ಎನ್‌ಪಿಆರ್: ಭಾರತೀಯ ನಿವಾಸಿಗಳ ಸಮಗ್ರ ಡೇಟಾಬೇಸ್ ಬಗ್ಗೆ ನೀವು ತಿಳಿಯಿರಿ

ಎನ್‌ಪಿಆರ್: ಎಂದರೇನು ಇಲ್ಲಿದೆ ಸಂಪೂರ್ಣ ವಿವರ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಎಂದರೇನು?
ಪೌರತ್ವ ಕಾಯ್ದೆ 1955 ಮತ್ತು ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ಸಮಸ್ಯೆಗಳು)ನಿಯಮ 2003 ನಿಯಮಗಳ ಅಡಿಯಲ್ಲಿ ಸ್ಥಳೀಯ, ಉಪ-ಜಿಲ್ಲೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುತ್ತಿರುವ ದೇಶದ ಸಾಮಾನ್ಯ ನಿವಾಸಿಗಳ ನೋಂದಣಿಯೇ ಎನ್‌ಪಿಆರ್.

ಸಾಮಾನ್ಯ ನಿವಾಸಿ ಯಾರು?
ಎನ್‌ಪಿಆರ್ ಅಡಿಯಲ್ಲಿ, ಭಾರತದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಗಳು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಕಳೆದ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ಥಳೀಯ ಪ್ರದೇಶದಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಅಥವಾ ಮುಂದಿನ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಆ ಪ್ರದೇಶದಲ್ಲಿ ವಾಸಿಸಲು ಉದ್ದೇಶಿಸಿರುವ ವ್ಯಕ್ತಿಯನ್ನು ಸಾಮಾನ್ಯ ನಿವಾಸಿ ಎಂದು ವ್ಯಾಖ್ಯಾನಿಸಲಾಗಿದೆ.

ಎನ್‌ಪಿಆರ್ ಉದ್ದೇಶವೇನು?
ಭಾರತದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಗಳ ಸಮಗ್ರ ಗುರುತಿನ ಡೇಟಾಬೇಸ್ ರಚಿಸುವುದು ಎನ್‌ಪಿಆರ್‌ನ ಉದ್ದೇಶವಾಗಿದೆ. ಈ ಡೇಟಾಬೇಸ್ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ಹೊಂದಿರುತ್ತದೆ. ಆಧಾರ್, ಮೊಬೈಲ್ ಸಂಖ್ಯೆ, ಚಾಲನಾ ಪರವಾನಗಿ, ಪ್ಯಾನ್, ಮತದಾರರ ಗುರುತಿನ ವಿವರಗಳು ಮತ್ತು ಭಾರತೀಯ ಪಾಸ್‌ಪೋರ್ಟ್ ಸಂಖ್ಯೆಗಳನ್ನು ಭಾರತದ ಎಲ್ಲಾ ಸಾಮಾನ್ಯ ನಿವಾಸಿಗಳಿಂದ ಸಂಗ್ರಹಿಸಲಾಗುವುದು. ಆದಾಗ್ಯೂ, ಈ ವಿಷಯದಲ್ಲಿ ಸುಪ್ರೀಂ ತೀರ್ಪಿನ  ದೃಷ್ಟಿಯಿಂದ ಆಧಾರ್ ಮಾಹಿತಿ ಹಂಚಿಕೊಳ್ಳುವಿಕೆ ಆಯಾ ವ್ಯಕ್ತಿಗಳ ಇಚ್ಚಾನುಸಾರವಾಗಿರಲಿದೆ.

ಯಾವೆಲ್ಲಾ ವಿವರಗಳು ಅಗತ್ಯ?
ವ್ಯಕ್ತಿಯ ಹೆಸರು
ಮನೆಯ ಮುಖ್ಯಸ್ಥನೊಂದಿಗಿನ ಸಂಬಂಧ
ತಂದೆಯ ಹೆಸರು
ತಾಯಿಯ ಹೆಸರು
ಸಂಗಾತಿಯ ಹೆಸರು (ಮದುವೆಯಾಗಿದ್ದರೆ)
ಲಿಂಗ
ಹುಟ್ತಿದ ದಿನ
ವೈವಾಹಿಕ ಸ್ಥಿತಿ
ಹುಟ್ಟಿದ ಸ್ಥಳ
ರಾಷ್ಟ್ರೀಯತೆ (ಘೋಷಿಸಿದಂತೆ)
ಈಗಿನ ವಿಳಾಸ
ಪ್ರಸ್ತುತ ವಿಳಾಸದಲ್ಲಿ ವಾಸ್ತವ್ಯದ ಅವಧಿ
ಶಾಶ್ವತ ವಸತಿ ವಿಳಾಸ
ಉದ್ಯೋಗ / ಚಟುವಟಿಕೆ
ಶೈಕ್ಷಣಿಕ ಅರ್ಹತೆ

ಎನ್‌ಪಿಆರ್ ಡೇಟಾವನ್ನು ಕೊನೆಯದಾಗಿ ಸಂಗ್ರಹಿಸಿದ್ದು ಯಾವಾಗ?
2011 ರ ಜನಗಣತಿಯ ದತ್ತಾಂಶ ಸಂಗ್ರಹಣೆಯ ಸಮಯದಲ್ಲಿ ಎನ್‌ಪಿಆರ್‌ಗಾಗಿ ಡೇಟಾವನ್ನು 2010 ರಲ್ಲಿ ಸಂಗ್ರಹಿಸಲಾಯಿತು.ಮತ್ತೆ 2015ರಲ್ಲಿ ಅದನ್ನು ನವೀಕರಿಸಲಾಗಿದೆ. ನವೀಕರಿಸಿದ ಮಾಹಿತಿಯ ಡಿಜಿಟಲೀಕರಣ ಪೂರ್ಣಗೊಂಡಿದೆ.

ಎನ್‌ಪಿಆರ್ ಅನ್ನು ಯಾವಾಗ ನವೀಕರಿಸಲಾಗುತ್ತಿದೆ?
ಅಸ್ಸಾಂ ಅನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ 2020 ರ ಏಪ್ರಿಲ್-ಸೆಪ್ಟೆಂಬರ್ ನಿಂದ ನವೀಕರಿಸಲಾಗುತ್ತದೆ ಈ ಕಾರ್ಯವು 2021ರ ಜನಗಣತಿಯ ಜೊತೆಗೆ ನಡೆಯಲಿದೆ.ಆದಾಗ್ಯೂ, ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರಗಳು ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆ ಜಾರಿಗೆ ಬಂದ ನಂತರ ಎನ್‌ಪಿಆರ್ ತಯಾರಿಕೆ ಮತ್ತು ನವೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಉಗೆ ತಡೆ ಹಾಕಿವೆ.

ಅಸ್ಸಾಂ ಅನ್ನು ಏಕೆ ಹೊರಗಿಡಲಾಗಿದೆ?
ಅಕ್ರಮ ವಲಸಿಗರನ್ನು ಗುರುತಿಸಿ ಬಂಧನ ಮಾಡುವ ಉದ್ದೇಶದಿಂದ ಅಸ್ಸಾಂನಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಜಾರಿಯಾಗುವುದರಿಂದ ಅದನ್ನು ಎನ್‌ಪಿಆರ್ ನಿಂದ ಹೊರಗಿಡಲಾಗಿದೆ.

ಎನ್‌ಪಿಆರ್ ಎನ್‌ಆರ್‌ಸಿಯಿಂದ ಹೇಗೆ ಭಿನ್ನವಾಗಿದೆ?
ಎನ್‌ಆರ್‌ಸಿ ಭಾರತದ ನಾಗರಿಕರ ವಿವರಗಳನ್ನು ಮಾತ್ರ ಒಳಗೊಂಡಿರುತ್ತದೆ ಮತ್ತು ಎನ್‌ಪಿಆರ್ ಆರು ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಭಾರತದಲ್ಲಿ ವಾಸಿಸುವ ವಿದೇಶಿಯರ ವಿವರಗಳನ್ನು ಸಹ ಒಳಗೊಂಡಿರುತ್ತದೆ.

ಎನ್‌ಪಿಆರ್ ಡೇಟಾವನ್ನು ಹೇಗೆ ಪ್ರವೇಶಿಸಬಹುದು?
ಪಾಸ್ವರ್ಡ್ ಸಂರಕ್ಷಿತ ಪ್ರೋಟೋಕಾಲ್ ಗಳ ಮೂಲಕ ಎನ್‌ಪಿಆರ್  ಡೇಟಾವನ್ನು ಸಂಬಂಧಿತ ಬಳಕೆದಾರ ಪ್ರವೇಶಿಸಬಹುದಾಗಿದೆ. ಇದನ್ನು ಸಾರ್ವಜನಿಕ ಬಳಕೆಗೆ ಇಡಲಾಗುವುದಿಲ್ಲ. ಫಲಾನುಭವಿ-ಆಧಾರಿತ ಯೋಜನೆಗಳ ಗುರಿಯನ್ನು ಹೆಚ್ಚಿಸಲು ಡೇಟಾವನ್ನು ಬಳಸಲಾಗುತ್ತದೆ ಮತ್ತು ಆಂತರಿಕ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಉಪಯೋಗಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com