ಅಂಗವೈಕಲ್ಯ ಮರೆತು ಕಲೆಯೊಂದಿಗೆ ಒಂದಾದ ಬದುಕು

ಭಾರತೀಯ ವಾಯುಪಡೆಯ ಸೇನಾಧಿಕಾರಿ ಮೃದುಲ್ ಘೋಷ್ ಗೆ ಒಮ್ಮೆ ಬೆನ್ನುಹುರಿಯ ಗಾಯವಾದ ನಂತರ ಅವರು ಬದುಕೇ ಮುಗಿದುಹೋದಂತಿದ್ದರು.ದಿನನಿತ್ಯ ಗಾಲಿಕುರ್ಚಿಯಲ್ಲಿ ಕಳೆಯಬೇಕಾದ ಸಂಗತಿ ಅವರಿಗೆ ಅಪಾರ ನೋವನ್ನು ನೀಡಿತ್ತು. ಆದರೆ ಜುಲೈ 2015ರಲ್ಲಿ ಪುಣೆಯ ಪ್ಯಾರಾಪ್ಲೆಜಿಕ್ ಪುನರ್ವಸತಿ ಕೇಂದ್ರವು ಕಾಲು ಮತ್ತು ಬಾಯಿ ಚಿತ್ರಕಲೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿರುವ ಮಾ
ಮೃದುಲ್ ಘೋಷ್
ಮೃದುಲ್ ಘೋಷ್

ಭಾರತೀಯ ವಾಯುಪಡೆಯ ಸೇನಾಧಿಕಾರಿ ಮೃದುಲ್ ಘೋಷ್ ಗೆ ಒಮ್ಮೆ ಬೆನ್ನುಹುರಿಯ ಗಾಯವಾದ ನಂತರ ಅವರು ಬದುಕೇ ಮುಗಿದುಹೋದಂತಿದ್ದರು.ದಿನನಿತ್ಯ ಗಾಲಿಕುರ್ಚಿಯಲ್ಲಿ ಕಳೆಯಬೇಕಾದ ಸಂಗತಿ ಅವರಿಗೆ ಅಪಾರ ನೋವನ್ನು ನೀಡಿತ್ತು. ಆದರೆ ಜುಲೈ 2015ರಲ್ಲಿ ಪುಣೆಯ ಪ್ಯಾರಾಪ್ಲೆಜಿಕ್ ಪುನರ್ವಸತಿ ಕೇಂದ್ರವು ಕಾಲು ಮತ್ತು ಬಾಯಿ ಚಿತ್ರಕಲೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿರುವ ಮಾಹಿತಿ ದೊರಕುತ್ತಿದ್ದಂತೆ ಇಅವರಲ್ಲಿನ ಕಲಾವಿದ ಎದ್ದು ಕುಳಿತಿದ್ದ!

ಹೌದು, 31 ವರ್ಷದವರಾದ ಘೋಷ್ ತಾವು ನಡೆದಾಡುವ ಶಕ್ತಿ ಕಳೆದುಕೊಂಡಿದ್ದರೂ ತಮ್ಮೊಳಗಿನ ಕಲಾವಿದನನ್ನು ಕಳೆದುಕೊಂಡಿಲ್ಲ ಎಂದು ಬಹುಬೇಗಾರ್ಥೈಸಿಕೊಂಡರು ಮತ್ತು  ಶೀಘ್ರದಲ್ಲೇಅದರಲ್ಲೇ ಮುಳುಗೇಳುವಷ್ಟು ಮಟ್ಟಿಗೆ ಕಲೆಯಲ್ಲಿ ತೊಡಗಿಕೊಂಡರು.“ನಾನು ಕಲೆಯ ಮೂಲಕ  ಸ್ವಾತಂತ್ರ್ಯ ಮತ್ತು ಸಕಾರಾತ್ಮಕತೆಯ ಪ್ರಜ್ಞೆಯನ್ನು ಅನುಭವಿಸುತ್ತೇನೆ. ನನ್ನೊಡನೆ ನಾನಲ್ಲದೆ ಇನ್ನಾರದೂ ಸ್ಪರ್ಧೆ ಇಲ್ಲ.  ಆದರೆ ಕಲೆ ನನ್ನನ್ನು ಆಶ್ರಯಿಸಿರುವ ಕಾರಣ ನನ್ನ ಜೀವನದ ದುರಂತ ಹಾಗೂ ನೋವನ್ನು ಮರೆಯುವ ದಿನಗಳು ನನಗೆ ಸಿಕ್ಕಿದೆ."2010 ರಲ್ಲಿ ಸಂಭವಿಸಿದ ಅಪಘಾತದ ಬಳಿಕ ಮೂರು ವರ್ಷಗಳ ಚಿಕಿತ್ಸೆ ಪಡೆದ ಘೋಷ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಘೋಷ್, ಭಾರತದಾದ್ಯಂತದ 19 ಕಲಾವಿದರೊಂದಿಗೆ, ಅಂಗವಿಕಲ ಕಲಾವಿದರ ಅಂತರರಾಷ್ಟ್ರೀಯ ನೋಂದಾಯಿತ ಸಮಾಜವಾದ ಮೌತ್ ಮತ್ತು ಫೂಟ್ ಪೇಂಟಿಂಗ್ ಆರ್ಟಿಸ್ಟ್ಸ್ ಅಸೋಸಿಯೇಶನ್ (ಎಂಎಫ್‌ಪಿಎ) ಆಯೋಜಿಸಿರುವ ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.ಮೂರು ಗಂಟೆಗಳ ಕಾಲ ನಡೆಯುವ ಈವೆಂಟ್‌ನಲ್ಲಿ ಫೆಬ್ರವರಿ 22 ರಂದು ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕಲಾವಿದರು ನಡೆಸುವ ನೇರ ಪ್ರದರ್ಶನಕ್ಕೆ ಹೆಚ್ಚುವರಿಯಾಗಿ ಕಲಾವಿದ ತಮ್ಮ 40 ಮೂಲ ವರ್ಣಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ.

ಘೋಷ್ ಭಾವಚಿತ್ರಗಳ ಮೇಲೆ ಕೇಂದ್ರೀಕರಿಸಿದರೆ, ಬೆಂಗಳೂರು ಮೂಲದ ಕಲಾವಿದ ರಾಮಕೃಷ್ಣನ್ ನಾರಾಯಣಸ್ವಾಮಿ (50) ಪ್ರಕೃತಿಯ ದೃಶ್ಯಗಳನ್ನು ಮರುಸೃಷ್ಟಿ ಮಾಡುವುದಲ್ಲಿ ನಿಪುಣರಿದ್ದಾರೆ. ಸೆರೆಬ್ರಲ್ ಪಾಲ್ಸಿ ಯಿಂದ ಬಳಲುತ್ತಿರುವ ನಾರಾಯಣಸ್ವಾಮಿ ಓರ್ವ ಲ್ಯಾಡ್ ಸ್ಕೇಪ್ ಆರ್ಟಿಸ್ಟ್ ಆಗಿದ್ದಾರೆ.ಬಾಲ್ಯದಿಂದಲೂ ಕಲೆ ಬಗೆಗೆ ಅಪಾರ ಒಅಲವಿರುವ ಇವರ ಬಗೆಗೆ ಅವರ ಸೋದರ ಮಾತನಾಡಿ "ಅವರು ತಮ್ಮ ಕಲಾಕೃತಿಗಳನ್ನು ಮನೆಗೆ ತರುತ್ತಿದ್ದರು ಮತ್ತು ಅದನ್ನು ನಾವು ನೋಡುತ್ತಿದ್ದೆವು ಅದೆಷ್ಟು ಸುಂದರವಾಗಿತ್ತು! “ಅವರು ಪ್ರತಿದಿನ ಸುಮಾರು 2-3 ಗಂಟೆಗಳ ಕಾಲ ಕಲೆಗಾಗಿ ಕಳೆಯುತ್ತಾರೆ. ಮತ್ತು ಬಿಡುವಾದಾಗ ಟಿವಿ ವೀಕ್ಷಿಸುತ್ತಾರೆ.ಪ್ರಕೃತಿಯ ಮೇಲೆ ಕೇಂದ್ರೀಕರಿಸುವ ಕಾರ್ಯಕ್ರಮಗಳು ಅವರಿಗಿಷ್ಟ,, ಅದು ಅವರ ಸ್ಪೂರ್ತಿ."

ಬೆಂಗಳೂರಿನಲ್ಲಿ ತನ್ನ ಮೊದಲಪ್ರದರ್ಶನವನ್ನು ಎಂಎಫ್‌ಪಿಎಯ ಆಯೋಜಿಸಿದೆ. "ನಗರವು ವಿಶೇಷಚೇತನರ ಸ್ನೇಹಿಯಾಗಿದೆ.ಕಲಾವಿದರ ಅಗತ್ಯಗಳಿಗೆ ಸರಿಹೋಗಲಿದೆ ಎನ್ನುವುದನ್ನು ನಾವು ಖಚಿತಡಿಸಿಕೊಂಡಿದ್ದೇವೆ."ಎಂಎಫ್‌ಪಿಎಯ ಮಾರುಕಟ್ಟೆ ಮತ್ತು ಅಭಿವೃದ್ಧಿಯ ಮುಖ್ಯಸ್ಥ ಬಾಬಿ ಥಾಮಸ್ ಹೇಳಿದ್ದಾರೆ. ಕಲಾವಿದರ ಅನೇಕ ಕೃತಿಗಳನ್ನುಪ್ರದರ್ಶಿಸಲಾಗುವುದು ಆದರೆ ಕಲಾವಿದರಿಗೆ ಹೆಚ್ಚು ಸಮಯ ಕುಳಿತಿರಲು ಸಾಧ್ಯವಾಗದ ಕಾರಣ ಕಾರ್ಯಕ್ರಮವು ಕೇವಲ ಎರಡು ಗಂಟೆಗಳಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com