ಚಿನ್ನ, ಚಿನ್ನ, ನೋಡಲು ಇನ್ನೂ ಬಲು ಚೆನ್ನ ಈ  ಹೋಟೆಲ್! ವಿಡಿಯೋ

ಅಪ್ಟಟ ಬಂಗಾರದ  ಹೋಟೆಲ್ ಅದು..!!  24 ಕ್ಯಾರೆಟ್ ಚಿನ್ನ ಬಳಸಿ, ನಿರ್ಮಿಸಿರುವ ವಿಶ್ವದ ಮೊದಲ ಹೋಟೆಲ್ ಇದು.! ಎಂದರೆ  ನಂಬುದು ಸ್ವಲ್ಪ ಕಷ್ಟವೆ ಸರಿ. ಅದರೂ  ನಂಬಲೇಬೇಕು.!

Published: 06th July 2020 12:31 AM  |   Last Updated: 06th July 2020 01:28 PM   |  A+A-


The_Dolce_Hanoi_Golden_Lake_Hotel_has_interiors_adorned_with_gold1

ಡಾಲ್ಸ್ ಹನೋಯಿ ಗೋಲ್ಡನ್ ಲೇಕ್ ಹೋಟೆಲ್

Posted By : Nagaraja AB
Source : UNI

ವಿಯೆಟ್ನಾಂ: ಅದೊಂದು ಅಪರೂರೂಪದ ಹೊಟೇಲ್.!!. ಕೊರೊನಾದ ಲಾಕ್ ಡೌನ್ ಮುಗಿಸಿ, ಶುರು ಮಾಡಿರುವ ಆ ಹೋಟೆಲ್ ಬಗ್ಗೆ ಹೇಳುವುದಕ್ಕೆ ಹಲವು ಕಾರಣಗಳಿವೆ.ಅಂತಹ ಹಲವು ವಿಶೇಷ ಗಳನ್ನು ತುಂಬಿಕೊಂಡಿದೆ. 

ಅದೇನೆಂದರೆ,ಅಪ್ಟಟ ಬಂಗಾರದ  ಹೋಟೆಲ್ ಅದು..!!  24 ಕ್ಯಾರೆಟ್ ಚಿನ್ನ ಬಳಸಿ, ನಿರ್ಮಿಸಿರುವ ವಿಶ್ವದ ಮೊದಲ ಹೋಟೆಲ್ ಇದು.! ಎಂದರೆ  ನಂಬುದು ಸ್ವಲ್ಪ ಕಷ್ಟವೆ ಸರಿ. ಅದರೂ  ನಂಬಲೇಬೇಕು.!

ಸರಿ ಹೋಟೆಲ್ ಹೊರಭಾಗಕ್ಕೆ ಹಾಗೂ ಒಳಾಂಗಣದಲ್ಲಿ 24 ಕ್ಯಾರೆಟ್ ಚಿನ್ನದ ಪ್ಲೇಟ್ ಅಥವಾ ತಗಡುಗಳನ್ನು ಬಳಸಿ ನಿರ್ಮಿಸಲಾಗಿದೆ  ಇದರ ನಿರ್ಮಾಣಕ್ಕೆ ಬರೋಬರಿ ಹನ್ನೊಂದು ವರ್ಷ ಸಮಯವೂ  ಹಿಡಿದಿದೆ.

ಹೋಟೆಲ್ ಹೆಸರು ಡಾಲ್ಸ್ ಹನೋಯಿ ಗೋಲ್ಡನ್ ಲೇಕ್. ವಿಯೆಟ್ನಾಂ ರಾಜಧಾನಿ ಕೇಂದ್ರ ಭಾಗದಲ್ಲಿ, ಜಿಯಾಂಗ್ ವೋ ಲೇಕ್ ಪ್ರದೇಶದಲ್ಲಿ ಈ ಹೋಟೆಲ್ ಇದೆ. 24 ಅಂತಸ್ತಿನ, 400 ಕೊಠಡಿಗಳಿವೆ. 

ಈ ಹೋಟೆಲ್ ನಲ್ಲಿ ಒಂದು ರಾತ್ರಿ ವಾಸ್ತವ್ಯಹೂಡಲು  250 ಅಮೆರಿಕನ್ ಡಾಲರ್ ಆಗುತ್ತದೆ. ಭಾರತದ ರುಪಾಯಿಗಳಲ್ಲಿ 18 ಸಾವಿರಕ್ಕಿಂತ ಸ್ವಲ್ಪ ಜಾಸ್ತಿ. ಇಲ್ಲಿ ಬಾತ್ ಟಬ್, ಸಂಡಾಸು, ಮೇಲು ಛಾವಣಿ ಹೀಗೆ ಎತ್ತ ಕಡೆ  ಕಣ್ಣುಬೀರಿದರೂ ಎಲ್ಲವೂ ಗೋಲ್ಡ್ ಪ್ಲೇಟೆಡ್. ಎಲ್ಲವೂ ಚಿನ್ನ. ಚಿನ್ನ, ನೋಡಲು ಬಲು ಚೆನ್ನ.  ಎಲ್ಲವೂ ಲಕ, ಲಕ ಎಂದು ,  ಹೊಳೆಯಲಿದೆ. ಪೂರ ಹೋಟೆಲ್ ಜಗಮಗ.!!ಇನ್ನು ಹೇಳುವುದೇ ಬೇಡ ಅಲ್ಲವೇ? 

Stay up to date on all the latest ವಿಶೇಷ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp