ಸಂಗ್ರಹ ಚಿತ್ರ
ವಿಶೇಷ
ತಾಯಿ ಹೃದಯ: ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಯನ್ನು ಸಾಕಿ ಸಲಹುತ್ತಿರುವ ಸಿಂಹಿಣಿ, ವಿಡಿಯೋ ವೈರಲ್!
ಇದು ಚಿರತೆ ಮೊಗ್ಲಿ ಹಾಗೂ ಸಿಂಹಿಣಿ ರಕ್ಷಾ ಕಥೆ. ಹೌದು ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಯನ್ನು ಸಿಂಹಿಣಿಯೊಂದು ತನ್ನ ಮರಿಯಂತೆ ಹಾಲುಣಿಸಿ ನೋಡಿಕೊಳ್ಳುತ್ತಿದ್ದೆ.
ಇದು ಚಿರತೆ ಮೊಗ್ಲಿ ಹಾಗೂ ಸಿಂಹಿಣಿ ರಕ್ಷಾ ಕಥೆ. ಹೌದು ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಯನ್ನು ಸಿಂಹಿಣಿಯೊಂದು ತನ್ನ ಮರಿಯಂತೆ ಹಾಲುಣಿಸಿ ನೋಡಿಕೊಳ್ಳುತ್ತಿದೆ.
ಹೌದು, ಗುಜರಾತ್ ಭಾರತದ ಸಿಂಹಗಳ ತವರು ಎಂದು ಕರೆಯುತ್ತಾರೆ. ಇಲ್ಲಿ ಸಿಂಹಗಳ ಸಂಖ್ಯೆ ಸ್ವಲ್ಪ ಹೆಚ್ಚಿದೆ. ಇಲ್ಲಿ ಚಿರತೆಗಳು ಸಹ ವಾಸವಾಗಿದ್ದು ಚಿರತೆಯ ಮರಿಯೊಂದು ತಾಯಿಯಿಂದ ಬೇರ್ಪಟ್ಟಿದೆ. ಮರಿಯನ್ನು ಕಂಡ ಸಿಂಹಿಣಿ ತನ್ನ ಎರಡು ಮರಿಯೊಂದಿಗೆ ಚಿರತೆ ಮರಿಯ ಪೋಷಣೆಯಲ್ಲೂ ತೊಡಗಿದೆ.
ಇನ್ನು ಸಿಂಹಗಳು ತಂಡ ತಂಡವಾಗಿ ವಾಸಿಸುತ್ತವೆ. ಆದರೆ ಈ ಸಿಂಹಿಣಿ ಚಿರತೆ ಮರಿಗೋಸ್ಕರ ತನ್ನ ತಂಡದಿಂದ ಬೇರ್ಪಟ್ಟಿದೆ. ಅಲ್ಲದೆ ಬೇರೆ ಸಿಂಹಗಳು ಚಿರತೆ ಮರಿಯನ್ನು ಕೊಲ್ಲಬಹುದೆಂಬ ಆತಂಕದಿಂದ ತೂಸು ಜಾಗರೂಕವಾಗಿದೆ.
ಗಿರ್ ರಾಷ್ಟ್ರೀಯ ಅರಣ್ಯ ಉದ್ಯಾವನದಲ್ಲಿ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರೊಬ್ಬರು ಈ ಅಪರೂಪದ ದೃಶ್ಯಾವಳಿಗಳನ್ನು ಸೆರೆಹಿಡಿದು ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ