ಸೌರ ವಿದ್ಯುತ್ ನೆರವಿನಿಂದ ಕುಂಬಾರಿಕೆ, ಪರಿಸರ ಸ್ನೇಹಿ ಗಣಪ ತಯಾರಿಸುವ ಕಲಾವಿದ ಮಹೇಶ್

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಗೆ ಗಣೇಶನ ವಿಗ್ರಹಗಳನ್ನು ಕೂರಿಸುವ ಸಂಪ್ರದಾಯ, ಆಚರಣೆ ನಮ್ಮಲ್ಲಿದೆ. ಗಣೇಶ ವಿಗ್ರಹವನ್ನು ಮಾರುಕಟ್ಟೆಯಿಂದ ತಂದು ದೇವರ ಮನೆಯಲ್ಲಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ನಂತರ ವಿಸರ್ಜಿಸುವ ಕಾರ್ಯ ನಡೆಯುತ್ತದೆ.

Published: 22nd August 2020 11:39 AM  |   Last Updated: 22nd August 2020 11:43 AM   |  A+A-


Artist Mahesh with Ganesha idol

ಮಣ್ಣಿನ ಗಣೇಶ ತಯಾರಿಕೆಯಲ್ಲಿ ಮಹೇಶ್

Posted By : Sumana Upadhyaya
Source : Online Desk

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಗೆ ಗಣೇಶನ ವಿಗ್ರಹಗಳನ್ನು ಕೂರಿಸುವ ಸಂಪ್ರದಾಯ, ಆಚರಣೆ ನಮ್ಮಲ್ಲಿದೆ. ಗಣೇಶ ವಿಗ್ರಹವನ್ನು ಮಾರುಕಟ್ಟೆಯಿಂದ ತಂದು ದೇವರ ಮನೆಯಲ್ಲಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ನಂತರ ವಿಸರ್ಜಿಸುವ ಕಾರ್ಯ ನಡೆಯುತ್ತದೆ.

ಈ ಬಾರಿ ಕೊರೋನಾ ಸೋಂಕಿನಿಂದಾಗಿ ಬಣ್ಣಗಳ, ರಾಸಾಯನಿಕ ಬಳಸಿದ, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಬದಲಾಗಿ ಮಣ್ಣಿನಿಂದ ಮಾಡಿದ ನೈಸರ್ಗಿಕ ಪುಟ್ಟ ಗಣಪತಿ ಮೂರ್ತಿಗಳನ್ನೇ ಬಳಸಿ ಎಂದು ಸರ್ಕಾರ ಜನತೆಗೆ ಕರೆಕೊಟ್ಟಿದೆ. ಜನರು ಕೂಡ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನೈಸರ್ಗಿಕ ಜೇಡಿಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಮಾರುಕಟ್ಟೆಯಿಂದ ತಂದು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.

ಹೀಗೆ ಮಣ್ಣಿನಿಂದ ಗಣೇಶ ತಯಾರಿಸುವ ಅದರಲ್ಲೂ ಸೌರ ವಿದ್ಯುತ್ ಸಹಾಯದಿಂದ ಗಣೇಶನ ಮೂರ್ತಿಯನ್ನು ತಯಾರಿಸುವ ಕಲಾವಿದ ಮಹೇಶ್ ಅವರನ್ನು ಮಾತನಾಡಿಸಿದ ಸಂದರ್ಭದಲ್ಲಿ ಅವರು ಹೇಳಿದ್ದು ಹೀಗೆ:
ನಾವು ಶುದ್ಧ ನೈಸರ್ಗಿಕವಾಗಿ ಮಣ್ಣಿನಿಂದ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದು, ಇದಕ್ಕೆ ಯಾವುದೇ ಬಣ್ಣ ಲೇಪನ ಮಾಡುವುದಿಲ್ಲ. ನೀರಿನಲ್ಲಿ ಹಾಕಿದ ಸ್ವಲ್ಪ ಹೊತ್ತಿನಲ್ಲಿಯೇ ಕರಗಿ ಹೋಗುತ್ತದೆ.ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಗಣೇಶನ ಮೂರ್ತಿಗಳನ್ನು ಸುಲಭವಾಗಿ ವಿಸರ್ಜಿಸಬಹುದು.

ನೀರಿನಲ್ಲಿ ಬಳಸಿದ ಮಣ್ಣನ್ನು ಮನೆಯ ಹಿತ್ತಲಿನಲ್ಲಿರುವ ಇಲ್ಲವೇ ಟೆರೇಸ್ ಮೇಲಿರುವ ಹೂಗಿಡಗಳು, ತರಕಾರಿ ಗಿಡಗಳಿಗೆ ಹಾಕಿದರೆ ಉತ್ತಮ ಗೊಬ್ಬರವಾಗುತ್ತದೆ. ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ನಾವಿಲ್ಲಿ ಮೂರ್ತಿ ತಯಾರಿಸಲು ಜೇಡಿ ಮಣ್ಣಿನ ಜೊತೆಗೆ ಅಂಟು ಬರಲು ಗೋಡು ಮಣ್ಣನ್ನು ಬಳಸುತ್ತೇವೆ. ಇವೆರಡನ್ನೂ ಬಳಸಿ ಯಾವ ಆಕಾರದಲ್ಲಿ ಬೇಕಾದರೂ ಮೂರ್ತಿ ತಯಾರಿಸಬಹುದು ಎನ್ನುತ್ತಾರೆ ಮಣ್ಣಿನ ಮಡಕೆ, ಬಾಟಲ್, ಮೂರ್ತಿಗಳನ್ನು ತಯಾರಿಸುವ ಕಲಾವಿದ ಬೆಂಗಳೂರಿನ ಮಹೇಶ್.

ಪ್ರತಿವರ್ಷ ಗಣೇಶ ಹಬ್ಬಕ್ಕೆ 2 ತಿಂಗಳು ಮೊದಲು ಮಣ್ಣನ್ನು ತಂದು ಬೆಟ್ಟ ಹಲಸೂರಿನಲ್ಲಿ ಶೆಟ್ ಮಾಡಿಕೊಂಡು ಅಲ್ಲಿ ಮೂರ್ತಿ ತಯಾರಿಸುತ್ತೇವೆ.ನಂತರ ಆರ್ ಟಿ ನಗರದ ಲಕ್ಷಿ ಹಾಸ್ಪಿಟಲ್ ಪಕ್ಕ ಮಾರಾಟ ಮಾಡುತ್ತೇವೆ. ಕಳೆದ 18 ವರ್ಷಗಳಿಂದ ಇದೇ ಕಾಯಕ ಮಾಡುತ್ತಿದ್ದೇವೆ. ಬೆಂಗಳೂರು ಉತ್ತರ ಭಾಗದಲ್ಲಿ ನೈಸರ್ಗಿಕ ಮಣ್ಣುಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ದು ನಮ್ಮಲ್ಲಿಯೇ ಮೊದಲು ಎನ್ನುತ್ತಾರೆ.

ನಾವು ವೃತ್ತಿಯಲ್ಲಿ ಕುಂಬಾರರು. ಗಣೇಶ ಹಬ್ಬದ ಸಮಯದಲ್ಲಿ ಮೂರ್ತಿಗಳನ್ನು ತಯಾರಿಸಿದರೆ ಬೇಸಿಗೆಯಲ್ಲಿ ಉಪಯೋಗವಾಗುವ ಗ್ಲಾಸು, ತಟ್ಟೆ, ಬಾಟಲ್ ಗಳನ್ನೆಲ್ಲಾ ಫ್ಯಾಶನ್ ರೀತಿಯಲ್ಲಿ ಮಣ್ಣಲ್ಲಿ ಫಿಲ್ಟರ್ ಮಾಡಿ ಆಕರ್ಷಕವಾಗಿ ಮಾಡುತ್ತೇವೆ. 100 ರೂಪಾಯಿಯಿಂದ ಹಿಡಿದು 900 ರೂಪಾಯಿಯವರೆಗಿನ ಗಣೇಶ ಮೂರ್ತಿಗಳು ನಮ್ಮಲ್ಲಿವೆ. 6 ಇಂಚಿನಿಂದ ಹಿಡಿದು 19 ಇಂಚುವರೆಗಿನ ವಿವಿಧ ರೂಪಗಳ ಗಣೇಶ ಮೂರ್ತಿಗಳು ಸಿಗುತ್ತವೆ. ಈ ಕೊರೋನಾ ಸಮಯದಲ್ಲಿ ವ್ಯಾಪಾರ ಸಾಧಾರಣವಾಗಿದೆ ಎಂದು ಮಹೇಶ್ ಹೇಳುತ್ತಾರೆ.

ಸೌರ ವಿದ್ಯುತ್ ನಿಂದ ಮೂರ್ತಿ, ಮಡಕೆಗಳ ತಯಾರಿ: ಮಹೇಶ್ ಅವರ ಮೂರ್ತಿ ತಯಾರಿಕೆಯ ಮತ್ತೊಂದು ವಿಶೇಷತೆ ಸೌರವಿದ್ಯುತ್ ಬಳಸುವುದು. ಕೃತಕ ವಿದ್ಯುತ್ ನ್ನು ಬಳಸುವ ಬದಲಿಗೆ ಸಂಪೂರ್ಣವಾಗಿ ಸೌರ ವಿದ್ಯುತ್ ನಲ್ಲಿ ಮೂರ್ತಿ, ಮಣ್ಣಿನ ಮಡಕೆಗಳನ್ನು ತಯಾರಿಸುತ್ತಾರೆ. ಒಂದು ಬಾರಿ ಸೌರ ವಿದ್ಯುತ್ ಫಲಕಕ್ಕೆ ಹೂಡಿಕೆ ಮಾಡಿದರೆ 20ರಿಂದ 25 ವರ್ಷ ಬಾಳ್ವಿಕೆ ಬರುತ್ತದೆ. ಬೇರೆ ವಿದ್ಯುತ್ ನ ಅವಶ್ಯಕತೆಯಿರುವುದಿಲ್ಲ. ಇದಕ್ಕೆ ಸೋಲಾರ್ ಪಾಟರ್ ವೀಲ್ ಎಂದು ಕರೆಯುತ್ತಾರೆ.
ಪರಿಸರ ಸ್ನೇಹಿ ಗಣಪನ ಜೊತೆಗೆ ಪರಿಸರ ಸ್ನೇಹಿ ಯಂತ್ರದಿಂದ ಕುಂಬಾರ ಕಲಾವಿದ ಮೂರ್ತಿಗಳನ್ನು ಮಹೇಶ್ ಅವರು ತಯಾರಿಸುವುದು ವಿಶೇಷ.

Stay up to date on all the latest ವಿಶೇಷ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp