ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಪೆರೇಡ್ ನಡೆಸುವ ಮೊದಲ ಮಹಿಳಾ ಅಧಿಕಾರಿ ಕ್ಯಾಪ್ಟನ್ ತಾನಿಯಾ ಶೇರ್ ಗಿಲ್

ಸೈನ್ಯದ ಕಾರ್ಪ್ಸ್ ಆಫ್ ಸಿಗ್ನಲ್ಸ್ ಹೊಂದಿರುವ ಮಹಿಳಾ ಸೈನ್ಯಾಧಿಕಾರಿ  ಕ್ಯಾಪ್ಟನ್ ತಾನಿಯಾ ಶೇರ್ ಗಿಲ್ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಮೊಟ್ಟ ಮೊದಲ ಮಹಿಳಾ ಪೆರೇಡ್ ಅಡ್ವಾಂಟೆಂಟ್ ಆಗಲಿದ್ದಾರೆ. 
ಗಣರಾಜ್ಯೋತ್ಸವ ಮೆರವಣಿಗೆಗೆಯಲ್ಲಿ ಪೆರೇಡ್ ನಡೆಸುವ ಮೊದಲ ಮಹಿಳಾ ಅಧಿಖಾರಿಯಾದ ಕ್ಯಾಪ್ಟನ್ ತಾನಿಯಾ ಶೇರ್ ಗಿಲ್
ಗಣರಾಜ್ಯೋತ್ಸವ ಮೆರವಣಿಗೆಗೆಯಲ್ಲಿ ಪೆರೇಡ್ ನಡೆಸುವ ಮೊದಲ ಮಹಿಳಾ ಅಧಿಖಾರಿಯಾದ ಕ್ಯಾಪ್ಟನ್ ತಾನಿಯಾ ಶೇರ್ ಗಿಲ್

ನವದೆಹಲಿ: ಸೈನ್ಯದ ಕಾರ್ಪ್ಸ್ ಆಫ್ ಸಿಗ್ನಲ್ಸ್ ಹೊಂದಿರುವ ಮಹಿಳಾ ಸೈನ್ಯಾಧಿಕಾರಿ  ಕ್ಯಾಪ್ಟನ್ ತಾನಿಯಾ ಶೇರ್ ಗಿಲ್ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಮೊಟ್ಟ ಮೊದಲ ಮಹಿಳಾ ಪೆರೇಡ್ ಅಡ್ವಾಂಟೆಂಟ್ ಆಗಲಿದ್ದಾರೆ.

ಪೆರೇಡ್ ಅಡ್ವಾಂಟೆಂಟ್ ಆ ಪೆರೇಡ್ ನ ಜವಾಬ್ದಾರಿಯನ್ನು ಹೊತ್ತ್ವನಾಗಿರುತ್ತಾರೆ. 

ಚೆನ್ನೈನ ಆಫೀಸರ್ ಟ್ರೈನಿಂಗ್ ಅಕಾಡೆಮಿಯಿಂದ ಮಾರ್ಚ್ 2017 ರಲ್ಲಿ ತರಬೇತಿ ಮುಗಿಸಿದ ಶೇರ್ ಗಿಲ್  ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಪದವೀಧರರಾಗಿದ್ದಾರೆ ವಿಶೇಷವೆಂದರೆ ಈಕೆಯ ಕುಟುಂಬದಲಿ ಆಕೆಯ ತಂದೆ, ಅಜ್ಜ ಮತ್ತು ಮುತ್ತಜ್ಜ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ಕಳೆದ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ, ಕ್ಯಾಪ್ಟನ್ ಭಾವನಾ ಕಸ್ತೂರಿ ಸಂಪೂರ್ಣ ಪುರುಷರ ತಂಡವನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎನಿಸಿದ್ದರು.

ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ 18 ಯಾಂತ್ರಿಕೃತ ಕಾಲಾಳುಪಡೆ, ಧನುಷ್ ಗನ್ ಸಿಸ್ಟಮ್ ಮತ್ತು ಸೇನಾ ವಾಯು ರಕ್ಷಣೆಯ ಕಾಲಾಳುಪಡೆ ಯುದ್ಧ ವಾಹನ ಬಿಎಂಪಿ -2 ಕೆ ರಾಜ್‌ಪಥ್ ನಲ್ಲಿ ಪಥಸಂಚನ ನಡೆಸಲಿವೆ.ಕಾರ್ಪ್ಸ್ ಆಫ್ ಸಿಗ್ನಲ್ಸ್, ಸಿಖ್ ಲೈಟ್ ಕಾಲಾಳುಪಡೆ, ಕುಮಾವೂನ್ ರೆಜಿಮೆಂಟ್, ಗ್ರೆನೇಡಿಯರ್ಸ್,ಪ್ಯಾರಾಚೂಟ್  ರೆಜಿಮೆಂಟ್ ಸಹ ಮೆರವಣಿಗೆಯಲ್ಲಿ ಭಾಗವಹಿಸಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com