ಬೀದಿಬದಿಯ ಮಕ್ಕಳಿಗಾಗಿ ಶಿಕ್ಷಣ ಕೇಂದ್ರಗಳನ್ನು ತೆರೆದ ಟ್ರಾಫಿಕ್ ಪೊಲೀಸ್!

ಬೀದಿ ಬದಿ ಭಿಕ್ಷೆ ಬೇಡುವ, ಚಿಂದಿ ಆಯ್ದು  ಬದುಕು ಸಾಗಿಸುವ ಸುಮಾರು 200 ಮಕ್ಕಳಿಗೆ ಸಂಚಾರಿ ಪೊಲೀಸರೊಬ್ಬರು ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.  ಬೀದಿ ಬದಿಯ ಮಕ್ಕಳ ಬದುಕಿನಲ್ಲಿ ಬದಲಾವಣೆ ತರುವ ಗುರಿಯೊಂದಿಗೆ ಒಂದೂವರೆ ವರ್ಷದ ಹಿಂದೆ ಪೊಲೀಸ್ ಪಾಠಶಾಲೆಯನ್ನು ಈ ಪೊಲೀಸ್ ಅಧಿಕಾರಿ ಪ್ರಾರಂಭಿಸಿದ್ದಾರೆ.
ಸಂಚಾರಿ ಡಿಸಿಪಿ ಅಂಕಿತ್ ಪಟೇಲ್  
ಸಂಚಾರಿ ಡಿಸಿಪಿ ಅಂಕಿತ್ ಪಟೇಲ್  

ಅಹ್ಮಮದಾಬಾದ್:  ಬೀದಿ ಬದಿ ಭಿಕ್ಷೆ ಬೇಡುವ, ಚಿಂದಿ ಆಯ್ದು  ಬದುಕು ಸಾಗಿಸುವ ಸುಮಾರು 200 ಮಕ್ಕಳಿಗೆ ಸಂಚಾರಿ ಪೊಲೀಸರೊಬ್ಬರು ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.  ಬೀದಿ ಬದಿಯ ಮಕ್ಕಳ ಬದುಕಿನಲ್ಲಿ ಬದಲಾವಣೆ ತರುವ ಗುರಿಯೊಂದಿಗೆ ಒಂದೂವರೆ ವರ್ಷದ ಹಿಂದೆ ಪೊಲೀಸ್ ಪಾಠಶಾಲೆಯನ್ನು ಈ ಪೊಲೀಸ್ ಅಧಿಕಾರಿ ಪ್ರಾರಂಭಿಸಿದ್ದಾರೆ.

ಸದ್ಯ ಇಂತಹ ಮೂರು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಂತಹ ಇನ್ನೊಂದಿಷ್ಟು ಕೇಂದ್ರಗಳನ್ನು ತೆರೆಯುವ ಯೋಚನೆಯಲ್ಲಿರುವುದಾಗಿ ಅವರು ಹೇಳಿದ್ದಾರೆ.ಈ ಕೇಂದ್ರಗಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಅವರು ಬರಲು ಉಚಿತ ವಾಹನದ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.ಮಕ್ಕಳನ್ನು ಈ ಕೇಂದ್ರಗಳಿಗೆ ಕರೆ ತರಲು ಸೈಕಲ್ ರಿಕ್ಷಾವನ್ನು ನಿಯೋಜಿಸಲಾಗುತ್ತಿದೆ. ಅಧ್ಯಯನದ ಅವಧಿಯಲ್ಲಿ ಉಚಿತವಾಗಿ ಊಟವನ್ನು ಸಹ  ನೀಡಲಾಗುತ್ತಿದೆ ಎಂದು ಟ್ರಾಫಿಕ್ ಪೊಲೀಸ್ ತಿಳಿಸಿದ್ದಾರೆ. 

ಬೀದಿ ಬದಿಯ ಮಕ್ಕಳಿಗೆ ಉತ್ತಮ ಜೀವನ ನೀಡುವ ನಿಟ್ಟಿನಲ್ಲಿ ಶಿಕ್ಷಣ ಕೇಂದ್ರಗಳನ್ನು ತೆರೆದಿರುವುದಾಗಿ ಸಂಚಾರಿ ಡಿಸಿಪಿ ಅಂಕಿತ್ ಪಟೇಲ್  ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 


ಬೀದಿ ಬದಿಯ ಮಕ್ಕಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ಹೆಚ್ಚು. ಆದ್ದರಿಂದ ಇಂತಹ ಮಕ್ಕಳ ಜೀವನದಲ್ಲಿ ಬದಲಾವಣೆ ತರಲು ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಈ ಕೇಂದ್ರಗಳಲ್ಲಿ ಮೂಲ ಜ್ಞಾನ ನೀಡಿದ ನಂತರ ಅವರನ್ನು ರೆಗ್ಯೂಲರ್ ಶಾಲೆಗಳಿಗೆ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com