ನಿಮ್ಮ ಎಟಿಎಂ ಕಾರ್ಡ್ ಗಳನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ!

ಇತ್ತೀಚೆಗೆ ಎಟಿಎಂ ಕಾರ್ಡುಗಳನ್ನು ನಕಲು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರು ಹಣ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಎಟಿಎಂ ಕಾರ್ಡುಗಳನ್ನು ನಕಲು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರು ಹಣ ಕಳೆದುಕೊಂಡ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಪೊಲೀಸರ ದಾಖಲೆಗಳ ಪ್ರಕಾರ, ಬೆಂಗಳೂರು ನಗರವೊಂದರಲ್ಲಿಯೇ ಪ್ರತಿ ತಿಂಗಳು ಕನಿಷ್ಠ 15ರಿಂದ 20 ಪ್ರಕರಣಗಳು ದಾಖಲಾಗುತ್ತಿವೆ. ಜನರು ಲಕ್ಷಾಂತರ ರೂಪಾಯಿಗಳವರೆಗೆ ಕಳೆದುಕೊಂಡ ಪ್ರಕರಣಗಳು ಇತ್ತೀಚೆಗೆ ಹೆಚ್ಚು ದಾಖಲಾಗಿವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಇಂತಹ ಅಪರಾಧಗಳಿಗೆ ಸ್ಕಿಮ್ಮರ್ ಸಾಧನಗಳನ್ನು ಅಪರಾಧಿಗಳು ಬಳಸಿ ಎಟಿಎಂ ಕಾರ್ಡುಗಳ ವಿವರಗಳನ್ನು ಅಕ್ರಮವಾಗಿ ಪಡೆದುಕೊಂಡು ಅಂತಹ ಎಟಿಎಂಗಳನ್ನು ಕಿಯೊಸ್ಕ್ ಅಥವಾ ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರಗಳಲ್ಲಿ ಸೈಪ್ ಮಾಡಿ ಹಣವನ್ನು ಕದಿಯುತ್ತಾರೆ. ಕಿಯೊಸ್ಕ್ ನಲ್ಲಿ ಸ್ಕಿಮ್ಮರ್ ಪಿನ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ದಾಖಲೆಗಳನ್ನು ಸಂಗ್ರಹಿಸಿ  ಕದಿಯಲಾಗುತ್ತದೆ. ಅಪರಾಧಿ ನಂತರ ನಕಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ತಯಾರಿಸಿ ರೀಡರ್ ನಿಂದ ಲ್ಯಾಪ್ ಟಾಪ್ ಗೆ ದಾಖಲೆಗಳನ್ನು ವರ್ಗಾಯಿಸುತ್ತಾರೆ. ನಂತರ ನಕಲಿ ಕಾರ್ಡುಗಳ ಮೂಲಕ ಎಟಿಎಂ ಕಿಯೊಸ್ಕ್ ಮೂಲಕ ಹಣವನ್ನು ಪಡೆಯುತ್ತಾರೆ.

ಇನ್ನೊಂದು ವಿಧಾನ ಹೇಗೆಂದರೆ, ಅಪರಾಧಿ ಸ್ಕಿಮ್ಮರ್ ವಿಧದ ಸಾಧನವನ್ನು ಎಟಿಎಂ ಕಾರ್ಡು ತುದಿಯಲ್ಲಿ ಸಿಕ್ಕಿಸುತ್ತಾರೆ. ಮ್ಯಾಗ್ನೆಟಿಕ್ ಸ್ಟ್ರಿಪ್ ನಲ್ಲಿ ಮಾಹಿತಿಗಳನ್ನು ಓದುವ ಬದಗಿಲಿ ಚಿಪ್ ನಿಂದ ಸಾಧನವನ್ನು ತೆಗೆದು ಕಾರ್ಡಿನಲ್ಲಿ ದೊಡ್ಡ ತೂತನ್ನು ಮಾಡಿ ಖಾಲಿ ಕಾರ್ಡುಗಳಿಗೆ ಮುಂದಿನ ಬಳಕೆಗಾಗಿ ಒಳಸೇರಿಸುತ್ತದೆ. ಇಲ್ಲಿ ಕಾರ್ಡ್ ರೀಡರ್ ನ್ನು ಬಳಸಲಾಗುತ್ತದೆ.

ಇಂತಹ ಸಾಧನಗಳು ಮಾರುಕಟ್ಟೆಗಳಲ್ಲಿ ಸುಲಭವಾಗಿ ದೊರಕುತ್ತದೆ. ಇಂತಹ ಕಾರ್ಡು ನಕಲಿ ಮಾಡುವ ಗುಂಪೊಂದನ್ನು ಭೇದಿಸಿದ ಪೊಲೀಸ್ ಅಧಿಕಾರಿಯೊಬ್ಬರು,ಅಪರಾಧಿಗಳಿಗೆ ಮಾರುಕಟ್ಟೆಗಳಲ್ಲಿ ಸ್ಕಿಮ್ಮರ್ ಯಂತ್ರಗಳು ದೊರಕುತ್ತವೆ. ಇಂತಹ ಮೆಶಿನ್ ಗಳು ಆನ್ ಲೈನ್ ನಲ್ಲಿ ಕೂಡ ಸಿಗುತ್ತದೆ ಎಂದರು. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಪರೀಕ್ಷಿಸಿದಾಗ ಸುಮಾರು 7 ಸಾವಿರ ರೂಪಾಯಿಗಳಿಗೆ ಆನ್ ಲೈನ್ ನಲ್ಲಿ ಇಂತಹ ಸಾಧನಗಳು ಸಿಗುತ್ತವೆ ಎಂದು ಕಂಡುಬಂದಿದೆ.

ಬೆಂಗಳೂರಿನ ಗಾಂಧಿನಗರ ಮತ್ತು ಜೆಸಿ ರಸ್ತೆಯಲ್ಲಿ ಇಂತಹ ಮಾರುಕಟ್ಟೆಯನ್ನು ಕಂಡುಹಿಡಿದಿದ್ದು ಇಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ. ಈ ಬಗ್ಗೆ ಜನರಲ್ಲಿ ತಿಳುವಳಿಕೆ ಇಲ್ಲದಿರುವುದರಿಂದ ಕೂಡ ಇಂತಹ ಪ್ರಕರಣಗಳು ಹೆಚ್ಚಾಗುತ್ತವೆ. ಈ ಅಕ್ರಮಕ್ಕೆ ಸಿಲುಕಿ ಹಣ ಕಳೆದುಕೊಂಡವರಿಗೆ ಎಲ್ಲಿಗೆ ಬ್ಯಾಂಕಿಗೆ ದೂರು ನೀಡಬೇಕೆ ಅಥವಾ ಪೊಲೀಸರಿಗೆ ನೀಡಬೇಕೆ ಎಂದು ಸಹ ಗೊತ್ತಾಗುವುದಿಲ್ಲ ಎನ್ನುತ್ತಾರೆ ಪೊಲೀಸರು.

ಕಾರ್ಡುಗಳನ್ನು ಹೇಗೆ ನಕಲಿ ಮಾಡಲಾಗುತ್ತದೆ?: ಪ್ರತಿ ಡೆಬಿಟ್/ಕ್ರೆಡಿಟ್ ಕಾರ್ಡುಗಳಲ್ಲಿ ದಾಖಲೆಗಳು ಮತ್ತು ಅಂಕಿಅಂಶಗಳನ್ನೊಳಗೊಂಡ ಮ್ಯಾಗ್ನೆಟಿಕ್ ಸ್ಟ್ರಿಪ್ ಗಳಿರುತ್ತವೆ.

-ಸ್ಕಿಮ್ಮರ್ ಮೆಶಿನ್ ಗಳು ಸ್ಟ್ರಿಪ್ ಗಳನ್ನು ದಾಖಲಿಸಿಕೊಂಡು ಗ್ರಾಹಕರ ಖಾತೆ ಇತ್ಯಾದಿ ವಿವರಗಳನ್ನು ಪಡೆಯುತ್ತದೆ.

-ನಂತರ ದಾಖಲೆಗಳನ್ನು ಖಾಲಿ ಕಾರ್ಡುಗಳಿಗೆ ನಕಲು ಮಾಡಿಕೊಂಡು ನಕಲಿ ಹಣಕಾಸು ವರ್ಗಾವಣೆಗೆ ಬಳಸಲಾಗುತ್ತದೆ.

ಕಾರ್ಡ್ ಪಿನ್ ಓದಲು ಒವರ್ಲೆ ಸಾಧನಗಳನ್ನು ಬಳಸಲಾಗುತ್ತದೆ

ಮುನ್ನೆಚ್ಚರಿಕೆ: ಪಿಒಎಸ್(ಪಾಯಿಂಟ್ ಆಫ್ ಸೇಲ್) ಯಂತ್ರಗಳಲ್ಲಿ ಕಾರ್ಡುಗಳನ್ನು ಉಜ್ಜುವಾಗ ನಿಗಾವಹಿಸಿ.
ಹಣಕಾಸು ವಹಿವಾಟು ನಡೆಸಿದ್ದಕ್ಕೆ ರಶೀದಿ ಅಥವಾ ಎಸ್ಎಂಎಸ್ ಬಂದಿದೆಯೇ ಎಂದು ನೋಡಿಕೊಳ್ಳಿ.
ಎಟಿಎಂ ಕಿಯೊಸ್ಕ್ ನಲ್ಲಿ ಹಿಡನ್ ಕ್ಯಾಮರಾಗಳಿವೆಯೇ ಎಂದು ನೋಡಿಕೊಳ್ಳಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com