ಸೈನಿಕರಿಂದ ಸ್ವಚ್ಛತಾ ಅಭಿಯಾನ;ವಿಶ್ವದ ಅತಿ ಎತ್ತರ ಯುದ್ಧಭೂಮಿ ಸಿಯಾಚಿನ್ ನಲ್ಲಿ ನಡೆಯುತ್ತಿದೆ ಸ್ವಚ್ಛತಾ ಕಾರ್ಯ!

ಸೈನಿಕರು ದೇಶ ಕಾಯುವವರು, ದೇಶದ ಗಡಿಯನ್ನು ಕಾಯುವುದು, ನಾಗರಿಕರ ರಕ್ಷಣೆ ಇವರ ಕೆಲಸ, ಈ ಮಧ್ಯೆ ಸೈನಿಕರಿಗೆ ಸೇನೆಯಲ್ಲಿ ತರಬೇತಿ, ಕಾರ್ಯಾಗಾರಗಳು ನಡೆಯುತ್ತಿರುತ್ತವೆ.

Published: 25th September 2019 12:44 PM  |   Last Updated: 25th September 2019 12:44 PM   |  A+A-


Soldiers cleanliness campaign

ಸೈನಿಕರ ಸ್ವಚ್ಛತಾ ಕಾರ್ಯ

Posted By : Sumana Upadhyaya
Source : The New Indian Express

ನವದೆಹಲಿ: ಸೈನಿಕರು ದೇಶ ಕಾಯುವವರು, ದೇಶದ ಗಡಿಯನ್ನು ಕಾಯುವುದು, ನಾಗರಿಕರ ರಕ್ಷಣೆ ಇವರ ಕೆಲಸ, ಈ ಮಧ್ಯೆ ಸೈನಿಕರಿಗೆ ಸೇನೆಯಲ್ಲಿ ತರಬೇತಿ, ಕಾರ್ಯಾಗಾರಗಳು ನಡೆಯುತ್ತಿರುತ್ತವೆ.


ಆದರೆ ಈ ಸೈನಿಕರು ವಿಭಿನ್ನ ಕೆಲಸದಲ್ಲಿ ನಿರತರಾಗಿದ್ದಾರೆ. ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ನಲ್ಲಿ ಕಳೆದ ಮೂರು ದಶಕಗಳಿಂದ ಸಂಗ್ರಹವಾಗಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಮಹಾನ್ ಕಾರ್ಯದಲ್ಲಿ ಇಲ್ಲಿ ಸೇವೆಗೆ ನಿಯೋಜನೆಗೊಂಡಿರುವ ಸೈನಿಕರು ತೊಡಗಿದ್ದಾರೆ.


ಭಾರತೀಯ ಸೇನೆ ಸಿಯಾಚಿನ್ ನಲ್ಲಿ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲು ಸ್ವಚ್ಛ ಸಿಯಾಚಿನ್ ಅಭಿಯಾನವನ್ನು ಆರಂಭಿಸಿದೆ. ಸಿಯಾಚಿನ್ ನ ಹಿಮನದಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 130 ಟನ್ ಗಳಿಗೂ ಅಧಿಕ ಕಸಗಳನ್ನು ಹೊರತೆಗೆದಿದ್ದಾರೆ ಸೈನಿಕರು. 
ಈ ಅಭಿಯಾನ ಆರಂಭಗೊಂಡಿದ್ದು ಕಳೆದ ವರ್ಷ ಜನವರಿಯಲ್ಲಿ, ಇಲ್ಲಿಯವರೆಗೆ 48.4 ಟನ್ ಜೈವಿಕ ವಿಘಟನೀಯ ಕಸ(biodegradable) ಮತ್ತು 40.32 ಟನ್ ಅಜೈವಿಕ ವಿಘಟನೀಯ(non- biodegradable) ಲೋಹರಹಿತ ತ್ಯಾಜ್ಯಗಳನ್ನು ಮತ್ತು 41.45ಟನ್ ಅಜೈವಿಕ ಲೋಹೀಯ ಚಿಂದಿಗಳನ್ನು ವಿಲೇವಾರಿ ಮಾಡಲಾಗಿದೆ. 


ಈ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಯಾಂತ್ರಿಕ ವ್ಯವಸ್ಥೆಗಳನ್ನು ಮಾಡಲಾಗಿದ್ದು ಅದನ್ನು ಯೋಜಿತ ಮಾರ್ಗದ ಮೂಲಕ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೇಹ್ ನಲ್ಲಿ ಬೇಲಿಂಗ್ ಯಂತ್ರವನ್ನು ಸ್ಥಾಪಿಸಲಾಗಿದ್ದು ಅದರಲ್ಲಿ ಕಾಗದ ಪ್ಯಾಕೆಜಿಂಗ್ ವಸ್ತುಗಳನ್ನು ಬೇಲಿಂಗ್ ಗೆ ಪರಿವರ್ತಿಸಿ ಅದನ್ನು ಮರು ಬಳಕೆ ಮಾಡುವಂತೆ ಮಾಡುತ್ತದೆ.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp