ಆಧುನಿಕ ವೈದ್ಯಕೀಯ ಅವಿಶ್ಕಾರ ಬಳಸಿ ಶಸ್ತ್ರಚಿಕಿತ್ಸೆ, ಬಾಲಕ ಸೇರಿ 3 ಅಮೂಲ್ಯ ಜೀವಗಳನ್ನು ಉಳಿಸಿದ ಸಿಲಿಕಾನ್ ಸಿಟಿ ಡಾಕ್ಟರ್ಸ್

ಬೆಂಗಳೂರು ವೈದ್ಯರು ಮೂರು ಮಹತ್ವದ ಶಸ್ತ್ರಚಿಕಿತ್ಸೆಗಳನ್ನು ಮಾಡುವುದರೊಡನೆ ಮೂವರ ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ. ಕೋಲ್ಕತ್ತಾದ ನಾಲ್ಕು ವರ್ಷದ ಡಿಲೇಟೆಡ್ ಕಾರ್ಡಿಯೊಮಿಯೋಪತಿ ರೋಗಿ ಮತ್ತು ರಾಜ್ಯದ ಕಿರಿಯ ಹೃದಯ ಕಸಿಗೊಳಗಾಗಿದ್ದ ಬಾಲಕನೊಬ್ಬಹೊಸ ಜೀವನ ಪಡೆದಿದ್ದಾನೆ. 
ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ರಾಜ್ಯದ ಅತ್ಯಂತ ಕಿರಿಯ ಬಾಲಕ
ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ರಾಜ್ಯದ ಅತ್ಯಂತ ಕಿರಿಯ ಬಾಲಕ

ಬೆಂಗಳೂರು: ಬೆಂಗಳೂರು ವೈದ್ಯರು ಮೂರು ಮಹತ್ವದ ಶಸ್ತ್ರಚಿಕಿತ್ಸೆಗಳನ್ನು ಮಾಡುವುದರೊಡನೆ ಮೂವರ ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ. ಕೋಲ್ಕತ್ತಾದ ನಾಲ್ಕು ವರ್ಷದ ಡಿಲೇಟೆಡ್ ಕಾರ್ಡಿಯೊಮಿಯೋಪತಿ ರೋಗಿ ಮತ್ತು ರಾಜ್ಯದ ಕಿರಿಯ ಹೃದಯ ಕಸಿಗೊಳಗಾಗಿದ್ದ ಬಾಲಕನೊಬ್ಬಹೊಸ ಜೀವನ ಪಡೆದಿದ್ದಾನೆ. ಅಲ್ಲದೆ ಮಹಾಪಧಮನಿಯ ಕವಾಟದ ಸೋರಿಕೆ ಮತ್ತು ಹೆಚ್ಚುವರಿ ವಿಸ್ತಾರ ಹೊಂದಿದ್ದ ಹೃದಯ ಸಮಸ್ಯೆಯಿಂದ (aortic valve leak and enlarged heart)  43 ವರ್ಷದ ನೈಜೀರಿಯಾದ ಭೂಶಾಸ್ತ್ರಜ್ಞ  ಹಾಗೂ  ಪಿತ್ತಜನಕಾಂಗದ ಕಸಿಗೆ ಒಳಗಾಗಿದ್ದ ಇನ್ನೊಬ್ಬ 39 ವರ್ಷದ ನೈಜೀರಿಯಾ ಪ್ರಜೆಯು ವೈದ್ಯರ ಈ ಮಹತ್ವದ ಕಾರ್ಯದಿಂಡ  ತಮ್ಮ ಪಾಲಿಗೆ ಹೊಸ ಹುಟ್ಟನ್ನು ಪಡೆದುಕೊಂಡರು.

ವಿಶೇಷವೆಂದರೆ ನೈಜೀರಿಯಾದ ಇಬ್ಬರು ರೋಗಿಗಳು ಕೊನೆಯ ಎರಡು ರೋಗಿಗಳು ಯೆಹೋವನ ಸಾಕ್ಷಿ (ಯಹೂದ್ಯ ಧರ್ಮ)ಗೆ ಸೇರಿದವರಾಗಿದ್ದು ಅವರು  ರಕ್ತ ವರ್ಗಾವಣೆಯನ್ನು ಸ್ವೀಕರಿಸುವುದಿಲ್ಲ,  ಆ ಮೂಲಕ ಅವರು ವೈದ್ಯರಿಗೆ ಸವಾಲಾಗಿದ್ದರು. ಆದರೆ ಈ ಪ್ರಕರಣದಲ್ಲಿ ನೈಜೀರಿಯನ್ ಪ್ರಜೆಗಳ ನಂಬಿಕೆಯನ್ನು ಗೌರವಿಸಿ , ರಕ್ತವನ್ನು ಬದಲಿಸಲು ಪರ್ಯಾಯ ವಿಧಾನಗಳನ್ನು ಬಳಸಿದ್ದರು.

ಕೋಲ್ಕತ್ತಾದ ನಾಲ್ಕು ವರ್ಷದ ಬಾಲಕ ಚಹಾಲ್  ಪಟ್ವಾರಿ ಎರಡು ವರ್ಷದಿಂದ ಡಿಲೇಟೆಡ್ ಕಾರ್ಡಿಯೊಮಿಯೋಪತಿಯಿಂದ ಬಳಲುತ್ತಿದ್ದ. ಈ ಸ್ಥಿತಿಯಲ್ಲಿ ಎಡ ಕುಹರದ ವೈಫಲ್ಯದ ಕಾರಣ  ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯ ಕಡಿಮೆಯಾಗಿತ್ತು. ಇಂತಹಾ ವೇಳೆ ಬಾಲಕನು ಬದುಕುಳಿಯಲು ಹೃದಯ ಕಸಿ ಮಾಡುವ ಏಕೈಕ ಆಯ್ಕೆಯಾಗಿತ್ತು. ಇದಕ್ಕಾಗಿ ಬಾಲಕನ ಕುಟುಂಬ ಜೀವ ಸಾರ್ಥಕತೆಯಲ್ಲಿ ನೊಂದಾಯಿಸಿಕೊಂಡಿದೆ.ಇದು 1994 ರ ಮಾನವ ಅಂಗಗಳ ಕಸಿ ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆಗೆ ನೇಮಕವಾಗಿದ್ದು  ಅಂತಿಮವಾಗಿ, ಅವರು ದಾನಿಯನ್ನು ಪಡೆದರು, ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿಯ ಹೃದಯವನ್ನು ಬಾಲಕನಿಗೆ ಅಳವಡಿಸಲಾಯಿತು.

ನಾರಾಯಣ ಹೆಲ್ತ್ ಸಿಟಿಯ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ಕಾರ್ಡಿಯಾಲಜಿಸ್ಟ್ ಮತ್ತು ಹೃದಯ ಕಸಿ ವೈದ್ಯ ಡಾ.ಶಶಿರಾಜ್ ಸುಬ್ರಮಣ್ಯ, “ಚಹಾಲ್ ಹೃದಯ ವೈಫಲ್ಯದ ನಾಲ್ಕನೇ ಹಂತದಲ್ಲಿದ್ದ. ಅಲ್ಲಎ ಆತ ದುರ್ಬಲ ದೇಹಸ್ಥಿತಿ ಹೊಂದಿದ್ದ.  ನಮ್ಮ ಸಮಗ್ರ ವೈದ್ಯಕೀಯ ತಂಡಗಳ ಸಹಾಯದಿಂದ ನಾವು ಅವನಿಗೆ ಮ`ರುಹುಟ್ಟು ನೀಡಲು ಯಶಸ್ವಿಯಾಗಿದ್ದೆವು. ಅಲ್ಲದೆ ಅತ್ಯುತ್ತಮ ಹೃದಯ ದಾನಿಯ ನೆರವು ನಮಗೆ ಸಕಾಲಕ್ಕೆ ದೊರಕಿತ್ತು"  ಎಂದರು. 43 ವರ್ಷದ ನೈಜೀರಿಯಾ ಭೂ ವಿಜ್ಞಾನಿ ಉವೆನ್ ಅವರ ವಿಷಯದಲ್ಲಿ, ತಜ್ಞರು ಬೆಂಟಲ್ ಆಪರೇಷನ್ ವಿಧಾನವನ್ನು ಬಳಸಿದರು, ಇದರಲ್ಲಿ ಮಹಾಪಧಮನಿಯ ಕವಾಟವನ್ನು ಮಾತ್ರವಲ್ಲ ಸಂಪೂರ್ಣ ಮಹಾಪಧಮನಿಯ ಮೂಲವನ್ನು ಬದಲಿಸಲಾಗಿದೆ

“ನಾವು ಯಾವುದೇ ರಕ್ತ ವರ್ಗಾವಣೆಯನ್ನು ಮಾಡಲಾಗದ ಕಾರಣ ಈ ಶಸ್ತ್ರಚಿಕಿತ್ಸೆ ಸವಾಲಿನದಾಗಿತ್ತು.ಕನಿಷ್ಠ ರಕ್ತಸ್ರಾವವನ್ನು  ಖಚಿತಪಡಿಸಿಕೊಳ್ಳಬೇಕಾಗಿತ್ತು. ನಾವು ಆಪರೇಷನ್ ಮಾಡುತ್ತಿರುವಾಗ, ರಕ್ತಸ್ರಾವವನ್ನು  ನಿರ್ಬಂಧಿಸಲು ನಾವು ತಕ್ಷಣಹೊಲಿಗೆ ಹಾಕುತ್ತಿದ್ದೆವು.”ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಹೃದಯ ಕಸಿ ಶಸ್ತ್ರಚಿಕಿತ್ಸೆ, ಎಚ್‌ಒಡಿ ಮತ್ತು ಸಲಹೆಗಾರ ಡಾ.ದೇವಾನಂದ ಎನ್.ಎಸ್ ಹೇಳಿದ್ದಾರೆ.

ಇನ್ನೊಂದೇ ಪ್ರಕರಣದಲ್ಲಿ ಭಾರತದ ಮೊದಲ ಯಶಸ್ವಿ ಪಿತ್ತಜನಕಾಂಗದ ಕಸಿಯನ್ನು ನೈಜೀರಿಯಾದ 39 ವರ್ಷದ ವ್ಯಕ್ತಿಗೆ ನಡೆಸಲಾಗಿದೆ. ಪಿತ್ತಜನಕಾಂಗದ ಕಸಿ ಇಲ್ಲದೆ ಆತ ದುಕುಳಿಯುವ ಸಾಧ್ಯತೆಗಳು ಶೇಕಡಾ 10 ಕ್ಕಿಂತ ಕಡಿಮೆಯಿದ್ದವು. “ವಿಶಿಷ್ಟವಾಗಿ, ಪಿತ್ತಜನಕಾಂಗದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ರೋಗಿಗಳು ಸಾಕಷ್ಟು ರಕ್ತವನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ರೋಗಿ ಉಳಿಯಲು ರಕ್ತದ ಬದಲಾವಣೆ ಅತ್ಯಗತ್ಯ. ಸಾಮಾನ್ಯ ಪಿತ್ತಜನಕಾಂಗದ ಕಸಿಗಾಗಿ, ವೈದ್ಯರು ಕನಿಷ್ಠ 3-4 ಯುನಿಟ್ ರಕ್ತದ ಜೊತೆಗೆ ಅದೇ ರೀತಿಯ ಪ್ಲಾಸ್ಮಾ / ಪ್ಲೇಟ್‌ಲೆಟ್‌ಗಳನ್ನು ರೋಗಿಗೆ  ನೀಡುತ್ತಾರೆ.ಆದರೆ ಈ ಸಂದರ್ಭದಲ್ಲಿ, ನಾವು ಪರ್ಯಾಯ ಮಾರ್ಗ ಅನುಸರಿಸಬೇಕಿತ್ತು." ಆಸ್ಟರ್ ಸಿಎಂಐ ಆಸ್ಪತ್ರೆಯ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಡಾ.ಮಲ್ಲಿಕರ್ಜುನ್ ಸಕ್ಪಾಲ್ ಹೇಳಿದ್ದಾರೆ.

“ನಾವು ಬದಲಿಗೆ 'ನಾರ್ಮೋ-ವೊಲೆಮಿಕ್ ಹೆಮೋಡಿಲ್ಯೂಷನ್' ತಂತ್ರವನ್ನು ಬಳಸಿದ್ದೇವೆ, ಅಲ್ಲಿ ನಾವು ರೋಗಿಯ ಮತ್ತು ದಾನಿಗಳ ರಕ್ತವನ್ನು ತಲಾ ಎರಡು ಘಟಕಗಳನ್ನು ತೆಗೆದುಕೊಂಡು ಶಸ್ತ್ರಚಿಕಿತ್ಸೆಯ ಉದ್ದಕ್ಕೂ ಇದನ್ನು ಸಂಪರ್ಕದಲ್ಲಿರಿಸಿದ್ದೆವು. ವಿಶೇಷ ಸಾಧನಗಳನ್ನು ಬಳಕೆ ಮಾಡಿರುವ ಕಾರಣ  ರಕ್ತ ಪರಿಚಲನೆಯಲ್ಲಿ ಯಾವುದೇ ವಿರಾಮ ಇರಲಿಲ್ಲ. . ಈ ತಂತ್ರವನ್ನು ರೋಗಿಯೊಂದಿಗೆ ಮೊದಲೇ ಚರ್ಚಿಸಲಾಯಿತು ಮತ್ತು ಅದು ಅವರ ನಂಬಿಕೆಗೆ ಯಾವ ಹಾನಿಯನ್ನು ಉಂಟುಮಾಡುತ್ತಿರಲಿಲ್ಲ."ಆಸ್ಟರ್ ಸಿಎಮ್ಐ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ ಡಾ.ಪ್ರಕಾಶ್ ದೊರೆಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com