ಪುಸ್ತಕ ವಿಮರ್ಶೆ: ಕ್ಲಾಸು -ಮಾಸು ಎಲ್ಲಾ ವರ್ಗಕ್ಕೂ ಬೇಕು 'ಹಣಕ್ಲಾಸು'!

ಇತ್ತೀಚೆಗಷ್ಟೇ ಬಿಡುಗಡೆಯಾದ ರಂಗಸ್ವಾಮಿ ಮೂಕನಹಳ್ಳಿ ಅವರ 'ಹಣಕ್ಲಾಸು' ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. Economic Times,Business Line ಇಂತ ಪತ್ರಿಕೆಗಳನ್ನು ಎಂದೂ ಬಿಡಿಸಿಯೂ ನೋಡದ ನಾನು....
ಹಣಕ್ಲಾಸು
ಹಣಕ್ಲಾಸು
ಇತ್ತೀಚೆಗಷ್ಟೇ ಬಿಡುಗಡೆಯಾದ ರಂಗಸ್ವಾಮಿ ಮೂಕನಹಳ್ಳಿ ಅವರ 'ಹಣಕ್ಲಾಸು' ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.   Economic Times,Business Line ಇಂತ ಪತ್ರಿಕೆಗಳನ್ನು ಎಂದೂ ಬಿಡಿಸಿಯೂ ನೋಡದ ನಾನು, economy, finance  ಆಧಾರಿತ ಬರಹಗಳು  ಕಬ್ಬಿಣದ ಕಡಲೆಯೇ ಸರಿ ಎಂಬ ಸಣ್ಣ ಅಳುಕಿನಿಂದಲೇ ಪುಸ್ತಕ ಓದಲು ಪ್ರಾರಂಭಿಸಿದೆ.  ಆದರೆ ರಂಗಸ್ವಾಮಿಯವರ ನಿರೂಪಣೆ ಎಷ್ಟು ಸರಳ ಎಂದರೆ, even a layman without any commerce background (ಓರ್ವ ಸಾಮಾನ್ಯ ಮನುಷ್ಯ ಕೂಡ) ಅವರು ಹಣಕಾಸಿನ ಬಗ್ಗೆ ಕೊಡುವ ಮಾಹಿತಿಯನ್ನು ಸುಲಭವಾಗಿ ಅರ್ಥೈಸಿಕೊಂಡು  ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಲೇಖನಗಳು ಸರಳವಾಗಿರುವುದರ ಜತೆಜತೆಗೆ ಆಳವಾದ ಜ್ಞಾನವನ್ನು ಹೊಂದಿದೆ. It has got a depth of knowledge & information in it. 
ಸಾಮಾನ್ಯ ಮನುಷ್ಯ ತನ್ನ ಜೀವನದಲ್ಲಿ ಎದುರಿಸಬಹುದಾದ ಹಣಕಾಸು - ಹೂಡಿಕೆ ಬಗೆಗಿನ ಗೊಂದಲಗಳು ,ಹಾಗೆಯೇ ಅವನ  ಮನದಲ್ಲಿ ಹಾದುಹೋಗುವ ಹತ್ತು ಹಲವು ಪ್ರಶ್ನೆಗಳಾದ  "ಒಂದು ಡಾಲರಿನ ಬೆಲೆ ಒಂದು ರೂಪಾಯಿ ಏಕಾಗಿರಬಾರದು? ಮಕ್ಕಳಿಗೂ ಬೇಕೇ ಹಣಕಾಸಿನ ಪಾಠ ? ಬದಲಾದ ನಿವೃತ್ತಿ ವ್ಯಾಖ್ಯೆ - ನಲವತ್ತು, ಹೊಸ ಐವತ್ತು !, ಮೊಬೈಲ್ ವಾಲೆಟ್ ಎಷ್ಟು ಸುರಕ್ಷಿತ ? ನಾವೇಕೆ ಹೆಚ್ಚು ಹೆಚ್ಚು ಹಣ ಮುದ್ರಿಸಿ ಬಡತನ ಹೋಗಲಾಡಿಸಿಕೊಳ್ಳಲು ಸಾಧ್ಯವಿಲ್ಲ ? GDP, GST, Inflation ಇತ್ಯಾದಿ ಯಾರನ್ನು ಕೇಳಬೇಕು ಅಂತ ಹಿಂಜರಿಯುವಂತ ಪ್ರಶ್ನೆಗಳಿಗೆ 'ಹಣಕ್ಲಾಸು' ನಲ್ಲಿ ಸರಳ ಉತ್ತರಗಳಿವೆ.  
ಕಾಲೇಜಿನಲ್ಲಿ ವಿಜ್ಞಾನವನ್ನು ಆಯ್ದುಕೊಳ್ಳುವ ಮಕ್ಕಳಿಗೆ ಒಂಭತ್ತನೇ ತರಗತಿಯಿಂದಲೇ BASE ತರಗತಿಗಳು ಇರುತ್ತವೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ನೋಂದಣಿ ಪಡೆಯಲು  ಇಚ್ಛಿಸುವ  ವಿದ್ಯಾರ್ಥಿಗಳಿಗೆ,  ರಂಗಸ್ವಾಮಿ ಅವರ 'ಹಣಕ್ಲಾಸು ' ಪುಸ್ತಕ ಪಠ್ಯಕ್ರಮದಲ್ಲಿ ಒಂದು ಕೈಪಿಡಿಯಂತೆ ಅಳವಡಿಸಿದ್ದೇ ಆದಲ್ಲಿ, ಮಕ್ಕಳಿಗೆ ಸಮಗ್ರ ವಾಣಿಜ್ಯದ ಒಂದು ಪಕ್ಷಿನೋಟ ಸಿಕ್ಕಂತಾಗಿ ಅವರಿಗೆ  'ಅರೆರೆ ವಾಣಿಜ್ಯ ಇಷ್ಟು ಸುಲಭವೇ ! yes,we can crack it ಅಂತ ಆತ್ಮವಿಶ್ವಾಸ ,ಉಮೇದು ಮೂಡುವುದರಲ್ಲಿ ಎರಡು ಮಾತಿಲ್ಲ!
'ಹಣಕ್ಲಾಸು' ಕೇವಲ ಹೂಡಿಕೆಗೆ ಸಂಬಂಧಪಟ್ಟ ಪುಸ್ತಕವಲ್ಲ. ಇದು ಎಲ್ಲೋ ಒಂದು ಕಡೆ  ಸೂಕ್ಷ್ಮವಾಗಿ ಜೀವನದ  ಪಾಠ, ರೀತಿ -ನೀತಿ ಕಲಿಸುತ್ತೆ. ಹಣವನ್ನು ಯಾವ ರೀತಿ ಹಿತಮಿತವಾಗಿ ಬಳಸಬೇಕು, financial discipline ಎಷ್ಟು ಅಗತ್ಯ ಎಂಬ ಅಂಶಗಳು 'You want to be rich or wealthy?' ಮತ್ತು ಇತರ ಬರಹಗಳು ಓದುಗನಿಗೆ ತಿಳಿಸಿಕೊಡುತ್ತವೆ. 
ಇನ್ನು ಈಗಷ್ಟೆ ಕೆಲಸಕ್ಕೆ ಸೇರಿ ದೊಡ್ಡ ಸಂಬಳ ಪಡೆಯುವ ಸಣ್ಣ ಹುಡುಗರಿಗೆ, ಕಿವಿ ಹಿಂಡದೆಯೇ ಒಂದು ಸಣ್ಣ ಎಚ್ಚರಿಕೆ ರವಾನಿಸ್ತಾರೆ ರಂಗಸ್ವಾಮಿಯವರು. 
ಪುಸ್ತಕದಲ್ಲಿ ಬರುವ ಉದಾಹರಣೆಗಳೋ ಬಹಳ ಸರಳ.' ರಾಮನ ಬಳಿ ನೂರು ರೂಪಾಯಿ ಇದೆ ಅಂತಿಟ್ಟುಕೊಳ್ಳಿ.  ಲಕ್ಷ್ಮಣನ ಬಳಿಯೂ ನೂರು ರೂಪಾಯಿ ಇದೆ'  ಅಂತಾರೆ ರಂಗಸ್ವಾಮಿ . ಆಗ ಒಬ್ಬ ಸಾಮಾನ್ಯ ಓದುಗ ಇದಕ್ಕೆ relate ಆಗ್ತಾನೆ. ಇದರ ಬದಲು ಅವರು ಮಿಲಿಯನ್ಸ್, ಬಿಲಿಯನ್ಸ್ ಎಂದಿದ್ದರೆ ಓದುಗ ಗಾಭರಿಗೆ ಬಿದ್ದು 'ಅಯ್ಯಪ್ಪೋ  ಇದೆಲ್ಲ ನಮ್ಮಂತೋರಿಗೆ ಅಲ್ಲಪ್ಪೋ, ಏನೋ ಚೆನ್ನಾಗಿ  ದುಡ್ಡು ಇಟ್ಟೋರಿಗೆ ' ಅಂತ ಮೊದಲ ಪುಟ ಮಗುಚುವ ಮುನ್ನವೇ ಪುಸ್ತಕ ಎತ್ತಿಟ್ಟುಬಿಡ್ತಾನೆ. ಆದರೆ ರಂಗಸ್ವಾಮಿ ಮೂಕನಹಳ್ಳಿ ಅವರ 'ಹಣಕ್ಲಾಸು'ನಲ್ಲಿ ಹಾಗಾಗೋಲ್ಲ.  ಮೊದಲ ಪುಟದಿಂದ ಕಡೆಯ ಪುಟದವರೆಗೂ ಓರ್ವ ಸಾಮಾನ್ಯ ಮನುಷ್ಯ ಸಹ ಇದು ನನಗಾಗೇ ಬರೆದಿರುವ ಲೇಖನಗಳು ಎಂಬಂತೆ ತನ್ನನ್ನು ತಾನು ಪುಸ್ತಕದಲ್ಲಿ ತೊಡಗಿಸಿಕೊಳ್ತಾನೆ.  
ಕನ್ನಡ ಸಾರಸ್ವತ ಲೋಕದಲ್ಲಿ 'ಹಣಕಾಸಿನ' ಬಗ್ಗೆ ಬಿಡುಗಡೆ ಆದ ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳಲ್ಲಿ ರಂಗಸ್ವಾಮಿ ಮೂಕನಹಳ್ಳಿ ಅವರ 'ಹಣಕ್ಲಾಸು' ತನ್ನದೇ ಆದ ಛಾಪು ಮೂಡಿಸಿದೆ. ಉತ್ತಮ ಹಾಗು ಸರಳ ನಿರೂಪಣೆಯ  ಜತೆಜತೆಗೆ ಎಲ್ಲ ವರ್ಗದ ಜನರಿಗೂ ಇದು relevant ಆಗಿದೆ.  ಈಗಷ್ಟೆ ಕೆಲಸಕ್ಕೆ ಸೇರಿರುವ ಯುವಪೀಳಿಗೆಯಿಂದ ಹಿಡಿದು,ನಿವೃತ್ತಿ ಹೊಂದಿರುವ ಅಥವ ನಿವೃತ್ತಿಯ ಅಂಚಿನಲ್ಲಿರುವ ಹಿರಿಯ ನಾಗರಿಕರವರೆಗೂ 'ಹಣಕ್ಲಾಸು'ಒಂದು ರೀತಿ ಕೈಪಿಡಿ ಅಂತಿದೆ. ಎಲ್ಲರು 'ಹಣಕ್ಲಾಸು ' ಕೊಂಡು ಓದಿ.ಅದರ ಪ್ರಯೋಜನ ನಿಮ್ಮ ವಿತ್ತ ಜೀವನದಲ್ಲಿ ಪಡೆಯಿರಿ.  
- ರಮಾ  ಎಂ ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com