಲ್ಲಿಯೂ ಇದೆ ಎನ್ನುವ್ದು ಗೊತ್ತೆ? ನಗರದ ಹೂಡಿ ರಸ್ತೆಯಲ್ಲಿ ಈ ಪ್ರದೇಶವಿದ್ದು ಅಲ್ಲಿ ಸುಮಾರು 40 ನಿಮಿಷಗಳ ಕಾಲ ವಾಹನಗಳು ನಾಪತ್ತೆಯಾಗುತ್ತವೆ ಮತ್ತು ಅದೇ ಜಾಗದಲ್ಲಿ ಪ್ರತ್ಯಕ್ಷವಾಗುತ್ತದೆ.
ಎರಡು ವರ್ಷಗಳ ಹಿಂದೆ ಹೂಡಿ ಮುಖ್ಯ ರಸ್ತೆ, ಗ್ರ್ಯಾಫೈಟ್ ಇಂಡಿಯಾ ಸಿಗ್ನಲ್‌ವರೆಗೆ, ಏಕ ಮುಖ ಸಂಚಾರ ಪ್ರಾರಂಭವಾಗಿದೆ. ಹೀಗಾಗಿ ವೈಟ್‌ಫೀಲ್ಡ್‌ ಸಮೀಪದ ಗೋಪಾಲನ್‌ ಗ್ರಾಂಡ್ಯೂರ್‌ ನಿವಾಸಿಗಳಿಗೆ ಈ ವೃತ್ತ ಎನ್ನುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಂಚಾರ ನಿಯಮದಿಂದಾಗಿ ಗ್ರಾಂಡ್ಯೂರ್‌ ನಿವಾಸಿಗಳು ಬರ್ಮುಡಾ ಟ್ರಯಾಂಗ್‌ ಸುತ್ತಾಡಿದ ರೀತಿಯಲ್ಲೇ ಸುತ್ತಾಡಿ ಸುಮಾರು 40 ನಿಮಿಷಗಳ ಬಳಿಕ ಮತ್ತೆ ಅದೇ ಜಾಗದ ಮೂಲಕ ಪ್ರಯಾಣ ಮುಂದುವರಿಸಬೇಕಾಗಿದೆ..
ಎರಡು ವರ್ಷದ ಹಿಂದೆ ವೈಟ್‌ಫೀಲ್ಡ್‌ ನ ವಿಆರ್‌ ಬೆಂಗಳೂರು ಮತ್ತು ಫೀನಿಕ್ಸ್‌ ಮಾಲ್‌ನಿಂದ ಹೊರ ಬರುವ ವಾಹನಗಳನ್ನು ಏಕ ಮುಖ ಸಂಚಾರ ಪ್ರಾರಂಭಿಸಲಾಗಿದೆ. ಇದರ ಪರಿಣಾಮ ಗೋಪಾಲನ್ ಗ್ರಾಂಡ್ಯೂರ್‌ ಹೊರ ಪ್ರದೇಶದಲ್ಲಿ ವಾಹನ ದಟ್ಟಣೆ ಏರಿಕೆಯಾಗಿದ್ದು ಗೋಪಾಲನ್‌ ಗ್ರಾಮಡ್ಯೂರ್‌ ಸುತ್ತ ವಾಸಿಸುವ 700ಕ್ಕೂ ಅಧಿಕ ನಿವಾಸಿಗಳ ಮೇಲೆ ಪ್ರಭಾವ ಭೀರಿದೆ. ಕೆಲ ಜನರು ಈ ಸಂಚಾರ ನಿಯಮವನ್ನು ಉಲ್ಲಂಘಸಿ ದಾರಿ ಮಧ್ಯದಿಂದಲೇ ಮತ್ತೊಂದು ರಸ್ತೆಗೆ ನುಗ್ಗಿ ಟ್ರಾಫಿಕ್‌ ಜಾಮ್‌ ಗೆ ಕಾರಣವಾಗುತ್ತಾರೆ. ಅಲ್ಲದೇ ಈ ಪ್ರದೇಶದಲ್ಲಿ ಹಲವಾರು ಬಾರಿ ಅಪಘಾತ ಕೂಡಾ ಸಂಭವಿಸಿದ್ದು, ಈ ವೇಳೆ ಹೆಚ್ಚಿನ ಟ್ರಾಫಿಕ್‌ ಜಾಮ್‌ ಸಂಭವಿಸುತ್ತದೆ.
ಅಲ್ಲಿನ ನಿವಾಸಿ ಹೇಮಲತಾ ಹೇಳುವಂತೆ , "ಒಂದು ವೇಳೆ ನಾವು ಕೆ.ಆರ್‌.ಪುರಂಗೆ ಪ್ರಯಾಣಿಸ ಬೇಕಿದ್ದರೆ,ಮಾರತ್ ಹಳ್ಳಿ ರಸ್ತೆ ಮಾರ್ಗವಾಗಿ ಗೋಪಾಲನ್‌ ಶಾಲೆ ಬಳಿ ತೆರಳಿ ಮತ್ತೆ ವೈಟ್‌ಫೀಲ್ಡ್‌ ಮುಖ್ಯ ರಸ್ತೆಯಲ್ಲಿ ಪ್ರಯಾಣಿಸಬೇಕು. ಒಟ್ಟಾರೆ ನಾವು ಹೊರಟ ಜಾಗದಿಂದ ಮತ್ತೆ ಅದೇ ಜಾಗಕ್ಕೆ ಹಿಂತಿರುಗಲು ಸುಮಾರು 40 ನಿಮಿಷ ಹಿಡಿಯತ್ತದೆ. ಹೀಗಾಗಿ ಈ ಜಾಗವನ್ನು ಬರ್ಮುಡಾ ಟ್ರಾಯಾಂಗಲ್‌ ಎಂದು ಕರೆಯುತ್ತೇವೆ".
ರಸ್ತೆ ಸಮಸ್ಯೆಯಿಂದಾಗಿ ಶಾಲಾ ಮಕ್ಕಳು ಸಹ ತೊಂದರೆ ಅನುಭವಿಸಿದ್ದು, "ಮಕ್ಳಳು ಶಾಲೆಯಿಂದ ಹೊರ ಬಳಿಕ ಮೆಸೇಜ್‌ ಬರುತ್ತದೆ, ಅಂದಾಜು ಸಮಯದ ಪ್ರಕಾರ ಮಕ್ಕಳು 25-30 ನಿಮಿಷದಲ್ಲಿ ಮನೆಗೆ ಬರಬೇಕು. ಆದರೆ ಈ ಸಂಚಾರ ದಡ್ಡಣೆಯಿಂದಾಗಿ ಮಕ್ಕಳು ಬರಲು ಗಂಟಗಳೇ ತಗುಲುತ್ತೆವೆ" ಎಂದು ಇಲ್ಲಿನ ನಿವಾಸಿಗಳು ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com