ವಾಟರ್ ಫಾಲ್ ರಾಪ್ಪೆಲಿಂಗ್‌ನಲ್ಲಿ ತೆಲಂಗಾಣದ ಬುಡಕಟ್ಟು ಯುವತಿಗೆ ಚಿನ್ನ!

ಆದಿಲಾಬಾದ್ ಜಿಲ್ಲೆಯವರಾದ ಮಾಧವಿ ಕನ್ನಿ ಬಾಯಿ (27) ಜನವರಿ 2 ರಿಂದ 6 ರವರೆಗೆ ಆಂಧ್ರಪ್ರದೇಶದ ಅರಕು ಕಣಿವೆಯ ಕತಕಿ ಜಲಪಾತದಲ್ಲಿ ನಡೆದ ಎರಡನೇ ವಿಶ್ವ ಜಲಪಾತ ರಾಪ್ಪೆಲಿಂಗ್ ವಿಶ್ವಕಪ್‌ನಲ್ಲಿ(World Waterfall Rappelling World Cup) ಚಿನ್ನದ ಪದಕ ಗೆದ್ದಿದ್ದಾರೆ. 
ಮಾಧವಿ ಕನ್ನಿ ಬಾಯಿ
ಮಾಧವಿ ಕನ್ನಿ ಬಾಯಿ

ಅಡಿಲಾಬಾದ್: ಆದಿಲಾಬಾದ್ ಜಿಲ್ಲೆಯವರಾದ ಮಾಧವಿ ಕನ್ನಿ ಬಾಯಿ (27) ಜನವರಿ 2 ರಿಂದ 6 ರವರೆಗೆ ಆಂಧ್ರಪ್ರದೇಶದ ಅರಕು ಕಣಿವೆಯ ಕತಕಿ ಜಲಪಾತದಲ್ಲಿ ನಡೆದ ಎರಡನೇ ವಿಶ್ವ ಜಲಪಾತ ರಾಪ್ಪೆಲಿಂಗ್ ವಿಶ್ವಕಪ್‌ನಲ್ಲಿ(World Waterfall Rappelling World Cup) ಚಿನ್ನದ ಪದಕ ಗೆದ್ದಿದ್ದಾರೆ.

ವಿಶೇಷ ಹಿಂದುಳಿದ ಬುಡಕಟ್ಟು ಸಮುದಾಯಕ್ಕೆ ಸೇರಿದ ನ್ನಿ ಬಾಯಿ, 18 ರಾಷ್ಟ್ರಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಹಯೋಗದಿಂದ ಆಂಧ್ರಪ್ರದೇಶದ ಸಾಹಸ ಕ್ಲಬ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಕಡೇ ಕ್ಷಣದಲ್ಲಿ ಕೆವರು ಕೆಟ್ಟ ವಾತಾವರಣದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ವಿಶ್ವದ ವಿವಿಧ ಭಾಗಗಳಿಂದ 118 ಸ್ಪರ್ಧಿಗಳು ವಾಟರ್ ಫಾಲ್ಸ್ ರಾಪೆಲ್ಲಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು, ಅದೊಂದು ದೊಡ್ಡ ರಾಕ್ ಪ್ಯಾಚ್ ಮತ್ತು ಕ್ಯಾಸ್ಕೇಡಿಂಗ್  ಸಾಹಸವಾಗಿದ್ದು ನೀವು ಜಲಪಾತದ ಕೆಳಗೆ ಧುಮುಕುವಾಗ ಸ್ಪರ್ಧಿಗಳ  ಕಣ್ಣಿಗೆ ಪ್ಪು ಬಟ್ಟೆ ಕಟ್ಟಲಾಗುತ್ತದೆ. ಕತಕಿ ಜಲಪಾತ  4,030 ಅಡಿ ಎತ್ತರವಿದೆ. ಇಂಟಿಗ್ರೇಟೆಡ್ ಬುಡಕಟ್ಟು ಅಭಿವೃದ್ಧಿ ಸಂಸ್ಥೆ (ಐಟಿಡಿಎ) ಉತನೂರ್ ಯೋಜನೆ ಆಫೀಸರ್ ಕೃಷ್ಣ ಆದಿತ್ಯ ಮತ್ತು ಜಿಲ್ಲಾಧಿಕಾರಿ ಡಿ ದಿವ್ಯಾ  ಕನ್ನಿ ಬಾಯಿಯ ಬೆಂಬಲಕ್ಕೆ ನಿಂತಿದ್ದರು.

ಸ್ಪರ್ಧೆಯ ಬಳಿಕ ಮಾತನಾಡಿದ ಕನ್ನಿ ಬಾಯಿ "ಒಂದಲ್ಲ ಒಂದು ದಿನ ಎವರೆಸ್ಟ್ ಶಿಖರವನ್ನು ಏರುವುದು ನನ್ನ ಗುರಿ, ಇದಕ್ಕಾಗಿ ನಾನು ಅಧಿಕಾರಿಗಳ ಬೆಂಬಲವನ್ನು ಕೋರುತ್ತೇನೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com