ಮೇಲ್ ಅಂಡ್ ಮೋಟಾರ್ ಸರ್ವೀಸ್ ಚಾಲಕ ಆರ್. ಬಾಲಕೃಷ್ಣನ್ ಗೆ ಮೇಘದೂತ ಪ್ರಶಸ್ತಿ

ಅಂಚೆ ಇಲಾಖೆಯಿಂದ ನೀಡುವ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಮೇಘದೂತ ಪ್ರಶಸ್ತಿ’ಗೆ ಬೆಂಗಳೂರಿನ ಮೋಟರ್ ಸರ್ವಿಸ್ ವಿಭಾಗದ ಚಾಲಕ ಬಾಲಕೃಷ್ಣ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸುತ್ತಿರುವ ಬಾಲಕೃಷ್ಣ
ಪ್ರಶಸ್ತಿ ಸ್ವೀಕರಿಸುತ್ತಿರುವ ಬಾಲಕೃಷ್ಣ

ಬೆಂಗಳೂರು: ಅಂಚೆ ಇಲಾಖೆಯಿಂದ ನೀಡುವ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಮೇಘದೂತ ಪ್ರಶಸ್ತಿ’ಗೆ ಬೆಂಗಳೂರಿನ ಮೋಟರ್ ಸರ್ವಿಸ್ ವಿಭಾಗದ ಚಾಲಕ ಬಾಲಕೃಷ್ಣ ಅವರು ಆಯ್ಕೆಯಾಗಿದ್ದಾರೆ.

ಭಾರತಾದ್ಯಂತ  7 ಅಂಚೆ ಸಿಬ್ಬಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾಲಕೃಷ್ಣ ಅವರ ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅವರ ಸಮಯಪ್ರಜ್ಞೆ ಮತ್ತು ಸಮರ್ಪಣೆಯನ್ನು ಪ್ರಶಂಸಿಸಲಾಗಿದೆ. ಮಂಗಳವಾರ ಪ್ರಶಸ್ತಿ ಪಡೆದಿದ್ದಾರೆ.

ತಮ್ಮ ಕೆಲಸಕ್ಕೆ ಸಂದಿರುವ ಪ್ರಶಸ್ತಿಗಾಗಿ ಬಾಲಕೃಷ್ಣ ಅವರು ಸಂತಸಗೊಂಡಿದ್ದಾರೆ,  ನಾನು ನನ್ನ ಕರ್ತವ್ಯ ಮಾಡಿದ್ದೇನೆ, ಹೆಚ್ಚಿನದ್ದೇನು ಮಾಡಿಲ್ಲ, ನನ್ನನ್ನು ಗುರುತಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ, ಸರ್ಕಾರ ನನಗೆ ಕೈತುಂಬಾ ಸಂಬಳ ನೀಡುತ್ತಿದೆ, ನನ್ನ ಇಬ್ಬರು ಮಕ್ಕಳ ಶಾಲಾಶುಲ್ಕ ಪಾವತಿಸುತ್ತಿದೆ, ನಾಲ್ಕು ವರ್ಷಕ್ಕೊಮ್ಮೆ ಪ್ರವಾಸಕ್ಕಾಗಿ ರಜೆ ನೀಡುತ್ತಿದೆ, ಇದಕ್ಕೆ ನಾನು ಏನು ಹೆಚ್ಚಿಗೆ ನೀಡಲಾಗದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜನಿಸಿದ ಬಾಲಕೃಷ್ಣ 7 ವರ್ಷದವರಾಗಿದ್ದಾಗ ಅನಾಥರಾದರು, ಹೇಗೋ ಕಷ್ಟಪಟ್ಟು ಎಸ್ ಎಸ್ ಎಲ್ ಸಿ ಪಾಸು ಮಾಡಿದರು. 1998 ರಲ್ಲಿ ಡಿ ಗ್ರೂಪ್ ನೌಕರನಾಗಿ ಇಲಾಖೆ ಸೇರಿದರು. ವಾಹನಗಳನ್ನು ಸ್ವಚ್ಛಗೊಳಿಸಿ ಮ್ಯೆಕಾನಿಕ್ ಗಳಿಗೆ ಸಹಾಯ ಮಾಡುತ್ತಿದ್ದರು, ಮೂರು ವರ್ಷಗಳ ನಂತರ ಅವರನ್ನು ಚಾಲಕರಾಗಿ ಬಡ್ತಿ ನೀಡಲಾಯಿತು.

ಎರಡು ದಶಕಗಳ ಕಾಲ ಸ್ಪೀಡ್ ಪೋಸ್ಟ್ ಸಾಗಿಸುವಲ್ಲಿ ಅವರ ಪಾತ್ರದಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಹಕರನ್ನು ಪದೇ ಪದೇ ಭೇಟಿಯಾಗಿ, ತಾಳ್ಮೆಯಿಂದ ಕಾದು ಚೆಕ್ ಸಂಗ್ರಹಿಸುತ್ತಿದ್ದರು. ಇನ್ಫೋಸಿಸ್, ವಿಪ್ರೊ, ಬಿಇಎಂಎಲ್ ಮುಂತಾದ ಪ್ರತಿಷ್ಠಿತ ಕಂಪನಿಗಳಲ್ಲಿ ಬಿಲ್ ಕಲೆಕ್ಟ್ ಮಾಡುತ್ತಿದ್ದರು, ಅವರ ಸಾಧನೆ ಗಮನಿಸಿದ ಇಲಾಖೆ ಪ್ರಶಸ್ತಿ ನೀಡಿದೆ.

ಏಳು ತಿಂಗಳಿಂದ ನಾನು ಅವರನ್ನು ಗಮನಿಸಿದ್ದೇನೆ, ಯಾವಾಗ ಕರೆದರು ವಾಹನದೊಂದಿಗೆ ಲಭ್ಯವಿರುತ್ತಾರೆ, ರಾತ್ರಿ ವೇಳೆ ಕೂಡ ಅವರು ಕೆಲಸಕ್ಕೆ ಲಭ್ಯವಿರುತ್ತಾರೆ ಎಂದು ರೈಲ್ ಮೇಲ್ ಸೇವೆಯ ಸೂಪರಿಂಡೆಂಟ್ ವಿ.ಕೆ ಮೋಹನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com