90ರ ಇಳಿವಯಸ್ಸಿನಲ್ಲೂ ಪಿಹೆಚ್‏ಡಿ ಪ್ರವೇಶ ಪರೀಕ್ಷೆ ಬರೆದ ಕೊಪ್ಪಳ ವಿದ್ಯಾರ್ಥಿ!

ತಾಲೂಕಿನ ಬಿಸರಳ್ಳಿ ಗ್ರಾಮದ ವೃದ್ದ ಶರಣ ಬಸವರಾಜ್ ಹಡ್ಲಿ, ಕಲಿಯುವ ಹಂಬಲಕ್ಕೆ ವಯಸ್ಸು ಅಡ್ಡಿಯಾಗಿಲ್ಲ. 91ರ ಇಳಿವಯಸ್ಸಿನಲ್ಲೂ ಪಿ. ಹೆಚ್. ಡಿ. ಪ್ರವೇಶ ಪರೀಕ್ಷೆ ಬರೆಯುವ ಮೂಲಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಶರಣ ಬಸವರಾಜ್  ಹಡ್ಲಿ ಪರೀಕ್ಷೆ ಬರೆಯುತ್ತಿರುವ ಚಿತ್ರ
ಶರಣ ಬಸವರಾಜ್ ಹಡ್ಲಿ ಪರೀಕ್ಷೆ ಬರೆಯುತ್ತಿರುವ ಚಿತ್ರ

ಕೊಪ್ಪಳ :ತಾಲೂಕಿನ ಬಿಸರಳ್ಳಿ ಗ್ರಾಮದ  ವೃದ್ದ ಶರಣ ಬಸವರಾಜ್ ಹಡ್ಲಿ,  ಕಲಿಯುವ ಹಂಬಲಕ್ಕೆ  ವಯಸ್ಸು ಅಡ್ಡಿಯಾಗಿಲ್ಲ. 91ರ  ಇಳಿವಯಸ್ಸಿನಲ್ಲೂ  ಪಿ. ಹೆಚ್. ಡಿ. ಪ್ರವೇಶ ಪರೀಕ್ಷೆ ಬರೆಯುವ ಮೂಲಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

ಶರಣ ಬಸವರಾಜ್ ಹಡ್ಲಿ ಮಂಗಳವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಯುವಕರೊಂದಿಗೆ ಪಿಎಚ್ ಡಿ ಪ್ರವೇಶ ಪರೀಕ್ಷೆ ಬರೆಯುವ ಚಿತ್ರ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲೆಯಾದ್ಯಂತ ಅವರದ್ದೇ ಮಾತಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶರಣ ಬಸವರಾಜ್ ಹಡ್ಲಿ, 1991-92ರ ಅವಧಿಯಲ್ಲಿ ನಿವೃತ್ತಿಗೂ ಮುಂಚೆ ಅನೇಕ ಕಡೆಗಳಲ್ಲಿ ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದನ್ನು ನೆನಪು ಮಾಡಿಕೊಂಡರು.

ಕೆಲ ವರ್ಷಗಳ ಹಿಂದೆ  ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರೂ ಪಿ. ಹೆಚ್. ಡಿ ಕೋರ್ಸ್ ಗಾಗಿ ಅರ್ಹವಿರುವ ಶೇ, 55 ರಷ್ಟು ಅಂಕಗಳನ್ನು ಅವರು ಪಡೆದಿಲ್ಲ. ಆದರೆ, ಕಳೆದ ವರ್ಷ ಬಳ್ಳಾರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಶೇ, 60 ರಷ್ಟು ಅಂಕಗಳನ್ನು ಪಡೆದಿರುವುದಾಗಿ ತಿಳಿಸಿದ್ದಾರೆ.

ವಯಸ್ಸಿನ ಬಗ್ಗೆ  ತಲೆಕೆಡಿಸಿಕೊಳ್ಳುವುದಿಲ್ಲ. ವಚನ ಸಾಹಿತ್ಯದಲ್ಲಿ ತಮ್ಮಗೆ ಆಸಕ್ತಿ ಇದ್ದು, ಭವಿಷ್ಯಕ್ಕಾಗಿ ನಿರಂತರವಾಗಿ ಪ್ರಯತ್ನಿಸುವುದಾಗಿ ಹೇಳುವ ಶರಣ ಬಸವರಾಜ್,  ವಚನ ಸಾಹಿತ್ಯದಲ್ಲಿ  ಪಿ. ಹೆಚ್. ಡಿ ಪದವಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಇದಲ್ಲದೇ, ಇವರು, ಕೆಲ ಗೀತೆಗಳನ್ನು ರಚಿಸಿದ್ದು, 15 ಪುಸ್ತಕಗಳನ್ನು ಬರೆದಿದ್ದಾರೆ. ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಹೊಂದಿರುವ ಇವರು ಉತ್ತಮವಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ನಾಲ್ವರು ಮಕ್ಕಳೂ ಸರ್ಕಾರಿ ಸೇವೆಯಲ್ಲಿದ್ದರೆ, ಇಬ್ಬರು ಪುತ್ರಿಯರೂ ನಿವೃತ್ತಿಯಾಗಿದ್ದಾರೆ.

 ಮುಂದಿನ ಪೀಳಿಗೆಯ ಕಲಿಕೆಗೆ ತಮ್ಮ ತಂದೆಯೇ ಸ್ಪೂರ್ತಿಯಾಗಿದ್ದಾರೆ ಎಂದು ಅವರ ಪುತ್ರರೊಬ್ಬರು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಅವರು ಪರೀಕ್ಷೆ ಬರೆಯುವ ವಿಡಿಯೋ ವೈರಲ್ ಆಗಿದ್ದು, ಅನೇಕ ಯುವಕರಿಗೆ ಪ್ರೇರಣೆಯಾಗಲಿದೆ ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com