ಭಾರತೀಯ ಮೂಲದ ಈ ಬಾಲಕನೀಗ ವಿಶ್ವದ ಕಿರಿಯ ವಿಮಾನ ಚಾಲಕ

ಭಾರತ ಮೂಲದ ಯುಎಇ ಶಾಲಾ ಬಾಲಕನೊಬ್ಬ ಸಣ್ಣ ವಿಮಾನವನ್ನು ಚಾಲನೆ ಮಾಡುವ ಮೂಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ.
ಮನ್ಸೂರ್‌ ಅನೀಸ್‌
ಮನ್ಸೂರ್‌ ಅನೀಸ್‌
ದುಬೈ: ಭಾರತ ಮೂಲದ ಯುಎಇ ಶಾಲಾ ಬಾಲಕನೊಬ್ಬ ಸಣ್ಣ ವಿಮಾನವನ್ನು ಚಾಲನೆ ಮಾಡುವ ಮೂಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ.
ಶಾರ್ಜಾದ ದೆಹಲಿ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಮನ್ಸೂರ್‌ ಅನೀಸ್‌ ಈ ಸಾಧನೆ ಮಾಡಿದ್ದಾನೆ, ಕಳೆದ ವಾರ ಕೆನಡಾದ ಎಎಎ ವಿಮಾನಯಾನ ತರಬೇತಿ ಅಕಾಡೆಮಿಯಿಂದ ಪೈಲಟ್ ಪ್ರಮಾಣಪತ್ರ ಸ್ವೀಕರಿಸಿರುವನು ಎಂದು ಅರಬ್‌ ಮಾಧ್ಯಮಗಳು ವರದಿ ಮಾಡಿವೆ.
ಪಾರ್ಕಿಂಗ್‌ ನಲ್ಲಿ ನಿಲ್ಲಿಸಲಾಗಿದ್ದ ವಿಮಾನವನ್ನು ರನ್‌ವೇಗೆ ತಂದು ಹಾರಾಟ ಮಾಡಲು 10 ನಿಮಿಷ ತೆಗೆದುಕೊಂಡ ಮನ್ಸೂರ್‌, ಐದು ನಿಮಿಷ ಕಾಲ ಹಾರಾಟ ನಡೆಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.
‘ಸೆಸ್ನಾ152’ ವಿಮಾನದಲ್ಲಿ ಹಾರಾಟ ನಡೆಸಿದ ಬಾಲಕ ಸದ್ಯ ವಿದ್ಯಾರ್ಥಿ ವಿಮಾನ ಚಾಲನೆ ಪರವಾನಗಿ ಪಡೆದುಕೊಂಡಿದ್ದಾನೆ. ತರಬೇತಿ ಅಕಾಡೆಮಿ ನಡೆಸಿದ ಪರೀಕ್ಷೆ ವೇಳೆ ರೇಡಿಯೊ ಸಂವಹನ ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಿರುವ ಮನ್ಸೂರ್‌, ಶೇ 96 ಅಂಕ ಗಳಿಸಿದ್ದಾನೆ.
ಈವರೆಗೆ ವಿಶ್ವದ ಕಿರಿಯ ವಿಮಾನ ಚಾಲಕ ಎಂಬ ದಾಖಲೆ ಜರ್ಮನಿಯ 15 ವರ್ಷ‌ದ ಬಾಲಕನ ಹೆಸರಿನಲ್ಲಿತ್ತು. ಆತ ಒಟ್ಟು 34 ಗಂಟೆಗಳ ತರಬೇತಿ ಪಡೆದಿದ್ದ. ಮನ್ಸೂರ್‌  25 ಗಂಟೆಗಳ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com