ಸೈನಿಕರು ಹುತಾತ್ಮಗೊಂಡಾಗ ದುಃಖಿಸಬೇಡಿ; ಹುತಾತ್ಮ ಯೋಧರ ಪತ್ನಿಚಾರುಲತಾ ಹೀಗೆ ಹೇಳಿದ್ದೇಕೆ?

ಸೈನಿಕರು ಹುತಾತ್ಮರಾದಾಗ ದುಃಖಿಸಬಾರದು ಎಂಬ ಚಾರುಲತಾ ಆಚಾರ್ಯ ಅವರ ಹೇಳಿಕೆ ಹಿಂದೆ ಬಹಳ ಅರ್ಥವಿದೆ. ಇವರು ...
ಚಾರುಲತಾ ಆಚಾರ್ಯ
ಚಾರುಲತಾ ಆಚಾರ್ಯ
ನವದೆಹಲಿ: ಸೈನಿಕರು ಹುತಾತ್ಮರಾದಾಗ ದುಃಖಿಸಬಾರದು ಎಂಬ ಚಾರುಲತಾ ಆಚಾರ್ಯ ಅವರ ಹೇಳಿಕೆ ಹಿಂದೆ ಬಹಳ ಅರ್ಥವಿದೆ. ಇವರು ಮಹಾವೀರ ಚಕ್ರ ಪದಕ ಪಡೆದ ಮೇಜರ್ ಪದ್ಮಪಾಣಿ ಆಚಾರ್ಯ ಅವರ ಪತ್ನಿ. ಇವರ ಪತಿ ಹುತಾತ್ಮರಾದಾಗ ಚಾರುಲತಾ ಆರು ತಿಂಗಳ ಗರ್ಭಿಣಿ. 
ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ಶತ್ರುಗಳ ವಿರುದ್ಧ ಹೋರಾಡುವಾಗ ಕೆಲವು ಯೋಧರನ್ನು ನಾವು ಕಳೆದುಕೊಳ್ಳಬಹುದು. ಇವರ ಕುಟುಂಬದವರು ಅವರನ್ನು ನಂಬಿಕೊಂಡವರು ಇರುತ್ತಾರೆ, ಇದೇ ಪರಿಸ್ಥಿತಿ ನನ್ನ ಜೀವನದಲ್ಲಿ ಕೂಡ ಆಯಿತು, ನನ್ನ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ, ಆದರೆ ಈ ರೀತಿ ಬೇರೊಬ್ಬರ ಜೀವನದಲ್ಲಿ ಆದರೆ ಅವರ ಮೇಲೆ ಪ್ರಭಾವ ಬೀರುವಲ್ಲಿ ನನ್ನ ಪಾತ್ರವಿದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ ಚಾರುಲತಾ.
ದುಃಖತಪ್ತ ಕುಟುಂಬಗಳಿಗೆ ಪರೋಪಕಾರದ ರೀತಿಯಲ್ಲಿ ಚಾರುಲತಾ 2015ರಿಂದ ಕೆಲಸ ಮಾಡುತ್ತಿದ್ದಾರೆ. ಇಂದು ಅವರೊಂದು ತಂಡ ಮಾಡಿಕೊಂಡಿದ್ದಾರೆ, ಅದರಲ್ಲಿ ಹುತಾತ್ಮ ಯೋಧರ ಕುಟುಂಬ ಸದಸ್ಯರು, ಇತರ ಕೆಲವು ನಾಗರಿಕರು ಸೇರಿ ದೇಶ್ ಎಂಬ ಸಂಘಟನೆ ಮಾಡಿಕೊಂಡಿದ್ದಾರೆ. ಹುತಾತ್ಮ ಯೋಧರ ಕುಟುಂಬಕ್ಕೆ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲ ನೀಡುವುದೇ ಈ ಸಂಘಟನೆ ಕೆಲಸ. ಇದಕ್ಕೆ ನಿರೂಪಕಿಯಂತೆ ಚಾರುಲತಾ ಕೆಲಸ ಮಾಡುತ್ತಾರೆ.
ಪ್ರಿಯಾ ಜೊತೆ ಮೊದಲ ಸಲ ಮಾತನಾಡಿದ ನೆನಪು ನನಗೆ ಈಗಲೂ ಇದೆ, ತಮ್ಮವರನ್ನು ಕಳೆದುಕೊಂಡ ತೀವ್ರ ನೋವಿನಲ್ಲಿದ್ದ ಪ್ರಿಯಾ ಅವರ ಧೈರ್ಯವನ್ನು ಮೆಚ್ಚತಕ್ಕದ್ದೆ. ಇಂದು ಅವರು ಕುಟುಂಬದವರನ್ನು ನಿಭಾಯಿಸುತ್ತಿರುವುದು, ಅವರನ್ನು ಬೆಳೆಸಿ ಪೋಷಿಸುತ್ತಿರುವ ರೀತಿ ನಿಜಕ್ಕೂ ಹೆಮ್ಮೆ ತರುತ್ತದೆ ಎನ್ನುತ್ತಾರೆ ಚಾರುಲತಾ.
ಒಳನುಸುಳುಕೋರರನ್ನು ಓಡಿಸುವಾಗ 2014ರ ಡಿಸೆಂಬರ್ ನಲ್ಲಿ ಹೋರಾಟ ಮಾಡುತ್ತಿರುವಾಗ ಲೆಫ್ಟಿನೆಂಟ್ ಕರ್ನಲ್ ಸಂಕಲ್ಪ್ ಕುಮಾರ್ ಗಾಯಗೊಂಡು ಹುತಾತ್ಮರಾಗಿದ್ದರು. ಅವರ ಪತ್ನಿ ಪ್ರಿಯಾ.
ಕಳೆದ ಫೆಬ್ರವರಿಯಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ನಿತಿಕಾ ಇತ್ತೀಚೆಗೆ ಚಾರುಲತಾಗೆ ಸಿಕ್ಕಿದ್ದರು. ಅಂತವರ ಮನೆಗೆ ನಿವೃತ್ತ ಮಿಲಿಟರಿ ಅಧಿಕಾರಿಗಳು, ಯೋಧರು ಭೇಟಿ ನೀಡಿ ಸಾಂತ್ವನ ಹೇಳುವುದು ಕೂಡ ಮುಖ್ಯ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com