ಭಾರತೀಯ ನೌಕಾಪಡೆಯ ಪ್ರಥಮ ಮಹಿಳಾ ಪೈಲಟ್ ಆಗಿ ಲೆಫ್ಟಿನೆಂಟ್ ಶಿವಾಂಗಿ ನೇಮಕ

ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲೆಟ್ ಆಗಿ ಲೆಫ್ಟಿನೆಂಟ್ ಶಿವಾಂಗಿ ಡಿಸೆಂಬರ್ ೨ರಂದು ಕಾರ್ಯಾಚರಣೆ ಸೇರ್ಪಡೆಯಾಗಲಿದ್ದಾರೆ. 
ಲೆಫ್ಟಿನೆಂಟ್ ಶಿವಾಂಗಿ
ಲೆಫ್ಟಿನೆಂಟ್ ಶಿವಾಂಗಿ

ನವದೆಹಲಿ: ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲೆಟ್ ಆಗಿ ಲೆಫ್ಟಿನೆಂಟ್ ಶಿವಾಂಗಿ ಡಿಸೆಂಬರ್ 2ರಂದು ಕಾರ್ಯಾಚರಣೆ ಸೇರ್ಪಡೆಯಾಗಲಿದ್ದಾರೆ. 

ಕೇರಳದ ಕೊಚ್ಚಿಯಲ್ಲಿ ನಡೆದ ಸೌತರ್ನ್ ನಾವೆಲ್ ಕಮಾಂಡ್ ಕಾರ್ಯಾಚರಣೆಯ ತರಬೇತಿ ಪೂರ್ಣಗೊಂಡ ನಂತರ ಬಿಹಾರ ಮೂಲದ ಶಿವಾಂಗಿ ನೌಕಾಪಡೆಯ ಪೈಲಟ್ ಆಗಿ ನೇಮಕವಾಗುತ್ತಿದ್ದಾರೆ. ನೌಕಾಪಡೆ ದಿನ (ಡಿಸೆಂಬರ್ 4)ಕ್ಕಿಂತ ಎರಡು ದಿನಗಳ ಮುನ್ನ ಶಿವಾಂಗಿ ಪೈಲಟ್ ಆಗಿ ನೇಮಕವಾಗುತ್ತಿರುವುದು ಗಮನಾರ್ಹ.

ತರಬೇತಿ ಪೂರ್ಣವಾದ ನಮ್ತರ ಶಿವಾಂಗಿ ಡಾರ್ನಿಯರ್ ವಿಮಾನ ಹಾರಾಟ ನಡೆಸುವ ಅಧಿಕಾರ ಹೊಂದಲಿದ್ದಾರೆ.

ಶಿವಾಂಗಿ ಬಿಹಾರದ ಮುಜಾಫರಪುರ್ ಜಿಲ್ಲೆಯವರಾಗಿದ್ದು ಎಜಿಮಾಲಾದ ಇಂಡಿಯನ್ ನೇವಲ್ ಅಕಾಡಮಿಯಲ್ಲಿ ೨೭ ಎಸ್.ಒ.ಸಿ. ಕೋರ್ಸ್ ಭಾಗವಾಗಿ ಅವರನ್ನು ಭಾರತೀಯ ನೌಕಾದಳಕ್ಕೆ ಸೇರ್ಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com