ಲಖನೌ: ಈ ಎಂಟಡಿ ಎತ್ತರದ ಆಸಾಮಿಗೆ ಉಳಿದುಕೊಳ್ಳಲು ಸ್ಥಳವಿಲ್ಲ!

ಆ ವ್ಯಕ್ತಿಯನ್ನೇನಾದರೂ ನೀವು ನೋಡಿದರೆ ನಿಮ್ಮ ತಲೆ ಒಮ್ಮೆ ಗಿರ್ರ್ ಎನ್ನುವುದು ಗ್ಯಾರೆಂಟಿ! ಎಂಟು ಅಡಿ ಎತ್ತರದ ನಿಲುವಿನ ಆಜಾನುಬಾಹು ವ್ಯಕ್ತಿ ಶೇರ್ ಕಾನ್ ವಿಷಯವನ್ನೇ ನಾವಿಲ್ಲಿ ಹೇಳುತ್ತಿದ್ದೇವೆ.
ಶೇರ್ ಖಾನ್
ಶೇರ್ ಖಾನ್

ಲಖನೌ: ಆ ವ್ಯಕ್ತಿಯನ್ನೇನಾದರೂ ನೀವು ನೋಡಿದರೆ ನಿಮ್ಮ ತಲೆ ಒಮ್ಮೆ ಗಿರ್ರ್ ಎನ್ನುವುದು ಗ್ಯಾರೆಂಟಿ! ಎಂಟು ಅಡಿ ಎತ್ತರದ ನಿಲುವಿನ ಆಜಾನುಬಾಹು ವ್ಯಕ್ತಿ ಶೇರ್ ಕಾನ್ ವಿಷಯವನ್ನೇ ನಾವಿಲ್ಲಿ ಹೇಳುತ್ತಿದ್ದೇವೆ. ಇದೀಗ ಉತ್ತರ ಪ್ರದೇಶದ ರಾಜಧಾನಿಯಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಕ್ರಿಕೆಟ್ ಸರಣಿಯನ್ನು ವೀಕ್ಷಿಸಲು ಆಗಮಿಸಿರುವ ಈ ಆಸಾಮಿಗೆ  ಅಲ್ಲಿ ಉಳಿದುಕೊಳ್ಲಲು ಸರಿಯಾದ ಸ್ಥಳ ದೊರಕದೆ ಸಮಸ್ಯೆಯಾಗಿದೆ.

ಎಂಟು ಅಡಿ ಎರಡು ಇಂಚುಗಳಷ್ಟು ಎತ್ತರವಿರುವ ಶೇರ್ ಖಾನ್ ಗೆ ಉತ್ತರ ಪ್ರದೇಶ ರಾಜ್ಯ ರಾಜಧಾನಿಯಲ್ಲಿ ಸೂಕ್ತ ವಸತಿ ವ್ಯವಸ್ಥೆ ಸಿಕ್ಕಿಲ್ಲ. ಬಹುಪಾಲು ಹೋಟೆಲ್‌ ಗಳು ಆತನಿಗೆ ಉಳಿದುಕೊಳ್ಲಲು ಕೋಣೆ ನೀಡಿಲ್ಲ. ಇನ್ನೂ ಕೆಲವರು ಆತನನ್ನು ಓರ್ವ  'ಅನುಮಾನಾಸ್ಪದ' ವ್ಯಕ್ತಿ ಎಂಬಂತೆ ಕಾಣುತ್ತಿದ್ದರು.

ಕಡೆಗೊಮ್ಮೆ ಖಾನ್ ನಾಕಾ ಪೋಲೀಸ್ ಠಾಣೆಯನ್ನು ಸಂಪರ್ಕಿಸಿ ಅಲ್ಲಿ ತಮ್ಮ ಗುರುತಿನ ದಾಖಲಾತಿಗಳನ್ನು ನೀಡಿದ ಬಳಿಕ ಅವರನ್ನು ಹೋಟೆಲ್ ರಾಜಧಾನಿಗೆ ಕರೆದೊಯ್ಯಲಾಯಿತು. ಆದರೆ ಕೋಣೆಯಲ್ಲಿನ ಮಂಚ ಹಾಗೂ ವಾಶ್ ರೂಮ್ ಗಳಲ್ಲಿನ ಸೌಲಭ್ಯಗಳು ಆತನಿಗೆ ಅನುಕೂಲವಾಗಿರಲಿಲ್ಲ. ಹಾಸಿಗೆ ಚಿಕ್ಕದಾಗಿದ್ದು ಕಾಲುಗಳನ್ನು ನೆಲಕ್ಕೆ ಇಳಿಬಿಟ್ಟು ಮಲಗಬೇಕಾಗಿತ್ತು. ವಾಶ್ ರೂಮ್ 'ಅನಾನುಕೂಲತೆ’ ಯಿಂದ ಕೂಡಿತ್ತು ಎಂದು ಆತ ಸಿಬ್ಬಂದಿಗಳಲ್ಲಿ ದೂರಿತ್ತಿದ್ದಾನೆ.

ಇನ್ನು "ಅತಿ ಎತ್ತರದ ಮನುಷ್ಯ" ಬಂದಿದ್ದಾನೆ ಎಂಬ ಮಾಹಿತಿ ಹರಡುತ್ತಿದ್ದಂತೆ ಕಾನ್ ನನ್ನು ಕಾಣಲು ನೂರಾರು ಜನ ಹೋಟೆಲ್ ನತ್ತ ಧಾವಿಸಿದ್ದಾರೆ. ಕಡೆಗೆ ಆತನನನ್ನು ಪಂದ್ಯ ವೀಕ್ಷಣೆಗಾಗಿ  ಎಕಾನಾ ಕ್ರೀಡಾಂಗಣಕ್ಕೆ ಕರೆದೊಯ್ಯಲು ಪೋಲೀಸರು ಹರಸಾಹಸ ಮಾಡಬೇಕಾಗಿತ್ತು.

ಲಖನೌನಲ್ಲಿನ ಪ್ರವಾಸಿ ತಾಣಗಳ ಬಗೆಗೆ ಹೋಟೆಲ್ ನಲ್ಲಿ ಖಾನ್ ವಿಚಾರಿಸಿದ್ದಾರೆ. ಅಲ್ಲಿಗೆ ಭೇಟಿ ಕೊಡುವ ಇರಾದೆ ವ್ಯಕ್ತಪಡಿಸಿದ್ದಾರೆ. ಆದರೆ ಅವರಿಗೆ ಆಟೋ ಸಂಚಾರವು ಸಮಸ್ಯೆಯಾಗಿದೆ. ಅವರು ಎತ್ತರವಾಗಿರುವ ಕಾರಣ ಆಟೋನಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಖಾನ್ ತಮ್ಮ ದೇಶಕ್ಕೆ ಹಿಂದಿರುಗುವುದಕ್ಕೆ ಮುನ್ನ ಇನ್ನೂ ನಾಲ್ಕು ದಿನಗಳ ಕಾಲ ಲಖನೌನಲ್ಲಿ ತಂಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com