ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತದಲ್ಲಿ ಇದೇ ಮೊದಲು: 3 ವರ್ಷದ ಮಗುವಿನ ದೇಹದಾನ ಮಾಡಿ ಮಾನವೀಯತೆ ಮೆರೆದ ಪೋಷಕರು!

ಅಂಗಾಂಗ ದಾನ ಮಾಡುವುದು ದೇಶದಲ್ಲಿ ಇತ್ತೀಚೆಗೆ ಎಲ್ಲೆಡೆ ಸ್ಪೂರ್ತಿಯಾಗಿದೆ, ಇದರಿಂದ ಎಲ್ಲಾ ಕಡೆ ಹಲವು ಮಂದಿ ಅಂಗಾಂಗ ದಾನ ಮಾಡುತ್ತಿದ್ದಾರೆ, ಆದರೆ ಇಲ್ಲೊಂದು ವಿಶಿಷ್ಟವಾದ ಪ್ರಕರಣ ನಡೆದಿದೆ,..
ಜೈಪುರ: ಅಂಗಾಂಗ ದಾನ ಮಾಡುವುದು ದೇಶದಲ್ಲಿ ಇತ್ತೀಚೆಗೆ ಎಲ್ಲೆಡೆ ಸ್ಪೂರ್ತಿಯಾಗಿದೆ, ಇದರಿಂದ ಎಲ್ಲಾ ಕಡೆ  ಹಲವು ಮಂದಿ ಅಂಗಾಂಗ ದಾನ ಮಾಡುತ್ತಿದ್ದಾರೆ, ಆದರೆ ಇಲ್ಲೊಂದು ವಿಶಿಷ್ಟವಾದ ಪ್ರಕರಣ ನಡೆದಿದೆ,
ಹುಟ್ಟಿನಿಂದಲೇ ಹೃದಯ ರೋಗದಿಂದ ಮೂರು ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿತ್ತು, ಆದರೆ ಆ ಮಗುವಿನ ಪೋಷಕರು ಮಗುವಿನ ದೇಹವನ್ನು ಮಣ್ಣು ಮಾಡದೇ ಮಗುವಿನ ದೇಹವನ್ನು ದಾನ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿ ಮಾದರಿಯಾಗಿದ್ದಾರೆ.
ಮೂರು ವರ್ಷದ ಬಾಲಕಿಯ ದೇಹವನ್ನು ಜೋಧ್ ಪುರ ಏಮ್ಸ್ ಗೆ ದಾನ ಮಾಡಲಾಗಿದೆ, ಇಷ್ಟು ಚತಿಕ್ಕ ವಯಸ್ಸಿನ ದೇಹದಾನ ಮಾಡಿರುವುದು ಇದೇ ಮೋದಲು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ, 
ಜೋಧ್ ಪುರ್ ರೋಡ್ ವೇಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಉಮೇದ್ ಸಿಂಗ್ ಮಗಳು ಜ್ಯೋತಿ ದೇಹವನ್ನು ದಾನ ಮಾಡಲಾಗಿದೆ, ಮೊದಲು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೆವು, ಆದರೆ ಅದು ಸಾಧ್ಯವಾಗದು ಎಂದು ತಿಳಿದಾಗ ದೇಹದಾನ ಮಾಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.
ನನ್ನ ಮಗಳ ದೇಹ ಇಡೀ ದೇಶಕ್ಕೆ ಉಪಯೋಗವಾಗುತ್ತದೆ ಎಂಬುದನ್ನು ತಿಳಿದಾಗ ನನ್ನ ಹೃದಯ ತುಂಬಿ ಬಂತು. ನಾವು ಯಾವಾಗಲು ಅವಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದೆವು, ಹೀಗಾಗಿ ನನ್ನ ಹೆಂಡತಿ ಜೊತೆ ಮಾತನಾಡಿ ಆಕೆಯನ್ನು ಒಪ್ಪಿಸಿ ಅಂಗಾಂಗ ದಾನ ಮಾಡಲು ನಿರ್ಧರಿಸಿದೆವು.
ಅದಕ್ಕಾಗಿ ಆಕೆಯ ದೇಹವನ್ನು ಜೋಧ್ ಪುರ ಆಸ್ಪತ್ರೆಗೆ ತಂದೆವು, ಆದರೆ ಅಂಗಾಂಗ ದಾನ ಮಾಡುವ ಸೌಲಭ್ಯ ಇಲ್ಲ ಎಂದು ವೈದ್ಯರು ಹೇಳಿದರು, ಹೀಗಾಗಿ ದೇಹದಾನ ಮಾಡಿದೆವು ಎಂದು ಹೇಳಿದ್ದಾರೆ.
ಜ್ಯೋತಿಯನ್ನು ಉಳಿಸಿಕೊಳ್ಳಲು ನಾವು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಿದೆವು,ಹಲವು ನಗರದಿಂದ ತಜ್ಞ ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಿದೆವು, ಆದರೆ .ಯಾವುದೇ ಪ್ರಯೋಜನವಾಗಲಿಲ್ಲ,
ಜೂನ್ 3 ರಂದು ಆಕೆಯ ಆರೋಗ್ಯ  ಹದಗೆಟ್ಟಿತ್ತು, ಆಗಾ ಜೋಧ್ ಪುರದ ಏಮ್ಸ್ ಆಸ್ಪತ್ರೆಗೆ ಕರೆತಂದೆವು, ಆಕೆಗೆ ಹೃದಯಾಘಾತವಾಗಿರುವುದಾಗಿ ವೈದ್ಯರು ಹೇಳಿದರು,.ಆಕೆಯನ್ನು ಐಸಿಯು ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಭಾನುವಾರ ಬೆಳಗ್ಗೆ ಆತ ಕೊನೆಯುಸಿರೆಳೆದಿದ್ದಾಳೆ, 
ಇಷ್ಟು ಸಣ್ಣ ವಯಸ್ಸಿನಲ್ಲಿಯೇ ದೇಹದಾನ ಮಾಡಿರುವುದು ಇದೇ ಮೊದಲಾಗಿದೆ ಎಂದು ವೈದ್ಯ ಡಾ. ಆಶೀಶ್ ನಯ್ಯರ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com