ಅಂಧತ್ವವನ್ನು ಮೀರಿ ಕೃಷಿಯಲ್ಲಿ ತೊಡಗಿಕೊಂಡ ರೈತನ ಯಶೋಗಾಥೆ!

ಸೊರಬ ತಾಲೂಕಿನ ದೃಷ್ಟಿ ಹೀನ 62 ವರ್ಷದ ವ್ಯಕ್ತಿಯೊಬ್ಬರು ಅಂಧತ್ವವನ್ನು ಮೀರಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶೋಗಾಥೆ ಬರೆದಿದ್ದಾರೆ.
ಗುರುನಾಥ ಗೌಡ
ಗುರುನಾಥ ಗೌಡ
ಶಿವಮೊಗ್ಗ : ಸೊರಬ ತಾಲೂಕಿನ  ದೃಷ್ಟಿ ಹೀನ 62 ವರ್ಷದ ವ್ಯಕ್ತಿಯೊಬ್ಬರು ಅಂಧತ್ವವನ್ನು ಮೀರಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶೋಗಾಥೆ ಬರೆದಿದ್ದಾರೆ.
ಗುರುನಾಥ ಗೌಡ  ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡಿದ್ದರೂ ತನ್ನ  10 ಎಕರೆ ಜಮೀನಿನಲ್ಲಿ  ಕುಟುಂಬ ಸದಸ್ಯರು ಹಾಗೂ ಸ್ನೇಹಿತರ   ಬೆಂಬಲ  ಪಡೆದು ವಾಣಿಜ್ಯ ಬೆಳೆಯುವ ಮೂಲಕ ಯಶಸ್ಸು ಗಳಿಸಿದ್ದಾರೆ.
ಗುರುನಾಥ್ ಗೌಡ ರೈತ ಕುಟುಂಬದಿಂದ ಬಂದಿದ್ದು, ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು. ಪ್ರತಿದಿನ ಅವರು  ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮವನ್ನು ಕೇಳುತ್ತಿದ್ದಾರಂತೆ.  ರಸಗೊಬ್ಬರದಲ್ಲಿ ಪ್ರಮುಖ ರಾಸಾನಿಕ ಬಳಕೆ  ಕುರಿತಂತೆಯೂ ಕೇಳುತ್ತಿದ್ದಾಗಿ ಅವರು ಹೇಳುತ್ತಾರೆ. 
1981 ರಲ್ಲಿ ತಮ್ಮ ಜಮೀನಿನಲ್ಲಿ ವ್ಯವಸಾಯ  ಆರಂಭಿಸಿದ ಗುರುನಾಥ್ ಗೌಡ,   ವಾಣಿಜ್ಯ ಬೆಳೆಯಿಂದ ಉತ್ತಮ ಆದಾಯ ಸಂಪಾದಿಸಿ  ತನ್ನ ಸ್ವಂತ ಕಾಲ ಮೇಲೆ ನಿಲ್ಲಬಹುದು ಎಂದು ಯೋಚಿಸಿ ಅಡಿಕೆ, ಪೈನಾಪಲ್, ಪಪ್ಪಾಯ ಮತ್ತು  ಮೆಣಸು  ಬೆಳೆದು ಕೈ ತುಂಬಾ ಕಾಂಚಾಣ ಪಡೆಯುತ್ತಿದ್ದಾರೆ.
ಗುರುನಾಥ ಗೌಡ 16 ವರ್ಷ ಇದ್ದಾಗ, ಅವರ ತಂದೆ ಪುಟ್ಟಪ್ಪ ಗೌಡ  ಕಣ್ಣಿನ ಚಿಕಿತ್ಸೆಗಾಗಿ  ಡಾ. ಎಂ. ಸಿ ಮೋದಿ ಬಳಿಗೆ ಕರೆದುಕೊಂಡು ಹೋಗಿದ್ದರಂತೆ . ಆದರೆ, ಅವರು ಕೊಟ್ಟ ಭರವಸೆ ಈಡೇರಲಿಲ್ಲವಂತೆ.  1975 ರಲ್ಲಿ  ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಲಾಪುರಕ್ಕೂ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಆದರೆ, ದೀಪಾವಳಿ ಸಂದರ್ಭದಲ್ಲಿ ಪಟಾಕಿ  ಸಿಡಿದು  ಎರಡು ಕಣ್ಣನ್ನು ಕಳೆದುಕೊಂಡರಂತೆ.
ಈ ಘಟನೆಯಿಂದಾಗಿ ಬೇರೆಯವರಾಗಿದ್ದರೂ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಿಡುತ್ತಿದ್ದರು. ಆದರೆ. ಗೌಡರು ಆಗಲ್ಲ. 1981ರಲ್ಲಿ ಕೃಷಿ ಮಾಡಲು ಆರಂಭಿಸಿದ್ದು,  1984ರಲ್ಲಿ ಮೊದಲ ಬೆಳೆಯಾಗಿ ಅಡಿಕೆ ಬೆಳೆದಿದ್ದಾರೆ.  ಅಲ್ಲದೇ, ವ್ಯಾಪಾರ ಮಾಡಲು ಯೋಚಿಸಿ  ರಾಜ್ಯ ಹಣಕಾಸು ನಿಗಮದ ಬಳಿ ಸಾಲ ಪಡೆದು ಪ್ಲೋರ್ ಮಿಲ್ ಆರಂಭಿಸಿದ್ದಾರೆ. ಆದರೆ, ಗ್ರಾಹಕರ ಸಂಖ್ಯೆ ಇಳಿಮುಖವಾದ್ದರಿಂದ 2006ರಲ್ಲಿ ಅದನ್ನು ಮುಚ್ಚಿದ್ದಾರೆ.
ಪ್ಲೋರ್ ಮಿಲ್ ಮುಚ್ಚುವ ಮುಂಚಿತವಾಗಿ 2001ರಲ್ಲಿ  9 ಎಕರೆ ಜಮೀನಿನಲ್ಲಿ ಪೈನಾಪಲ್  ಬೆಳೆ ಬೆಳೆದಿದ್ದಾರೆ. ಈ ಕೃಷಿಗಾಗಿ ಧಾರವಾಡದ  ವಿವಿಯ ಪ್ರೋಫೆಸರ್ ದೀಕ್ಷಿತ್ ಅವರಿಂದ ಸಲಹೆ ಪಡೆದಿದ್ದಾಗಿ ಅವರು ಹೇಳುತ್ತಾರೆ.
 ಗೌಡ ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡಿದ್ದು, ತಾವೂ ಬೆಳೆದ ಪೈನಾಪಲ್ ದೆಹಲಿ , ಜಮ್ಮು-ಕಾಶ್ಮೀರ,  ರಾಜಸ್ತಾನ, ಗುಜರಾತ್, ಮತ್ತು ಪಂಜಾಬ್ ಗೆ ಹೋಗುತ್ತದೆ. ಇದು ಹೊಸ ನನ್ನಗೆ ಹೊಸ ಅನುಭವ ಎನ್ನುತ್ತಾರೆ.
ವಿಭಿನ್ನ ತಂತ್ರಜ್ಞಾನ
ಗೌಡ ಬೆಳೆಯುತ್ತಿರುವ ಸಸ್ಯಗಳಿಗೆ ವಿಭಿನ್ನ ಬಣ್ಣದ ಬಟ್ಟೆಗಳನ್ನು ಜೋಡಿಸುತ್ತಾರೆ,. ಅವರ ಹೆಂಡತಿ ಈ ಸಸ್ಯಗಳ ದಾಖಲೆಯನ್ನು ಮತ್ತು ಅವರೊಂದಿಗಿನ ಸಮಸ್ಯೆಗಳನ್ನು ಉಳಿಸಿಕೊಳ್ಳುವಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದಾರೆ ಈ ರೀತಿಯಾದಾಗ ಯಾವ ಸಸ್ಯಕ್ಕೆ ಯಾವ ಚಿಕಿತ್ಸೆಯನ್ನು ನೀಡಬೇಕು ಎಂಬುದು ಅವರಿಗೆ ಗೊತ್ತಿದೆ.
ಕುಟುಂಬ ಹಿನ್ನೆಲೆ
ಗುರುನಾಥ್ ಗೌಡ ಸುಜಾತ ಅವರನ್ನು 1990ರಲ್ಲಿ ಮದುವೆಯಾಗಿದ್ದಾರೆ. ಈ ದಂಪತಿಗೆ  ಪ್ರತಿಭಾ ಮತ್ತು ಸುಷ್ಮಾ ಎಂಬ ಇಬ್ಬರು ಮಕ್ಕಳಿದ್ದಾರೆ. ಈ  ಮಧ್ಯೆ  ಪ್ರತಿಭಾ ಬೆಂಗಳೂರಿನ ಕಾಂಗ್ನಿಝಂಟ್   ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಸುಷ್ಮಾ ಬೆಂಗಳೂರಿನ ನಾಗಾರ್ಜನ ಕಾಲೇಜಿನಲ್ಲಿ  ಉಪನ್ಯಾಸಕಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com