ಬೆಳೆಗೆ ಕೀಟನಾಶಕ ಸಿಂಪಡಿಸಲು ಡ್ರೋಣ್ ಬಳಸಿದ ಮಾದರಿ ರೈತ 

ಕೃಷಿಯಲ್ಲಿ ಯುವಕರು ತೊಡಗಿಸಿಕೊಂಡಂತೆಲ್ಲಾ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಆಂಧ್ರದ ಗುಂಟೂರು ಜಿಲ್ಲೆಯ ನಂಬೂರು ಗ್ರಾಮದ ರೈತ ಕೋಟಿರೆಡ್ಡಿ 3 ಎಕರೆ ಪ್ರದೇಶದ ಮೆಕ್ಕೆ ಜೋಳದ ಬೆಳೆಗೆ ಕೀಟನಾಶಕ ಸಿಂಪಡಿಸಲು ಡ್ರೋಣ್ ಬಳಕೆ ಮಾಡಿ ಮಾದರಿ ರೈತ ಎನಿಸಿಕೊಂಡಿದ್ದಾರೆ. 

39 ವರ್ಷದ ಈ ರೈತನಿಗೆ ಬೆಳೆಗೆ ಕೀಟನಾಶಕ ಸಿಂಪಡಿಸುವ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿರಲಿಲ್ಲ. ಸಿಕ್ಕರೂ ಹೆಚ್ಚಿನ ವೇತನ ಕೇಳುತ್ತಿದ್ದರು. ಇದರಿಂದ ರೋಸಿಹೋದ ಕೋಟಿರೆಡ್ಡಿ ತಂತ್ರಜ್ಞಾನದ ಮೊರೆ ಹೋದರು. ಸ್ವತಃ ಕಂಪ್ಯೂಟರ್ ಸೈನ್ಸ್ ಪದವೀದರರಾಗಿರುವ ಕೋಟಿರೆಡ್ಡಿಗೆ ತಂತ್ರಜ್ಞಾನದ ಅಳವಡಿಕೆ ಕಷ್ಟವೇನೂ ಆಗಲಿಲ್ಲ. ವಿಶಾಖಪಟ್ಟಣಂ ನ ಏರ್ ಫೋರ್ಸ್ ನಿಂದ ಡ್ರೋಣ್ ಪರವಾನಗಿ ಪಡೆಯಲು ಅರ್ಜಿಸಲ್ಲಿಸಿದ್ದರು. ಒಂದು ತಿಂಗಳಲ್ಲಿ ಪರವಾನಗಿಯೂ ದೊರೆತು ಡ್ರೋಣ್ ಮೂಲಕ ಕೀಟನಾಶಕ ಸಿಂಪಡಿಸುವ ಕೆಲಸವನ್ನೂ ಪ್ರಾರಂಭಿಸಿದರು. 

ಕೋಟಿರೆಡ್ಡಿ ಅವರ ಡ್ರೋಣ್ ಈಗ ಸುತ್ತಮುತ್ತಲಿನ ರೈತರನ್ನೂ ಆಕರ್ಷಿಸುತ್ತಿದೆ.  ಡ್ರೋಣ್ ಬಳಕೆಯಿಂದ ಹಣ ಉಳಿಸುವುದಷ್ಟೇ ಅಲ್ಲದೇ ಆರೋಗ್ಯಕ್ಕೂ ಉತ್ತಮ, ಸಮಯ ಉಳಿಸುವುದಕ್ಕೂ ಸಹಕಾರಿ ಎನ್ನುತ್ತಾರೆ ಯುವ ಮಾದರಿ ರೈತ. 
 
ಡ್ರೋಣ್ ನಲ್ಲಿ ಕೀಟನಾಶಕ ಸಿಂಪಡಿಸುವುದರಿಂದ ಅರ್ಧದಷ್ಟು ಹಣ ಉಳಿತಾಯವಾಗುತ್ತದೆ. ಕೀಟನಾಶಕಗಳ ಜೊತೆ ನೇರ ಸಂಪರ್ಕವಿರುವುದಿಲ್ಲವಾದ ಕಾರಣ ಮನುಷ್ಯನ ಆರೋಗ್ಯಕ್ಕೂ ಉತ್ತಮ ಈಗ ಬೇರೆ ರೈತರೂ ಸಹ ಡ್ರೋಣ್ ಸಹಾಯ ಪಡೆಯಲು ಮುಂದಾಗುತ್ತಿದ್ದಾರೆ ಎಂಬುದು ರೆಡ್ಡಿ ಅವರ ಹೆಮ್ಮೆಯ ನುಡಿ. 

ಸಾಮಾನ್ಯವಾಗಿ ಕಾರ್ಮಿಕರಿಂದ ಕೀಟನಾಶಕ ಸಿಂಪಡಿಸುವ ಕೆಲಸಕ್ಕೆ ಪ್ರತಿ ಋತುವಿನಲ್ಲೂ 3,000 ರೂಪಾಯಿಯಂತೆ ಒಟ್ಟು 4 ಬಾರಿ ಸಿಂಪಡಿಸಲು ಒಟ್ಟಾರೆ 12,000 ರೂಪಾಯಿ ಖರ್ಚಾಗುತ್ತಿತ್ತು. ಆದರೆ ಕೋಟಿ ರೆಡ್ಡಿ ಈಗ ತಮ್ಮ ಡ್ರೋಣ್ ಮೂಲಕ ಬೇರೆಯ ರೈತರಿಗೆ ಈ ಕೆಲಸವನ್ನು ಕೇವಲ 5,600 ರೂಪಾಯಿಗಳಿಗೆ ಮುಕ್ತಾಯಗೊಳ್ಳುವಂತೆ ಮಾಡುತ್ತಿದ್ದಾರೆ. 

ಕೃಷಿಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಯುವಕರಿಗೂ ಕೃಷಿ ಆಸಕ್ತಿದಾಯಕವಾಗಿರುತ್ತದೆ ಎನ್ನುತ್ತಾರೆ ಕೋಟಿ 

ಈ ಡ್ರೋಣ್ ನ ಸಾಮರ್ಥ್ಯ ಹೀಗಿದೆ 

  1. ಕೀಟನಾಶಕ+ ನೀರು ಒಟ್ಟಾರೆ 10 ಲೀಟರ್ ಕೊಂಡೊಯ್ಯುವ ಸಾಮರ್ಥ್ಯ 
  2. 25 ವೋಲ್ಟ್ಸ್ ಬ್ಯಾಟರಿ 10 ನಿಮಿಷಗಳ ಕಾಲ ಬಳಕೆ 
  3. ಡ್ರೋಣ್ ನ ತೂಕ-5 ಕೆ.ಜಿ 
  4. ಪರವಾನಗಿಯನ್ನೂ ಸೇರಿಸಿ ಅಂದಾಜು 6 ಲಕ್ಷ ಖರ್ಚು
  5. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಲು 30 ನಿಮಿಷಗಳ ಕಾಲ ಸಮಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com