ಛತ್ತೀಸ್ ಘರ್: ಉತ್ತಮ ಸೇವೆ ನೀಡಿದ ಪೋಲೀಸ್ ಶ್ವಾನಕ್ಕೆ ‘ಕಾಪ್ ಆಫ್ ದಿ ಮಂತ್’ ಗೌರವ

ಪೋಲೀಸ್ ನಾಯಿಯೊಂದು ಅದರ ಶ್ಲಾಘನೀಯ ಸೇವೆಗಳಿಗಾಗಿ ‘ಕಾಪ್ ಆಫ್ ದಿ ಮಂತ್'(ಮಾಸದ ಆರಕ್ಷಕ) ಎಂಬ ಗೌರವ ಕ್ಕೆ ಪತ್ರವಾಗಿದೆ. ಛತ್ತೀಸ್ ಘರ್ ಪೊಲೀಸ್ ಇಲಾಖೆಗೆ ಸೇರಿದ್ದ ನಾಯಿ ‘ರೂಬಿ’ ಈ ವಿಶೇಷ ಗೌರವಕ್ಕೆ ಭಾಜನವಾಗಿದೆ.
‘ರೂಬಿ’
‘ರೂಬಿ’

ರಾಯ್‍ಪುರ್ : ಪೋಲೀಸ್ ನಾಯಿಯೊಂದು ಅದರ ಶ್ಲಾಘನೀಯ ಸೇವೆಗಳಿಗಾಗಿ ‘ಕಾಪ್ ಆಫ್ ದಿ ಮಂತ್'(ಮಾಸದ ಆರಕ್ಷಕ) ಎಂಬ ಗೌರವ ಕ್ಕೆ ಪತ್ರವಾಗಿದೆ. ಛತ್ತೀಸ್ ಘರ್ ಪೊಲೀಸ್ ಇಲಾಖೆಗೆ ಸೇರಿದ್ದ ನಾಯಿ ‘ರೂಬಿ’ ಈ ವಿಶೇಷ ಗೌರವಕ್ಕೆ ಭಾಜನವಾಗಿದೆ.

ಇಂದ್ರಿಯಗಳನ್ನು ಬಳಸಲು ತರಬೇತಿ ಪಡೆದ, ಪತ್ತೆದಾರಿ ಹೆಣ್ಣುಬೆಲ್ಜಿಯಂ ಶೆಫರ್ಡ್ ನಾಯಿ  ‘ರೂಬಿ’ ಕಾನೂನು ಜಾರಿ ಉದ್ದೇಶಗಳಿಗಾಗಿ ನಿರ್ಣಾಯಕ ಪಾತ್ರವಹಿಸಿದ ಕಾರಣಕ್ಕೆ ಅದರ ನಿರ್ವಾಹಕನೊಂದಿಗೆ ಗೌರವಕ್ಕೆ ಪಾತ್ರವಾಗಿದೆ.

“ಮೊದಲ ಬಾರಿಗೆ, ಪೊಲೀಸ್ ನಾಯಿಯೊಂದಕ್ಕೆ ತರ ಇಬ್ಬರು ಸಿಬ್ಬಂದಿಗಳೊಂದಿಗೆ ‘ಕಾಪ್ ಆಫ್ ದಿ ಮಂತ್' ಗೌರವ ನೀಡಲಾಗಿದೆ. ಸರಂಘರ್ ರಾಯಲ್ ಗರ್ಲ್ ವಿಲಾಸ್ ಪ್ಯಾಲೇಸ್ ಗೆ ಸಂಬಂಧಿಸಿದ ಪ್ರಮುಖ ದರೋಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಕ್ರಿಮಿನಲ್ ಪ್ರಕರಣಗಳನ್ನು ಪರಿಹರಿಸುವಲ್ಲಿ ರೂಬಿ ಪ್ರಮುಖ ಪಾತ್ರ ವಹಿಸಿದ್ದಾಳೆ. ಸ್ಥಳದಿಂದ ಹಲವಾರು ಲಕ್ಷ ರೂಪಾಯಿ ಮೌಲ್ಯದ ಪುರಾತನ ಬೆಳ್ಳಿ ತಟ್ಟೆಗಳನ್ನು ಕಳವು ಮಾಡಲಾಗಿತ್ತು. ರೂಬಿಯ ಕಾರಣದಿಂದ ಪೋಲೀಸರಿಗೆ ಅಗತ್ಯವಾಗಿದ್ದ ಪ್ರಮುಖ ಸುಳಿವು ಲಭ್ಯವಾಗಿ ಅಪಾರ ಸಹಾಯವಾಗಿದೆ.”ಎಂದು ರಾಯ್‌ಘರ್ಎಸ್‌ಪಿ ಸಂತೋಷ್ ಕುಮಾರ್ ಸಿಂಗ್ ಹೇಳಿದರು.

ರಾಯ್ಘರ್ ಜಿಲ್ಲಾ ಪೊಲೀಸರು ಆಗಾಗ್ಗೆ ನಾಲ್ಕು ವರ್ಷದ ರೂಬಿ ಮತ್ತು ಹ್ಯಾಂಡ್ಲರ್ ಕಾನ್‌ಸ್ಟೆಬಲ್ ವೀರೇಂದ್ರ ಆನಂದ್ ಅವರ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಯಾವುದೇ ಪೊಲೀಸ್ ನಾಯಿಗೆ ಅಂತಹ ಪ್ರಶಸ್ತಿ ನೀಡಿರುವ ಮೊದಲ ಸಂದರ್ಭ ಇದಾಗಿದೆ. 

ಡಿಜಿಪಿ ಡಿಎಂ ಅವಸ್ಥಿ ಆದೇಶದ ಮೇರೆ ಛತ್ತೀಸ್ ಘರ್ ಪೊಲೀಸರು ಇತ್ತೀಚೆಗೆ ತಮ್ಮ ಕೆಲಸ ಮತ್ತು ನಿಯೋಜನೆಯ ಸಮಯದಲ್ಲಿ ಉತ್ತಮ ಸಾಧನೆ ತೋರಿಸಿದ್ದ ಲು ಸಿಬ್ಬಂದಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಭ್ಯಾಸವನ್ನು ಪ್ರಾರಂಭಿಸಿದರು. 'ಸಾಮಾನ್ಯ' ಕೆಲಸ ನಿರ್ವಹಿಸುವ ಇಂತಹ ಪೊಲೀಸರನ್ನು ‘ಕಾಮ್ ಆಫ್ ದಿ ಮಂತ್’ ಪ್ರಶಸ್ತಿ ನೀಡಿ ಗುರುತಿಸಲಾಗುತ್ತದೆ. ನಗದು ಪ್ರಶಸ್ತಿಯಲ್ಲದೆ, ಇಲಾಖೆಯ ಸಹೋದ್ಯೋಗಿಗಳಲ್ಲಿ ಉತ್ಸಾಹ ಹೆಚ್ಚಿಸಲು ಅವರ ಚಿತ್ರಗಳನ್ನು ಸಂಬಂಧಪಟ್ಟ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರದರ್ಶಿಸಲಾಗುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com