ಗಣೇಶ ಚತುರ್ಥಿ ವಿಶೇಷ: ಗಣೇಶನ ವಿರಾಟ್ ಸ್ವರೂಪ ದರ್ಶನ ಮಾಡಿಸುವ ಭೂಸ್ವರ್ಗ ಕೇರಿ!

ನೀವು ಕರ್ಕಿ ಗ್ರಾಮದ ಭೂಸ್ವರ್ಗ ಕೇರಿಗೆ ಬಂದಿರಾದರೆ ನೀವೊಮ್ಮೆ ನಿಜಕ್ಕೂ ಭೂಮಿಯ ಮೇಲಿನ ಸ್ವರ್ಗದಲ್ಲಿದ್ದೇನೆಂದೇ ಭಾವಿಸುತ್ತೀರಿ.
ಮಣ್ಣಿನ ಗಣೇಶ ತಯಾರಿಯಲ್ಲಿರುವ ಸುರೇಶ್ ಭಂಡಾರಿ
ಮಣ್ಣಿನ ಗಣೇಶ ತಯಾರಿಯಲ್ಲಿರುವ ಸುರೇಶ್ ಭಂಡಾರಿ
ಹೊನ್ನಾವರ: ನೀವು ಕರ್ಕಿ ಗ್ರಾಮದ ಭೂಸ್ವರ್ಗ ಕೇರಿಗೆ ಬಂದಿರಾದರೆ ನೀವೊಮ್ಮೆ ನಿಜಕ್ಕೂ ಭೂಮಿಯ ಮೇಲಿನ ಸ್ವರ್ಗದಲ್ಲಿದ್ದೇನೆಂದೇ ಭಾವಿಸುತ್ತೀರಿ.  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿರುವ ಕರ್ಕಿ ಗ್ರಾಮದ  ಈ ಸಣ್ಣ ಕೇರಿಯಲ್ಲಿ ಪ್ರತಿ ಬೀದಿಯಲ್ಲಿ ಗಣೇಶ ವಿಗ್ರಹಗಳ ಸಾಲು ಕಾಣಬಹುದು.
ಇಲ್ಲಿನ ಜನರು ನೂರಾರು ಮಣ್ಣಿನ ಗಣೇಶ ವಿಗ್ರಹಗಳನ್ನು ತಯಾರಿಸಿ ಗಣೇಶ ಚತುರ್ಥಿಯ ವಿಶೇಷ ಪೂಜೆಗಾಗಿ ಸಿದ್ದವಾಗಿರುತ್ತಾರೆ. ಇಲ್ಲಿನ ಒಂದೊಂದು ಕುಟುಂಬವೂ ಸಹ ತಲೆಮಾರುಗಳಿಂದಲೂ ಇದೇ ಉದ್ಯೋಗ ಮಾಡುತ್ತಿರುವುದು ವಿಶೇಷ.
ಕರ್ಕಿಯ ಭಂಡಾರಿ ಕುಟುಂಬ ಇದಕ್ಕೊಂದು ಸಣ್ಣ ಉದಾಹರಣೆ. ಇವರು ಕಳೆದ ಮೂರು ತಲೆಮಾರುಗಳಿಂದ ಮಣ್ಣಿನ ಗಣೇಶ ವಿಗ್ರಹ ತಯಾರಿಯನ್ನು ಕಸುಬಾಗಿಸಿಕೊಂಡಿದ್ದಾರೆ. ಇವರು ಪ್ರತಿ ವರ್ಷ ಸುಮಾರು  400 ಗಣೇಶ ವಿಗ್ರಹಗಳನ್ನು ಮಾಡುತ್ತಾರೆ.
ಮಾನ್ಸೂನ್ ಆರಂಭದಲ್ಲಿ ಇದಕ್ಕಾಗಿ ಭಂಡಾರಿಗಳು ತಯಾರಿ ಪ್ರಾರಂಭಿಸುತ್ತಾರೆ. ಸ್ಥಳೀಯವಾಗಿ ಜೇಡಿ ಮಣ್ಣು ಎಂದು ಕರೆಯಲ್ಪಡುವ ಮಣ್ಣಿನಿಂದ ಈ ಮೂರ್ತಿಗಳನ್ನು ಮಾಡಲಾಗುತ್ತದೆ.ಮೂರ್ತಿಗಳನ್ನು ಹೆಚ್ಚಾಗಿ ಪರಿಸರ-ಸ್ನೇಹಿ ವಸ್ತುಗಳು ಮತ್ತು ಬಣ್ಣಗಳನ್ನು ಬಳಸಿ ತಯಾರಿಸಲಾಗುತ್ತದೆ. ಈ ಕುಟುಂಬದ ಹಿರಿಯರಾದ  ರಾಮಚಂದ್ರ ಭಂಡಾರಿ (66) ಅವರು ಬಾಲ್ಯದಿಂದಲೂ ವಿಗ್ರಹಗಳನ್ನು ಮಾಡುತ್ತಿದ್ದಾರೆ. ಅವರು ತಮ್ಮ ಅಜ್ಜನಿಂದ ಈ ಕಲೆಯನ್ನು ತಿಳಿದುಕೊಂಡರು.
ಘಟ್ಟ ಪ್ರದೇಶಗಳಲ್ಲಿ ಮಾನ್ಸೂನ್ ಮಳೆ ಅತಿ ಹೆಚ್ಚಾಗಿದ್ದು ನಮಗೆ ಕೆಲಸಗಳಿರುವುದಿಲ್ಲ.ಆ ದಿನಗಳಲ್ಲಿ ಹಿರಿಯರು ಮಣ್ಣಿನ ಗಣೇಶ ವಿಗ್ರಹ ರಚನೆಯಲ್ಲಿ ತೊಡಗುತ್ತಾರೆ.ಆಗ ನನ್ನ ತಂದೆ ಅಜ್ಜನಿಗೆ ಸಣ್ಣ ಪುತ್ಟ ಸಹಾಯ ಮಾಡುತ್ತಿದ್ದರು, ಈಗ ನಮ್ಮ ಕುಟುಂಬದ ಹಲವರು ಇದೇ ಉದ್ಯೋಗದಲ್ಲಿ ತೊಡಗಿದ್ದೇವೆ.ಎಂದು ರಾಮಚಂದ್ರ ಭಂಡಾರಿ ಹೇಳಿದ್ದಾರೆ. ಅವರ ಮಕ್ಕಳಲ್ಲಿ ಬೆಂಗಳೂರಿನಲ್ಲಿ ನೆಲೆಯಾಗಿರುವ ಒಂದು ಕುಟುಂಬದ ಹೊರತು ಮಿಕ್ಕ ಏಳು ಸದಸ್ಯರು ಸಹ ಇಂದಿಗೂ ವಿಗ್ರಹ ತಯಾರಿಕೆಯಲ್ಲೇ ತೊಡಗಿಕೊಂಡಿದ್ದಾರೆ.
"ನಮ್ಮ ಅಜ್ಜ ಕುಳಿತಿರುವ ಗಣೇಶ ವಿಗ್ರಹವನ್ನು ಮಾಡುತ್ತಿದ್ದರು. ಈ ಸಾಲಿನಲ್ಲಿ ನಾವು ಅಂತಹಾ ಎರಡು ವಿಗ್ರಹಗಳನ್ನು ರಚಿಸಬೇಕೆಂದು ತೀರ್ಮಾನಿಸಿದ್ದೇವೆ, ಹೊನ್ನಾವರದಲ್ಲಿರುವ ಸ್ಥಳೀಯ ಗಣೇಶ ಮಂಡಳಿಯು ಸಾಂಪ್ರದಾಯಿಕ ಗಣೇಶ ವಿಗ್ರಹಗಳಿಗೆ ಬೇಡಿಕೆ ಇಡುತ್ತದೆ(ಆರ್ಡರ್ ಮಾಡುತ್ತದೆ) ಪ್ರತಿ ತಲೆಮಾರಿಗೆ  ವಿಗ್ರಹಗಳನ್ನು ತಯಾರಿಸುವಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳ್ಲಾಗಿದೆ, ಆದರೆತಯಾರಿಕೆ ಶೈಲಿಯು ಮಾತ್ರ ಎಂದಿಗೂ ಅದೇ ರೀತಿಯಲ್ಲಿದೆ.ನಾವು ಶಿರಸಿ, ಕುಮಟಾಗಳಿಂದಲೂ ಮಣ್ಣನ್ನು ಸಂಗ್ರಹಿಸುತ್ತೇವೆ. ಇದರೊಡನೆ ಒಣ ಹುಲ್ಲನ್ನು ಸಹ ಬಳಸಿಕೊಳ್ಳುತ್ತೇವೆ" ಅವರು ಹೇಳಿದರು,.
ಕಿರಿಯ ಸಹೋದರ ಸುರೇಶ್ ಭಂಡಾ ಮಾತನಾಡಿ ""ಅನೇಕ ಜನರು ನಮ್ಮ ಕೆಲಸವನ್ನು ಶ್ಲಾಘಿಸುತ್ತಾರೆ ಆದರೆ ದುಡ್ಡಿನ ವಿಚಾರಕ್ಕೆ ಬಂದಾಗ ಚೌಕಾಸಿ ಮಾಡುತ್ತಾರೆ.ಐದು ಅಡಿ ಎತ್ತರದ ಗಣೇಶ ವಿಗ್ರಹವು 9,000-10,000 ರೂ. ಇದೆ, ಸಾಂಪ್ರದಾಯಿಕ ವಿಗ್ರಹ ತಯಾರಕರಿಗೆ ಸರ್ಕಾರವು ಕಲ್ಯಾಣ ಕ್ರಮಗಳನ್ನು  ತರಲು ಆಲೋಚಿಸುತ್ತಿದೆ ಎಂದಿದ್ದಾರೆ. ಅದೇನೆಂದು ನೋಡಬೇಕಿದೆ." ಎಂದರು.
"ನಾವು ವಿಗ್ರಹವ ಗಟ್ಟಿಯಾಗಿಸುವುದಕ್ಕಾಗಿ  ಮರದ ತುಂಡುಗಳನ್ನು ಅಥವಾ ಕಬ್ಬಿಣದ ರಾಡ್ ಗಳನ್ನು ಬಳಸುವುದಿಲ್ಲ.ಕೆಲವು ಹಳೆಯ ವಿಗ್ರಹಗಳು ಮತ್ತು ಛಾಯಾಚಿತ್ರಗಳನ್ನು ನೋಡಿ ಗ್ರಾಹಕರು ತಮಗೆ ಬೇಕಾದ ವಿಗ್ರಹದ ರೂಪವನ್ನು ನಿರ್ಧರಿಸುತ್ತಾರೆ. ಅನೇಕ ಖರೀದಿದಾರರು ಅಂತರ್ಜಾಲದಿಂದ ತೆಗೆದ ಚಿತ್ರಗಳೊಂದಿಗೆ ಆಗಮಿಸುತ್ತಾರೆ. ಇದರಂತೆ ನಾವು ವಿಗ್ರಹ ತಯಾರಿಸಿ ನಿಡುತ್ತೇವೆ.ಕೆಲವು ವಿಗ್ರಹಗಳ ಮೇಲೆ ಚಿನ್ನದ ಆಭರಣಗಳಿಗಾಗಿ ನಾವು ತಿಳಿ ಹಳದಿ ಅಥವಾ ಆಯಿಲ್ ಕಲರ್ ಉಪಯೋಗಿಸುತ್ತೇವೆ.
ಒಂದು ಬಾರಿ ಕಚ್ಚಾ ಮೂರ್ತಿಯ ತಯಾರಿ ಮಾಡಿದ ಬಳಿಕ, ನಾವು ಎಂಟು ಹತ್ತು ದಿನಗಳವರೆಗೆ ಸೂರ್ಯನ ಬೆಳಕಲ್ಲಿ ಈ ವಿಗ್ರಹವನ್ನು ಒಣಗಿಸಲು ಇಡುತ್ತೇವೆ.ಒಮ್ಮೆ ಸೂರ್ಯನ ಬಿಸಿಲಲ್ಲಿ ಒಣಗಿ ಗಟ್ಟಿಯಾದ ಬಳಿಕ ವಿಗ್ರಹವು ಬಣ್ಣ ತುಂಬಿಕೊಳ್ಳಲು ಸಿದ್ದವಾಗುತ್ತದೆ.ಹೀಗೆ ಬಣ್ಣ  ತುಂಬಿ ವಿಗ್ರಹ ಸಿದ್ದಗೊಳಿಸಲು ಕನಿಷ್ಟ 3-4 ದಿನಗಳು ಬೇಕಾಗುತ್ತದೆ, ಎಂದು ಅವರು ವಿವರಿಸಿದರು.
ಗ್ರಾಮದ ತಿಉಂಬೆಲ್ಲಾ ಗಣೇಶ
ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದಲ್ಲಿ ದಶಕಗಳಿಂದ ಕೈಯಿಂದ ಮಾಡಿದ ಮಣ್ಣಿನ ಗಣೇಶ ವಿಗ್ರಹಗಳನ್ನು ತಯಾರಿಸುವಲ್ಲಿ  ಭಂಡಾರಿ ಕುಟುಂಬ ತೊಡಗಿಕೊಂಡಿದೆ.ಇಲ್ಲಿ ಮಾಡಿದ ವಿಗ್ರಹಗಳನ್ನು ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಿಗೆ ಕಳುಹಿಸಲಾಗಿದೆ ವಿಗ್ರಹಗಳು ಹೆಚ್ಚಾಗಿ ನೈಸರ್ಗಿಕ ಬಣ್ಣಗಳು ಮತ್ತು ವಸ್ತುಗಳನ್ನು ಬಳಸುತ್ತವೆ.
ಶಿರಸಿಯಲ್ಲಿರುವ ಹೆಗ್ರಾಣಿ ಗ್ರಾಮದಿಂದ ಜೇಡಿ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ವಿಗ್ರಹವು ಕನಿಷ್ಟ  5-ಅಡಿ ಎತ್ತರವಿರುತ್ತದೆ.
ಗಣೇಶ ಹಬ್ಬದ ಬಳಿಕ , ಹೆಚ್ಚಿನ ಕುಟುಂಬದ ಸದಸ್ಯರುಇತರೆ ಉದ್ಯೋಗಗಳಿಗೆ ಹಿಂತಿರುಗುತ್ತಾರೆ.ಮೃದಂಗದಂತಹಾ ಸಂಗೀತ ಪರಿಕರ ತಯಾರಿಕೆಗೆ ಸಹ ಭಂಡಾರಿ ಕುಟುಂಬ ಹೆಸರಾಗಿದೆ.
ಕುಟುಂಬ ಸದಸ್ಯರಾದ ಸುರೇಶ್ ಭಂಡಾರಿ ತಾವು ಕರ್ಕಿ ಗ್ರಾಮದಲ್ಲಿ ಸ್ಟೇಷನರಿ ಮಳಿಗೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com