ಕಾಫಿತೋಟದಲ್ಲಿ ಕಾಡುಕೋಣ! ಚಿಕ್ಕಮಗಳೂರು ಎಸ್ಟೇಟ್ ಗಳಲ್ಲಿ 'ವೈಲ್ಡ್ ಲೈಫ್ ಕಾಫಿ'' ಹವಾ

ಚಿಕ್ಕಮಗಳೂರು ಕಾಫಿ ಎಸ್ಟೇಟ್ ಗಳಲ್ಲಿ ಹುಲಿಗಳು, ಕಾಡುಕೋಣಗಳು ಅಡ್ಡಾಡುವುದು ಭಯಾನಕವೆನಿಸಬಹುದು ಆದರೆ ಅರಣ್ಯದಂತಿರುವ ಈ ತೋಟಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆಯನ್ನು ವೃದ್ಧಿಸುವಂತೆ ಂಅಡಲು ಅನುಮತಿಸುವ ಪರಿಕಲ್ಪನೆಯಾದ ‘"ವೈಲ್ಡ್ ಲೈಫ್ ಕಾಫಿ" ಎಂಬ ಯೋಜನೆ ಸಿದ್ದವಾಗುತ್ತಿದೆ,ಇದು ನಿಧಾನವಾಗಿಯಾದರೂ ಚಿಕ್ಕಮಗಳೂರು ಈ ಯೋಜನೆಗೆ ತೆರೆದುಕೊಳ್ಳುತ್ತಿದೆ.
ಕಾಫಿತೋಟದಲ್ಲಿ ಕಾಡುಕೋಣ! ಚಿಕ್ಕಮಗಳೂರು ಎಸ್ಟೇಟ್ ಗಳಲ್ಲಿ 'ವೈಲ್ಡ್ ಲೈಫ್ ಕಾಫಿ'' ಹವಾ

ಚಿಕ್ಕಮಗಳೂರು: ಚಿಕ್ಕಮಗಳೂರು ಕಾಫಿ ಎಸ್ಟೇಟ್ ಗಳಲ್ಲಿ ಹುಲಿಗಳು, ಕಾಡುಕೋಣಗಳು ಅಡ್ಡಾಡುವುದು ಭಯಾನಕವೆನಿಸಬಹುದು ಆದರೆ ಅರಣ್ಯದಂತಿರುವ ಈ ತೋಟಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆಯನ್ನು ವೃದ್ಧಿಸುವಂತೆ ಂಅಡಲು ಅನುಮತಿಸುವ ಪರಿಕಲ್ಪನೆಯಾದ ‘"ವೈಲ್ಡ್ ಲೈಫ್ ಕಾಫಿ" ಎಂಬ ಯೋಜನೆ ಸಿದ್ದವಾಗುತ್ತಿದೆ,ಇದು ನಿಧಾನವಾಗಿಯಾದರೂ ಚಿಕ್ಕಮಗಳೂರು ಈ ಯೋಜನೆಗೆ ತೆರೆದುಕೊಳ್ಳುತ್ತಿದೆ.

770 ಎಕರೆ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಅನುಕೂಲವಾಗುವ ಪರಿಸರ ನಿರ್ಮಿಸಿ ವನ್ಯಜೀವಿಗಳ ಸ್ನೇಹಿ ವಾತಾವರಣ ಅಳವಡಿಸಿಕೊಂಡ ನಂತರ ಕೆಲವು ತೋಟಗಾರರು ಯುಎಸ್ ಮೂಲದ ಡಬ್ಲ್ಯುಎಫ್‌ಇಎನ್ (ವನ್ಯಜೀವಿ-ಸ್ನೇಹಿ ಎಂಟರ್‌ಪ್ರೈಸ್ ನೆಟ್‌ವರ್ಕ್) ಸಂಸ್ಥೆಯಿಂದ ‘ವನ್ಯಜೀವಿ ಸ್ನೇಹಿ’ (wildlife-friendly’) ಪ್ರಮಾಣಪತ್ರವನ್ನು ಪಡೆದಿದ್ದಾರೆ.

ಮರದ ನೆರಳಲ್ಲಿ ಅರೇಬಿಕಾ ಕಾಫಿಯನ್ನು ಬೆಳೆಸುವ ಈ ಎಸ್ಟೇಟುಗಳು ಹುಲಿಗಳು, ಕಾಡುಕೋಣಗಳುಳು, ಸಾಂಬಾರ್ ಗಳು, , ಹುಲ್ಲೆ, ಮುಳ್ಳುಹಂದಿ ಉಭಯಚರಗಳು, ಸರೀಸೃಪಗಳು ಮತ್ತು ನೂರಾರು ಪಕ್ಷಿ ಪ್ರಭೇದಗಳಿಗೆ  ಆಶ್ರಯತಾಣವಾಗಿ ಹೊರಹೊಮ್ಮಿದೆ. ಇದಲ್ಲದೆ, ತೋಟಗಳಲ್ಲಿನ ವನ್ಯಜೀವಿಗಳನ್ನು ಕಾಪಾಡಲು  ಕೃಷಿ ಕಾರ್ಮಿಕರಿಗೆ ಮತ್ತು ಇತರರಿಗೆ ಶಿಕ್ಷಣ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ, ಮುಳ್ಳುಹಂದಿಗಳು ಮೆಣಸಿನ ರಸ ಹೀರುತ್ತಿದ್ದರೆ ಬಾನೆಟ್ ಮಕಾಕ್ ಗಳು ಹಣ್ಣುಗಳನ್ನುತಿನ್ನುತ್ತವೆ. ಆದರೆ ಒಬ್ಬ ದೊಡ್ಡ ತೋಟಗಾರಿಕಾ ಉದ್ಯಮಿ ಇದರಿಂದಾಗುವ ನಷ್ಟವನ್ನು ಸಹಿಸಿಕೊಳ್ಳಲು  ಸಿದ್ಧರಾಗಿದ್ದಾರೆ, ಆದರೆ ಅಲ್ಪ ರೈತರಿಗೆ ವನ್ಯಜೀವಿಗಳಿಂದ ಉಂಟಾಗುವ ಬೆಳೆ ನಷ್ಟವನ್ನು ಭರಿಸಲು ಸಾಧ್ಯವಾಗುವುದಿಲ್ಲ.

ಭದ್ರಾ ಟೈಗರ್ ರಿಸರ್ವ್‌ನ ಹೊರಗಿನ ಜಕ್ಕನಹಳ್ಳಿ ಗ್ರಾಮದಲ್ಲಿರುವ ಅಂತಹ ಒಂದು ಕಾಫಿ ಎಸ್ಟೇಟ್ ಗೆ ಪತ್ರಿಕೆ ಭೇಟಿ ನೀಡಿತ್ತು. ಎಸ್ಟೇಟ್ ನ ಕಾಫಿ ಗಿಡಗಳಿಗೆ ರಳು ಒದಗಿಸಲು ಫಿಕಸ್, ಜಮುನ್, ಜಾಕ್ ಫ್ರೂಟ್, ಕೆಂಪು ಸೀಡರ್ ಮತ್ತು ಸಣ್ಣ ಪೊದೆಸಸ್ಯಗಳನ್ನು ಸಹ ಬೆಳೆಸಲಾಗಿದೆ.ಇಳಿಜಾರಿನ ಹುಲ್ಲುಗಾವಲುಗಳನ್ನು ಏರಲು ಯಾವುದೇ ತೊಂದರೆಯಿಲ್ಲದ ಕಾರಣ ಕಾಡುಕೋಣಗಳನ್ನು ಈ ತಾಣಗಳಲ್ಲಿ ಕಾಣಲು ಸಾಧ್ಯವಿದೆ. ಎಸ್ಟೇಟ್ ನಲ್ಲಿ ಆಹಾರದ ಲಭ್ಯರ್ತೆ ಉತ್ತಮವಿದೆ ಮಾತ್ರವಲ್ಲದೆ ವು ಸಂತಾನೋತ್ಪತ್ತಿ ಮಾಡಲು ಸಹ ಅವಕಾಶವಿದೆ. ಕಾಡುಕೋಣಗಳು ವರ್ಷವಿಡೀ ಉತ್ತಮ ಹುಲ್ಲು ಮತ್ತು ನೀರನ್ನು ಪಡೆಯುತ್ತವೆ. ಇದಲ್ಲದೆ, ಒಂದು ನಿರ್ದಿಷ್ಟ ಕೃಷಿ ವಿಧಾನವನ್ನು ಅನುಸರಿಸುವ ಈ ಜಾಗ ವನ್ಯಜೀವಿಗಳು ಸಂತಾನೋತ್ಪತ್ತಿ ಮಾಡಲು ನೀರು, ಆಹಾರ ಮತ್ತು ಆಶ್ರಯವನ್ನು ಹೊಂದಿರುವುದರಿಂದ ಅವುಗಳಿಗೆ ಅನುಕೂಲವಿದೆ.

ನಾಲ್ಕು ತಲೆಮಾರುಗಳಿಂದ, ಶ್ರೀದೇವ್ ಹುಲಿಕರೆ ಅವರ ಕುಟುಂಬವು ಸಮುದ್ರ ಮಟ್ಟದಿಂದ 1,325 ಮೀಟರ್ ಎತ್ತರದ ಈ ಭಾಗದಲ್ಲಿ ಕಾಫಿ ಬೆಳೆಯುತ್ತಾ ಬಂದಿದೆ.ವಿಶ್ವದ ಅಗ್ರ 10 ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳ ಮಧ್ಯೆ ಕಾಫಿಯನ್ನು ಬೆಳೆಯಲಾಗುತ್ತಿದೆ.ಹುಲಿಗಳು ಸೇರಿದಂತೆ ನೂರಾರು ಪಕ್ಷಿ ಪ್ರಭೇದಗಳು, ಉಭಯಚರಗಳು, ಸರೀಸೃಪಗಳು ಮತ್ತು ಸಸ್ತನಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುವುದು,ಇಲ್ಲಿನ ವಿಶೇಷತೆ. ಅರೇಬಿಕಾ ಕಾಫಿಯ ವಿಶಿಷ್ಟ ಸುವಾಸನೆಯನ್ನು ವನ್ಯಜೀವಿ ಸ್ನೇಹಿ ಎಂದು ಪ್ರಮಾಣೀಕರಿಸಲಾಗಿದೆ. ಇದಲ್ಲದೆ, ಕಾಫಿಗೆ ಕೀಟನಾಶಕಗಳ ಸಿಂಪಡನೆ ಮಾಡಲಾಗುವುದಿಲ್ಲ ಅಲ್ಲದೆ ಕೀಟಗಳು, ಸಣ್ಣ ಪುಟ್ಟ ಜೀವಿಗಳ ರಕ್ಷಣೆಗಾಗಿ ರಾಸಾಯನಿಕಗಳನ್ನು ನಿಷೇಧಿಸಲಾಗಿದೆ.

, “ನಾವು ನಮ್ಮ ಎಸ್ಟೇಟ್ ಗಳಲ್ಲಿ ಕಾಡುಕೋಣಗಳನ್ನು  ನಿಯಮಿತವಾಗಿ ನೋಡುತ್ತೇವೆ. ಸುಮಾರು 150 ವರ್ಷಗಳ ಹಿಂದೆ, ನಮ್ಮ ಎಸ್ಟೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕಾಡಾಗಿತ್ತು. ಎಲ್ಲಾ ಉಷ್ಣವಲಯದ ಮಳೆಕಾಡುಗಳು ಮತ್ತು ಹಲವಾರು ಜಾತಿಯ ವನ್ಯಜೀವಿಗಳ ನೆಲೆಯಾಗಿದೆ. ಈಗಲೂ ಸಹ, ಹುಲಿ ಇರುವಿಕೆಗೆ ಪರೋಕ್ಷ ಪುರಾವೆಗಳಿವೆ, ಉದಾಹರಣೆಗೆ ಸ್ಕ್ಯಾಟ್, ಪಗ್ ಮಾರ್ಕ್ಸ್, ಇತ್ಯಾದಿ. ನಮ್ಮ ಬೇಲಿಯನ್ನು ಸರಂಧ್ರವಾಗಿ ಇಡುವುದು ವನ್ಯಜೀವಿಗಳಿಗೆ ನಮ್ಮ ಎಸ್ಟೇಟ್ ಸುತ್ತಲೂ ಮುಕ್ತವಾಗಿ ನಡೆಯಲು ಅನುವು ಮಾಡಿಕೊಡುತ್ತದೆ. ನಾವು ವನ್ಯಜೀವಿ ಸ್ನೇಹಿ ಕಾಫಿಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅದಕ್ಕಾಗಿ ನಿರ್ದಿಷ್ಟ ಮಾನದಂಡಗಳನ್ನು ಪಡೆಯುತ್ತಿದ್ದೇವೆ. ”ಶ್ರೀದೇವ್ ಹುಲಿಕರೆ ಹೇಳಿದ್ದಾರೆ.

1904 ಮತ್ತು 1972 ರ ನಡುವೆ, ಸಾಕಷ್ಟು ಅರಣ್ಯ ಭೂಮಿಯನ್ನು ಕಾನೂನುಬದ್ಧವಾಗಿ ಚಿಕ್ಕಮಗಳೂರಿನಲ್ಲಿ  ಕಾಫಿ ತೋಟಗಳಾಗಿ ಪರಿವರ್ತಿಸಲಾಯಿತು. ಈಗ ಹೆಚ್ಚಿನ ರೈತರು ವನ್ಯಜೀವಿ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಸಮಯ ಬಂದಿದೆ ಎಂದು ವನ್ಯಜೀವಿ ಸಂರಕ್ಷಣಾ ತಜ್ಞ ಡಿ ವಿ ಗಿರೀಶ್ ಹೇಳುತ್ತಾರೆ. "ಕಾಫಿ ತೋಟಗಳು ಅದರ ಕೃಷಿ ಮತ್ತು ಉತ್ಪಾದನೆಯಲ್ಲಿ ವನ್ಯಜೀವಿ-ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಲು ಸೂಕ್ತವಾದ ಪರಿಸ್ಥಿತಿಗಳನ್ನು ಪ್ರಸ್ತುತಪಡಿಸುತ್ತವೆ. ಮತ್ತು ಅದು ಪ್ರಾರಂಭವಾಗಿದೆಯೆಂದು ತೋರುತ್ತಿದೆ, ಆದರೆ ರೈತರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಪ್ರಯತ್ನದ ಅಗತ್ಯವಿದೆ."

ಈ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಎಸ್ಟೇಟ್ ಗಳು ಜಾಗೃತಿ ಅಭಿಯಾನವನ್ನು ನಡೆಸುತ್ತಿವೆ ಇದರಿಂದ ಕೆಲ ರೈತರು ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.ಹವಾಮಾನ ಬದಲಾವಣೆಗಳೊಂದಿಗೆ, ವನ್ಯಜೀವಿಗಳ ಸಹಿಷ್ಣುತೆಯು ನಿರ್ಣಾಯಕವಾಗಿದೆ ಮತ್ತು ಅವುಗಳ ಅಗತ್ಯಗಳನ್ನು ಕಾಡುಗಳ ಅಂಚಿನಲ್ಲಿ ವಾಸಿಸುವ ಜನರು ಅರ್ಥಮಾಡಿಕೊಳ್ಳಬೇಕು ಎಂದು ವನ್ಯಜೀವಿ ಸಂರಕ್ಷಣಾ ತಜ್ಞರ ಅಭಿಪ್ರಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com