ಇವರೇ ನೋಡಿ ಕಾಶ್ಮೀರದ ಮೊದಲ ಮುಸ್ಲಿಮ್ ಮಹಿಳಾ ಪೈಲಟ್!

ಕಾಶ್ಮೀರ ಎಂದರೆ ವಿವಾದ, ಉಗ್ರಗಾಮಿಗಳ ದಾಳಿ, ಸುಂದರ ದಲ್ ಸರೋವರಕ್ಕಷ್ಟೇ ಸುದ್ದಿಯಾಗುವ ರಾಜ್ಯ ಎಂದು ನಾವೆಲ್ಲಾ ಭಾವಿಸುತ್ತೇವೆ. ಆದರೆ ಇದೀಗ ಕಾಶ್ಮೀರಿ ಮುಸ್ಲಿಮ್ ಮಹಿಳೆಯೊಬ್ಬರು ....
ಇರಾಮ್​ ಹಬೀಬ್
ಇರಾಮ್​ ಹಬೀಬ್
ಶ್ರೀನಗರ: ಕಾಶ್ಮೀರ ಎಂದರೆ ವಿವಾದ, ಉಗ್ರಗಾಮಿಗಳ ದಾಳಿ, ಸುಂದರ ದಲ್ ಸರೋವರಕ್ಕಷ್ಟೇ ಸುದ್ದಿಯಾಗುವ ರಾಜ್ಯ ಎಂದು ನಾವೆಲ್ಲಾ ಭಾವಿಸುತ್ತೇವೆ. ಆದರೆ ಇದೀಗ ಕಾಶ್ಮೀರಿ ಮುಸ್ಲಿಮ್ ಮಹಿಳೆಯೊಬ್ಬರು ತಮ್ಮ ಸತತ ಪರಿಶ್ರಮದ ಫಲವಾಗಿ ಪೈಲಟ್ ಹುದ್ದೆ ಅಲಂಕರಿಸಿದ್ದಾರೆ.
30 ವರ್ಷದ ಇರಾಮ್​ ಹಬೀಬ್ ಈ ಸಾಧಕಿ ಮಹಿಳೆಯಾಗಿದ್ದು ಸಂಪ್ರದಾಯವಾದಿ ಮುಸ್ಲಿಂ ಸಮುದಾಯದಿಂದ ಬಂದ ಇವರಿಗೆ ಈಕೆ ಇದಕ್ಕಾಗಿ ಸಾಕಶ್ಃಟು ಹೋರಾಟ ನಡೆಸಬೇಕಾಯಿತು. ಆದರೆ ಯಾವುದಕ್ಕೆ ಅಂಜದೆ ಮುಂದುವರಿದ ಪರಿಣಾಮ ಇದೀಗ ತಮ್ಮ ಕನಸನ್ನು ನನಸಾಗಿಸಿಕೊಂಡಿರುವ ಇರಾಮ್ ಸೆಪ್ಟೆಂಬರ್ ನಿಂದ ಖಾಸಗಿ ಏರ್ ಲೈಲ್ಸ್ ಸಂಸ್ಥೆಯಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಇರಾಮ್ ತಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾ ಸಲಕರಣೆ ಪೂರೈಕೆದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪೈಲಟ್ ಆಗಬೇಕೆನ್ನುವುದು ಇರಾಮ್ ಬಾಲ್ಯದಿಂದಲೂ ಬೆಳೆಸಿಕೊಂಡಿದ್ದ ಮಹತ್ವಾಕಾಂಕ್ಷೆಯಾಗಿದ್ದು ಇದಕ್ಕಾಗಿ ಅವರು ಅರಣ್ಯ ಶಾಸ್ತ್ರ (forestry) ವಿಷಯದಲ್ಲಿ ಡಾಕ್ಟರೇಟ್ ಪಡೆಯುವ ವಿಚಾರವನ್ನು ಕೈಬಿಟ್ಟರು.
ಡೆಹ್ರಾಡೂನ್​ನಲ್ಲಿ ಅರಣ್ಯ ಶಾಸ್ತ್ರದಲ್ಲಿ ಪದವಿ ಮತ್ತು ಕಾಶ್ಮೀರದ ಶೇರ್​ ಎ ಕಾಶ್ಮೀರ್​ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಇವರು ಡಾಕ್ಟರೇಟ್ ಪಡೆಯಬೇಕು ಎನ್ನುವುದು ಪಾಲಕರ ಒತ್ತಾಸೆಯಾಗಿತ್ತು. ಆದರೆ ಕಳೆದ ಆರು ವರ್ಷಗಳಿಂದ ಸತತ ಮನವೊಲಿಕೆ ಬಳಿಕ ಡಾಕ್ಟರೇಟ್ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ ಪೈಲಟ್ ತರಬೇತಿಗಾಗಿ ಅಮೆರಿಕಾಗೆ ತೆರಳಿದ್ದಾರೆ.
ಅಮೆರಿಕದಲ್ಲಿ ಪೈಲಟ್​ ತರಬೇತಿ ಪಡೆದು 260 ಗಂಟೆ ವಿಮಾನ  ಹಾರಾಟ ನಡೆಸಿದ ಅನುಭವ ಹೊಂದಿದ ಇರಾಮ್ ಅಮೆರಿಕ ಮತ್ತು ಕೆನಡಾ ದೇಶಗಳ ವಾಣಿಜ್ಯ ಪೈಲಟ್​ ಲೈಸನ್ಸ್ ಹೊಂದಿದ್ದಾರೆ. ಅಲ್ಲದೆ ಬಹರೈನ್​ ಮತ್ತು ದುಬೈನಲ್ಲಿ ಏರ್​ಬಸ್​ 320 ವಿಮಾನ ಚಲಾಯಿಸಿ ಸೈ ಎನಿಸಿಕೊಂಡಿದ್ದಾರೆ.
"ನನ್ನ ಪೈಲಟ್ ಆಗುವ ಹಂಬ;ಲಕ್ಕೆ ತಂದೆಯ ಪ್ರೋತ್ಸಾಹ ದೊರಕಿತಾದರೂ ಸಂಬಂಧಿಗಳು, ಸ್ನೇಹಿತರು ಸಹಕರಿಸಿರಲಿಲ್ಲ. ಮುಖ್ಯವಾಗಿ ಕಾಶ್ಮೀರದ ಯುವತಿಯರಿಗೆ ಯಾವ ಸಂಸ್ಥೆಯೂ ಪೈಲಟ್ ಉದ್ಯೋಗ ನೀಡಲಾರದು ಎಂದು ಅವರು ವಾದಿಸಿದ್ದರು. ಆದರೆ ನಾನಿಂದು ಎಲ್ಲಾ ಅಡೆ ತಡೆಗಳನ್ನು ಮೀರಿ ಈ ಸ್ಥಾನಕ್ಕೆ ಬಂದಿದ್ದೇನೆ" ಇರಾಮ್  ಹೇಳಿದ್ದಾರೆ.
ಸಧ್ಯ ಇರಾಮ್  ವಾಣಿಜ್ಯ ಪೈಲಟ್ ಲೈಸನ್ಸ್ ಗಾಗಿ ನವದೆಹಲಿಯಲ್ಲಿ ತರಬೇತಿ ಹೊಂದುತ್ತಿದ್ದಾರೆ.
ಇದಕ್ಕೆ ಮುನ್ನ 2016ರಲ್ಲಿ ಕಾಶ್ಮೀರಿ ಪಂಡಿತೆಯಾಗಿರುವ ತಾನ್ವಿ ರೈನಾ ಕಾಶ್ಮೀರದ ಮೊದಲ ಮಹಿಲಾ ಪೈಲಟ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು.  ಕಳೆದ ವರ್ಷ, ಅಯೇಶಾ ಅಜೀಜ್ ಎಂಬ ಕಾಶ್ಮೀರಿ ಮಹಿಳೆ ಭಾರತದ ಅತ್ಯಂತ ಕಿರಿಯಪೈಲಟ್ ತರಬೇತಿನಿರತ ವಿದ್ಯಾರ್ಥಿನಿ ಎಂದು ಗುರುತಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com