ಕರ್ನಾಟಕದ 111 ಸೇರಿ ಎಂಟು ವರ್ಷದಲ್ಲಿ ದೇಶಾದ್ಯಂತ ಒಟ್ಟು 750 ಹುಲಿಗಳ ಸಾವು..!

ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ 750 ಹುಲಿಗಳು ಕಳ್ಲಬೇಟೆಗೆ ಹಾಗೂ ಇತರೆ ಕಾರಣಕ್ಕೆ ಸಾವನ್ನಪ್ಪಿವೆ ಇದರಲ್ಲಿ ಮಧ್ಯಪ್ರದೇಶ ಒಂದರಲ್ಲೇ 173 ಹುಲಿಗಳು ಮರಣಹೊಂದಿವೆ ಎಂದು  ಅಧಿಕೃತ ಅಂಕಿ ಅಂಶಗಳು ಹೇಳಿದೆ.
ಹುಲಿ
ಹುಲಿ

ನವದೆಹಲಿ: ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ 750 ಹುಲಿಗಳು ಕಳ್ಲಬೇಟೆಗೆ ಹಾಗೂ ಇತರೆ ಕಾರಣಕ್ಕೆ ಸಾವನ್ನಪ್ಪಿವೆ ಇದರಲ್ಲಿ ಮಧ್ಯಪ್ರದೇಶ ಒಂದರಲ್ಲೇ 173 ಹುಲಿಗಳು ಮರಣಹೊಂದಿವೆ ಎಂದು  ಅಧಿಕೃತ ಅಂಕಿ ಅಂಶಗಳು ಹೇಳಿದೆ.

ಒಟ್ಟು ಹುಲಿಗಳ ಸಾವಿನ ಪೈಕಿ ನೈಸರ್ಗಿಕ ಕಾರಣದಿಂದ 369 ಬೇಟೆಯಾಡುವ ಕಾರಣಕ್ಕೆ 168 ಹುಲಿಗಳು ಸಾವನ್ನಪ್ಪಿದ್ದರೆ ಅಪಘಾತ ಅಥವಾ ಆಕಸ್ಮಿಕ ಘಟನೆಗಳಿಂಡ 42 ಹುಲಿಗಳು ಅಸುನೀಗಿವೆ. ಇನ್ನು 70 ಹುಲಿಗಳ ಸಾವಿಗೆ ಕಾರಣವೇನೆಂದು ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದು ವರದಿ ಹೇಳಿದೆ.

2012 ಮತ್ತು 2019 ರ ನಡುವಿನ ಎಂಟು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ವಿವಿಧ ಅಧಿಕಾರಿಗಳು 101  ಹುಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಟಿಐ ವರದಿಗಾರ ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಉತ್ತರಿಸಿದೆ.

2010 ಮತ್ತು ಮೇ 2020 ರ ನಡುವೆ ಹುಲಿಗಳ ಸಾವಿನ ವಿವರಗಳನ್ನು ಹಂಚಿಕೊಳ್ಳಲು ಎನ್‌ಟಿಸಿಎಗೆ ಅರ್ಜಿ ಮೂಲಕ ಮನವಿ ಸಲ್ಲಿಸಲಾಗಿತ್ತು. ಆದಾಗ್ಯೂ, ಇದು 2012 ರಿಂದ ಈಚಿನ  ಎಂಟು ವರ್ಷಗಳ ಅಂಕಿ ಸಂಖ್ಯೆಗಳಷ್ಟೇ ಮಾಹಿತಿ ಸಿಕ್ಕಿದೆ.ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಡಿಸೆಂಬರ್‌ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ  2,226 ರಿಂದ 2,976 ಕ್ಕೆ ಏರಿದೆ ಎಂದು ಹೇಳಿದ್ದಾರೆ.

"ಈಗ ಹುಲಿಗಳ ಸಂಖ್ಯೆ 2,976 ಆಗಿದೆ. ನಮ್ಮ ಇಡೀ ಪರಿಸರ ವ್ಯವಸ್ಥೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ಕಳೆದ ನಾಲ್ಕು ವರ್ಷಗಳಲ್ಲಿ 750 ಸಂಖ್ಯೆಯ ಹುಲಿಗಳು ಹೆಚ್ಚಾಗಿದೆಎಂದು ಜಾವಡೇಕರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದರು. 

ಇನ್ನು ಅತಿ ಹೆಚ್ಚಿನ ಸಂಖ್ಯೆಯ ಹುಲಿಗಳ ಮರಣ ಕಂಡಿರುವ ಮಧ್ಯಪ್ರದೇಶದಲ್ಲಿ 173 ಹುಲಿಗಳ ಪೈಕಿ 94 ಹುಲಿಗಳು ನೈಸರ್ಗಿಕ ಕಾರಣಕ್ಕೆ ಸಾವನ್ನಪ್ಪಿದೆ. 38 ಹುಲಿಗಳನ್ನು ಬೇಟೆಯಾಡುವ ಮೂಲಕ ಕೊಲ್ಲಲಾಗಿದ್ದರೆ 16 ಹುಲಿಗಳು ರೋಗರುಜಿನಗಳಿಂದ ಅಸುನೀಗಿದೆ. ಆರು ಹುಲಿಗಳು ಆಕಸ್ಮಿಕ ಕಾರಣಕ್ಕೆ ಸಾವನ್ನಪ್ಪಿದ್ದರೆ 19 ಹುಲಿಗಳ ಸಾವಿಗೆ ಕಾರಣ ಇನ್ನೂ ಪರಿಶೀಲನೆಯಲ್ಲಿದೆ.ಮಧ್ಯಪ್ರದೇಶದಲ್ಲಿ ದೇಶದಲ್ಲೇ ಅತಿ ಹೆಚ್ಚು ಸಂಖ್ಯೆಯ ಎಂದರೆ 526 ಹುಲಿಗಳಿವೆ.

ಎಂಟು ವರ್ಷದ ಅವಧಿಯಲ್ಲಿ 125 ಹುಲಿಗಳನ್ನು ಳೆದುಕೊಂಡಿರುವ ಮಹಾರಾಷ್ಟ್ರ ಎರಡನೇ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿದೆ, ಕರ್ನಾಟಕ ರಾಜ್ಯ ಮೂರನೇ ಸ್ಥಾನದಲ್ಲಿದ್ದು 111 ಹುಲಿಗಳು ಸಾವನ್ನಪ್ಪಿದೆ.  

ಉತ್ತರಾಖಂಡದಲ್ಲಿ 88, ತಮಿಳುನಾಡು ಮತ್ತು ಅಸ್ಸಾಂನಲ್ಲಿ ತಲಾ 54, ಕೇರಳ ಮತ್ತು ಉತ್ತರಪ್ರದೇಶದಲ್ಲಿ ತಲಾ 35, ರಾಜಸ್ಥಾನದಲ್ಲಿ 17, ಬಿಹಾರದಲ್ಲಿ 11 ಮತ್ತು ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಘರ್ ನಲ್ಲಿ 10 ಹುಲಿಗಳು ಸಾವಿಗೀಡಾಗಿದೆ ಎಂದು ವರದಿ ಹೇಳಿದೆ. ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ತಲಾ ಏಳು, ತೆಲಂಗಾಣದಲ್ಲಿ ಐದು, ದೆಹಲಿ ಮತ್ತು ನಾಗಾಲ್ಯಾಂಡ್‌ನಲ್ಲಿ ತಲಾ ಎರಡು ಮತ್ತು ಆಂಧ್ರಪ್ರದೇಶ, ಹರಿಯಾಣ ಮತ್ತು ಗುಜರಾತ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ. 

ಬೇಟೆಯ ಕಾರಣದಿಂದಾಗಿ ಹುಲಿ ಸಾವಿನ ವಿವರಗಳನ್ನು ನೋಡಿದಲ್ಲೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ  ತಲಾ 28 ಹುಲಿಗಳನ್ನು ಬೇಟೆಯಾಡಿ ಕೊಲ್ಲಲಾಗಿದೆ., ಅಸ್ಸಾಂನಲ್ಲಿ 17, ಉತ್ತರಾಖಂಡದಲ್ಲಿ 14, ಉತ್ತರಪ್ರದೇಶದಲ್ಲಿ 12, ತಮಿಳುನಾಡಿನಲ್ಲಿ 11, ಕೇರಳದಲ್ಲಿ ಆರು ಮತ್ತು ರಾಜಸ್ಥಾನದಲ್ಲಿ ಮೂರು . ಹುಲಿಗಳು ಬೇಟೆಯಾಡುವ ಮೂಲಕ ಸಾವಿಗೀಡಾಗಿದೆ. 

ಇನ್ನು ಈ ರೀತಿಯಾಗಿ ಸಾವಿಗೀಡಾಗಿರುವ ಹುಲಿಗಲ ಸಂಖ್ಯೆ ನೀಡಿರುವ ಎನ್‌ಟಿಸಿಎ ಸಾವಿನ ಪ್ರಕರಣಗಳಲ್ಲಿ ಕೈಗೊಂಡ ಕ್ರಮಗಳ ವಿವರಗಳನ್ನು ಬಹಿರಂಗಪಡಿಸಿಲ್ಲ. ದೇಶದಲ್ಲಿ ಕಾಣೆಯಾದ ಹುಲಿಗಳ ವಿವರಗಳ ಬಗ್ಗೆ  ಸಹ ಯಾವ ಮಾಹಿತಿ ನೀಡಿಲ್ಲ. ಅಲ್ಲದೆ ಹೆಚ್ಚಿನ ವಿವರಕ್ಕಾಗಿ  ಹುಲಿ ಸಂರಕ್ಷಣಾ ವಲಯ ಹೊಂದಿರುವ 18 ರಾಜ್ಯಗಳ ಮುಖ್ಯ ಅರಣ್ಯಾಧಿಕಾರಿಗಳನ್ನು  ಸಂಪರ್ಕಿಸಲು ಅರ್ಜಿದಾರರಿಗೆ ಸೂಚಿಸಿದೆ.

ವನ್ಯಜೀವಿ ಕಾರ್ಯಕರ್ತರು 2012 ಮತ್ತು 2019 ರ ನಡುವೆ 750 ಹುಲಿ ಸಾವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಕಠಿಣ ವನ್ಯಜೀವಿ ನಿಬಂಧನೆ ಜಾರಿಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com