ಕರ್ನಾಟಕದಲ್ಲಿ ತಯಾರಾದ ತ್ರಿವರ್ಣ ಧ್ವಜ ಕಾಶ್ಮೀರದಲ್ಲಿ ಹಾರಾಡಿತು!

ಗುರುವಾರ ದೇಶದಾದ್ಯಂತ ಸಂಭ್ರಮ ಸಡಗರದ 73ನೇ ಸ್ವಾತಂತ್ರೋತ್ಸವ ಆಚರಣೆ  ನೆರವೇರಿದೆ. ಇದರೊಂದಿಗೇ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸ್ವಾತಂತ್ರೋತ್ಸವ ಸಂಭ್ರಮವನ್ನು ಇಮ್ಮಡಿಗೊಳಿಸುವ....
ಧ್ವಜ ತಯಾರಿಸುತ್ತಿರುವ ದೃಶ್ಯ
ಧ್ವಜ ತಯಾರಿಸುತ್ತಿರುವ ದೃಶ್ಯ

ಹುಬ್ಬಳ್ಳಿ: ಗುರುವಾರ ದೇಶದಾದ್ಯಂತ ಸಂಭ್ರಮ ಸಡಗರದ 73ನೇ ಸ್ವಾತಂತ್ರೋತ್ಸವ ಆಚರಣೆ  ನೆರವೇರಿದೆ. ಇದರೊಂದಿಗೇ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸ್ವಾತಂತ್ರೋತ್ಸವ ಸಂಭ್ರಮವನ್ನು ಇಮ್ಮಡಿಗೊಳಿಸುವ ಒಂದು ಸುಸಂದರ್ಭ ಒದಗಿದೆ. ಹುಬ್ಬಳ್ಳಿಯಲ್ಲಿ ತಯಾರಾದ ತ್ರಿವರ್ಣ ಧ್ವಜವನ್ನು ಜಮ್ಮು ಕಾಶ್ಮೀರದಲ್ಲಿ ಅಲ್ಲಿನ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹಾರಿಸಿ ಗೌರವ ಸೂಚಿಸಿದ್ದಾರೆ.ಇದು ಹುಬ್ಬಳ್ಳಿಯ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ  ಈ ಸ್ವಾತಂತ್ರೋತ್ಸವ ಬಂದಿರುವುದು ಅತ್ಯಂತ ಗಮನಾರ್ಹ ಸಂಗತಿ.

ಹುಬ್ಬಳ್ಳಿಯ ಬೆಂಗೇರಿಯಲ್ಲಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ನಡೆಸುತ್ತಿರುವ ಧ್ವಜ ತಯಾರಿಕಾ ಘಟಕದಲ್ಲಿ  ಆ ಧ್ವಜ ತಯಾರಾಗಿತ್ತು.

ಈ ವರ್ಷ ತ್ರಿವರ್ಣ ಧ್ವಜ ತಯಾರಿಕೆಗೆ ಬೇಡಿಕೆ ಹೆಚ್ಚಾಗಿದೆ ಎಂದು  ಸಂಘದ ಅಧಿಕಾರಿಯೊಬ್ಬರು ಪತ್ರಿಕೆಗೆ ಹೇಳಿದ್ದಾರೆ.ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲದೆ ಹರಿಯಾಣ, ಮಧ್ಯಪ್ರದೇಶದಂತಹಾ ರಾಜ್ಯಗಳಿಂದ ಸಹ ಹೆಚ್ಚುವರಿ ಧ್ವಜಗಳಿಗೆ ಬೇಡಿಕೆ ಬಂದಿದೆ.

"ನಾವು ನಮ್ಮ ಕಚ್ಚಾ ವಸ್ತುಗಳನ್ನು ಬಾಗಲಕೋಟೆ ಜಿಲ್ಲೆಯಿಂದ ಸಂಗ್ರಹಿಸುತ್ತೇವೆ, ಅಲ್ಲಿ ಮಹಿಳೆಯರು ಧ್ವಜಗಳಿಗೆ ಬಟ್ಟೆಗಳನ್ನು ತಯಾರಿಸುತ್ತಾರೆಅಂತಿಮವಾಗಿ ಬೆಂಗೇರಿಯಲ್ಲಿ  ಧ್ವಜ ಸಂಕೇತಗಳ ಮಾನದಂಡಗಳಿಗೆ ಅನುಗುಣವಾಗಿ ಧ್ವಜಗಳನ್ನು ಹೊಲಿಯಲಾಗುತ್ತದೆ" ಎಂದು ಅಧಿಕಾರಿ ವಿವರಿಸಿದರು.

ಭಾರತದಲ್ಲಿ ರಾಷ್ಟ್ರಧ್ವಜ ತಯಾರಿಕೆಗೆ ಬಿಐಎಸ್ ಪ್ರಮಾಣೀಕರಣ ಹೊಂದಿರುವ ಏಕೈಕ ಘಟಕ ಇದಾಗಿದೆ. ಪ್ರತಿ ವರ್ಷ, ಘಟಕವು ವಿವಿಧ ಗಾತ್ರದ 3 ಲಕ್ಷ ಖಾದಿ ತ್ರಿವರ್ಣಧ್ವಜಗಳನ್ನು ಉತ್ಪಾದಿಸುತ್ತದೆ. ಅವುಗಳಲ್ಲಿ ಅತ್ಯ್ಂತ ದೊಡ್ಡ ಗಾತ್ರದ  14x22 ಅಡಿ ಧ್ವಜ ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಮೇಲೆ ಹಾರಾಡುತ್ತದೆ

ಬೆಂಗಳೂರಿನ ವಿಧಾನ ಸೌಧ ಸೇರಿದಂತೆ ಸಂಸತ್ತು ಕಟ್ಟಡ, ರಾಜ್ಯ ವಿಧಾನಸಭೆ ಕಟ್ಟಡಗಳು ಸಹ ಇಲ್ಲಿ ತಯಾರಿಸಿದ ಧ್ವಜಗಳನ್ನು ಬಳಸುತ್ತದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com