ಲೇಹ್ ಮತ್ತು ಥಾಯಿಸ್ ಯುದ್ಧ ಭೂಮಿಯಲ್ಲಿ 1000 ಬಾರಿ ವಿಮಾನ ಲ್ಯಾಂಡಿಂಗ್ ಮಾಡಿದ ಪೈಲಟ್ ಗೆ ಐಎಎಫ್ ಸೆಲ್ಯೂಟ್!

ಯುದ್ಧ ಭೂಮಿಗಳಾದ ಲೇಹ್ ಮತ್ತು ಥಾಯಿಸ್ ನಂತಹ ಸವಾಲಿನ ಪ್ರದೇಶಗಳಲ್ಲಿ ಮಿಲಿಟರಿ...
ಕ್ಯಾಪ್ಟನ್ ಸಂದೀಪ್ ಸಿಂಗ್ ಛಬ್ರ
ಕ್ಯಾಪ್ಟನ್ ಸಂದೀಪ್ ಸಿಂಗ್ ಛಬ್ರ
ನವದೆಹಲಿ: ಯುದ್ಧ ಭೂಮಿಗಳಾದ ಲೇಹ್ ಮತ್ತು ಥಾಯಿಸ್ ನಂತಹ ಸವಾಲಿನ ಪ್ರದೇಶಗಳಲ್ಲಿ ಮಿಲಿಟರಿ ವಿಮಾನಗಳನ್ನು ಇಳಿಸಲು ಹೆಚ್ಚು ಕುಶಲತೆ ಮತ್ತು ಸ್ಪಷ್ಟ ನಿಖರತೆ ಇರಬೇಕಾಗುತ್ತದೆ. ಕ್ಯಾಪ್ಟನ್ ಸಂದೀಪ್ ಛಬ್ರ ಇವೆರಡೂ ಗುಣಗಳನ್ನು ಹೊಂದಿದ್ದು ಈ ಪ್ರದೇಶದಲ್ಲಿ ಸಾವಿರ ಬಾರಿ ಫ್ರೀ ಲ್ಯಾಂಡಿಂಗ್ ಮಾಡಿದ್ದು ಭಾರತೀಯ ವಾಯುಪಡೆಯಿಂದ ಶ್ಲಾಘನೆಗೆ ಒಳಗಾಗಿದ್ದಾರೆ.
ಭಾರತೀಯ ವಾಯುಪಡೆಯ ಐಎಲ್-76ಎಂಡಿ ಯುದ್ಧ ವಿಮಾನದ ಪೈಲಟ್ ಆಗಿರುವ ಕ್ಯಾಪ್ಟನ್ ಸಂದೀಪ್ ಸಿಂಗ್ ಛಬ್ರ ನಿನ್ನೆ ಲೇಹ್ ಮತ್ತು ಥಾಯಿಸ್ ಯುದ್ಧ ಭೂಮಿಯಲ್ಲಿ ಸುರಕ್ಷಿತವಾಗಿ ವಿಮಾನವನ್ನು ಸಾವಿರನೇ ಬಾರಿ ಯಶಸ್ವಿಯಾಗಿ ಲ್ಯಾಂಡ್ ಮಾಡಿ ಪೂರೈಸಿದ್ದಾರೆ. ಈ ಯುದ್ಧ ಭೂಮಿಗಳು ನೆಲದಿಂದ 10 ಸಾವಿರ ಅಡಿ ಎತ್ತರದಲ್ಲಿವೆ. ಕಡಿದಾದ ಕಣಿವೆಗಳು ಈ ಯುದ್ಧಭೂಮಿಯ ಸುತ್ತ ಇದ್ದು ವಿಶ್ವದಲ್ಲಿಯೇ ದುರ್ಗಮ ಪ್ರದೇಶಗಳಾಗಿವೆ.
ಐಎಲ್-78 ನಂತಹ ಗಜ ಗಾತ್ರದ ಯುದ್ಧ ವಿಮಾನಗಳನ್ನು ಅತ್ಯಂತ ದೊಡ್ಡ ಯಂತ್ರೋಪಕರಣಗಳೊಂದಿಗೆ ದುರ್ಗಮ ಪ್ರದೇಶಗಳಲ್ಲಿ ಕೊಂಡೊಯ್ಯುವುದು ಕಷ್ಟಕರ. ಇಂಧನಗಳನ್ನು ತುಂಬಲು ಸಹ ಈ ಯುದ್ಧ ವಿಮಾನಗಳನ್ನು ಕೆಲವೊಮ್ಮೆ ಬಳಸಲಾಗುತ್ತದೆ.
ತಮ್ಮ ಪೈಲಟ್ ವೃತ್ತಿಯಲ್ಲಿ 8 ಸಾವಿರದ 500ಕ್ಕೂ ಹೆಚ್ಚು ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿದ ಅನುಭವ ಹೊಂದಿರುವ ಗ್ರೂಪ್ ಕ್ಯಾಪ್ಟನ್ ಛಬ್ರ, ಅದರಲ್ಲಿ 5 ಸಾವಿರಕ್ಕೂ ಹೆಚ್ಚು ಗಂಟೆಗಳ ಕಾಲ ಈ ಐಎಲ್-76/78 /ಯುದ್ಧ ವಿಮಾನದ ಹಾರಾಟದ ಅನುಭವವನ್ನು ಗಳಿಸಿದ್ದಾರೆ. ಅಲ್ಲದೆ ರಾತ್ರಿ ಹೊತ್ತಿನಲ್ಲಿ ಲೇಹ್ ಮತ್ತು ಥಾಯಿಸ್ ಯುದ್ಧ ವಿಮಾನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದವ ಕೆಲವರಲ್ಲಿ ಕ್ಯಾಪ್ಟನ್ ಛಬ್ರ ಒಬ್ಬರು.
1992ರಲ್ಲಿ ಭಾರತೀಯ ವಾಯುಪಡೆಯ ಸಾರಿಗೆ ವಿಭಾಗಕ್ಕೆ ಸೇವೆಗೆ ಸೇರಿದ ಗ್ರೂಪ್ ಕ್ಯಾಪ್ಟನ್ ಛಬ್ರ ತಮ್ಮ ವೃತ್ತಿಯ ಆರಂಭದ ದಿನಗಳಲ್ಲಿ ಎಎನ್-32 ಅವಳಿ ಎಂಜಿನ್ ಸಾರಿಗೆ ಯುದ್ಧವಿಮಾನವನ್ನು ಉತ್ತರಾಖಂಡ್ ನಂತಹ ಸವಾಲಿನ ಈಶಾನ್ಯ ರಾಜ್ಯಗಳ ಪರ್ವತ ಪ್ರದೇಶಗಳಲ್ಲಿ ಚಲಾಯಿಸಿದವರು. ನಂತರ ಐಎಲ್ -76/78 ಯುದ್ಧ ವಿಮಾನಕ್ಕೆ ಅವರ ಸೇವೆ ಬದಲಾಯಿತು. ಅವರೀಗ ಐಎಲ್ -78 ನೌಕಾತಂಡದಲ್ಲಿದ್ದಾರೆ.
ಅವರ ಸಾಧನೆಯನ್ನು ಕೊಂಡಾಡಿರುವ ಭಾರತೀಯ ವಾಯುಪಡೆ, ದೇಶದ ಸುರಕ್ಷತೆಯಲ್ಲಿ ಕ್ಯಾಪ್ಟನ್ ಛಬ್ರ ಅವರ ಸೇವೆ ಅಮೂಲ್ಯವಾದ ಸಂಪತ್ತು. ದೇಶದ ಈಶಾನ್ಯ ಕಣಿವೆಗಳಲ್ಲಿ ಭಾರತೀಯ ಸೇನಾಪಡೆಯ ನಿಯೋಜನೆಯಲ್ಲಿ ಅವರ ಕೊಡುಗೆ ನಿರಂತರ ಮತ್ತು ಸಾಕಷ್ಟು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com