ಇಲ್ಲಿದೆ ನೋಡಿ ನೀವೆಷ್ಟು ಪದ ಬರೆದಿದ್ದೀರೆಂದು ಎಣಿಸಿ ಹೇಳುವ ಪೆನ್!

ಜಮ್ಮು ಕಾಶ್ಮೀರದ ಗುರೇಝ್ ಕಣಿವೆ ಪ್ರದೇಶದ 9 ವರ್ಷದ ಬಾಲಕ ಮುಜಾಫರ್ ಅಹ್ಮದ್ ಖಾನ್ ನೂತನ ಪೆನ್ ಒಂದನ್ನು ಆವಿಷ್ಕರಿಸಿದ್ದಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶ್ರೀನಗರ(ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದ ಗುರೇಝ್ ಕಣಿವೆ ಪ್ರದೇಶದ 9 ವರ್ಷದ ಬಾಲಕ ಮುಜಾಫರ್ ಅಹ್ಮದ್ ಖಾನ್ ನೂತನ ಪೆನ್ ಒಂದನ್ನು ಆವಿಷ್ಕರಿಸಿದ್ದಾನೆ. ಈ ಪೆನ್ ನೀವೇನು ಬರೆದರೆ ನೀವು ಬರೆದ ಪದಗಳೆಷ್ಟು ಎನ್ನುವುದನ್ನು ಎಣಿಕೆ ಮಾಡಿ ಹೇಳಲಿದೆ!
"ಪೆನ್ನಿನ ಹಿಂಭಾಗದಲ್ಲಿ ಕವಚವಿದ್ದು ಯಾರೇ ಆಗಲಿ ಬರೆಯಲಾರಂಭಿಸಿದಾಗ ಅವರು ಬರೆದ ಪದಗಳ ಎಣಿಕೆಗೆ ತೊಡಗುತ್ತದೆ. ಇದಕ್ಕೆ ಲಗತ್ತಿಸಲಾದ ಸಣ್ಣ ಎಲ್ಸಿಡಿ ಮಾನಿಟರ್ ನಲ್ಲಿ ಈ ಸಂಖ್ಯೆ ಪ್ರದರ್ಶನಗೊಳ್ಳಲಿದೆ.ಇದನ್ನು ಮೊಬೈಲ್ ಫೋನ್ ನ ಸಂದೇಶದ ಮೂಲಕವೂ ಕಾಣಬಹುದಾಗಿದೆ"ಮುಜಾಫರ್ ಹೇಳಿದ್ದಾರೆ.
ನಾನು ಶಾಲೆಯಲ್ಲಿ ಕಡಿಮೆ ಅಂಕಗಳಿಸಿದ್ದಾಗ ನನ್ನ ತಲೆಯಲ್ಲಿ ಈ ಪದ ಎಣಿಕೆಯ ಪೆನ್ ಬಗ್ಗೆ ಯೋಚನೆ ಹೊಳೆದಿತ್ತು. "ತರಗತಿಯ ಪರೀಕ್ಷೆಯೊಂದರಲ್ಲಿ ನನಗೆ ಕಡಿಮೆ ಅಂಕ ಬಂದಿತ್ತು. ಶಿಕ್ಷಕರು ನೀನು ಕಡಿಮೆ ಬರೆದಿದ್ದೀಯೆ ಅದಕ್ಕೆ ಕಡಿಮೆ ಅಂಕ ಬಂದಿದೆ ಎಂದಿದ್ದರು. ಎಂದು ಹೀಗಾಗಿತ್ತೋ ಅಂದಿನಿಂದಲೂ ನನಗೆ ಈ ಪದಗಳ ಎಣಿಕೆ ಪೆನ್ ಬಗ್ಗೆ ಯೋಚನೆ ಪ್ರಾರಂಭವಾಗಿತ್ತು. ನಾನು ಇದನ್ನು ಆವಿಷ್ಕರಿಸಲು ಅದೇ ಕಾರಣವಾಗಿದೆ." ಅವರು ಹೇಳಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ (ಎನ್ಐಎಫ್) ಆಯೋಜಿಸಿದ ಫೆಸ್ಟಿವಲ್ ಆಫ್ ಇನ್ನೋವೇಶನ್ ಅಂಡ್ ಎಂತ್ರಪನ್ನರ್ಶಿಪ್ ಕಾರ್ಯಕ್ರಮದಲ್ಲಿ ಈ ಬಾಲಕನ ಪೆನ್ ಪ್ರದರ್ಶನಗೊಂಡಿತ್ತು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಮೆಚ್ಚುಗೆ ಮಾತುಗಳನ್ನು ಆಡಿದ್ದರಲ್ಲದೆ ಮುಜಾಫರ್ ಅವರಿಗೆ ಬಹುಮಾನವನ್ನೂ ನೀಡಿದ್ದರು.
ಈ ಪೆನ್ ಮೇ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.ಎಂದಿರುವ ಮುಜಾಫರ್ ಎನ್ಐಎಫ್ ಈಗಾಗಲೇ ಪೆನ್ ಅನ್ನು ಮಾರುಕಟ್ಟೆಗೆ ಬಿಡಲು ನಿರ್ಧರಿಸಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com