ಕಲೆಗೆ ಯಾವುದೇ ಧರ್ಮವಿಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದ್ದಾಳೆ ಹುಬ್ಬಳ್ಳಿ ಮಹಿಳೆ!

: ಈ ಅಲ್ಪಸಂಖ್ಯಾತ ಮಹಿಳೆಗೆ ಗಣೇಶ ವಿಗ್ರಹ ತಯಾರಿಸಿ ಮಾರಾಟ ಮಾಡುವುದೇ ಆಕೆಯ ಜೀವನೋಪಾಯದ ಪ್ರಮುಖ ಮೂಲ. ಈಕೆಯ ಕಲಾತ್ಮಕ ಕೌಶಲ್ಯಕ್ಕೆ ಯಾವುದೇ ಧರ್ಮವಿಲ್ಲ.
ಸುಮನ್ ಹಾವೇರಿ
ಸುಮನ್ ಹಾವೇರಿ

ಹುಬ್ಬಳ್ಳಿ: ಈ ಅಲ್ಪಸಂಖ್ಯಾತ ಮಹಿಳೆಗೆ ಗಣೇಶ ವಿಗ್ರಹ ತಯಾರಿಸಿ ಮಾರಾಟ ಮಾಡುವುದೇ ಆಕೆಯ ಜೀವನೋಪಾಯದ ಪ್ರಮುಖ ಮೂಲ. ಈಕೆಯ ಕಲಾತ್ಮಕ ಕೌಶಲ್ಯಕ್ಕೆ ಯಾವುದೇ ಧರ್ಮವಿಲ್ಲ.

ಹುಬ್ಬಳ್ಳಿಯ ಮೂಲದ ಮುಸ್ಲಿಂ ಮಹಿಳೆ ಕಳೆದ 2 ವರ್ಷಗಳಿಂದ ಗಣೇಶ ಪ್ರತಿಮೆ ತಯಾರಿಸುವ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ.ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಪರಿಣಿತೆ, ಪ್ರತಿ ವರ್ಷ ಮಳೆಗಾಲ ಆರಂಭಕ್ಕೆ ಮುನ್ನವೇ ಪ್ರತಿಮೆ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ.

ವಿಗ್ರಹ ತಯಾರಕ ಅರುಣ್ ಯಾದವ್ ಅವರ ಬಳಿ ಸಹಾಯಕಿಯಾಗಿ ಸುಮನ್ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆ ಇನ್ನಿಬ್ಬರು  ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರು ವಿಗ್ರಹಕ್ಕೆ ಆಭರಣ ವಿನ್ಯಾಸ ಮತ್ತು ಅಂತಿಮ ಟಚ್ ನೀಡುತ್ತಾರೆ.

ಹಣಕಾಸಿನ ಸಮಸ್ಯೆಯಿಂದಾಗಿ ಸುಮನ್ ತಮ್ಮ ಮನೆಯ ಬಳಿಯಿದ್ದ ವಿಗ್ರಹ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಪರಿಸರ ಸ್ನೇಹಿ ಗಣಪ ತಯಾರಿಕೆ ಹಾಗೂ ವಿವಿಧ ರೀತಿಯ ಗಣೇಶ ವಿಗ್ರಹಳ ತಯಾರಿಕೆ ಖುಷಿ ನೀಡುತ್ತದೆ ಎಂದು ಹೇಳಿದ್ದಾರೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹ ನಿಷೇಧದ ನಂತರ ಕಾಗದದ ವಿಗ್ರಹ ತಯಾರಿಸಲು ಆರಂಭಿಸಿದೆ. ಮುಸ್ಲಿಂ ಸಮುದಾಯದ ಮಹಿಳೆ ಸೇರಿದಂತೆ ವಿವಿಧ ಸಮುದಾಯಗಳ ಆರು ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಅರುಣ್ ಯಾದವ್ ಹೇಳಿದ್ದಾರೆ.

ಉತ್ತಮ ಗುಣಮಟ್ಟದ ಮಣ್ಣು ಸಿಗುವುದು ಈ ದಿನಗಳಲ್ಲಿ ತುಂಬಾ ಕಷ್ಟ, ಜೇಡಿ ಮಣ್ಣಿನಿಂದ ತಯಾರಿಸುವ ಗಣೇಶ ಪ್ರತಿಮೆಗಳು ಬೇಗ ಬಿರುಕು ಬಿಡುತ್ತವೆ. ಆದ್ದರಿಂದ ವಿಗ್ರಹ ತಯಾರಕರಲ್ಲಿ ಜನಪ್ರಿಯವಾಗಿರುವ 'ಪೊರ್ಬಂದರ್ ಚಾಕ್ ಮಿಟ್ಟಿ' ಮತ್ತು ವೃತ್ತಪತ್ರಿಕೆಗಳೊಂದಿಗೆ ವಿಗ್ರಹಗಳನ್ನು ತಯಾರಿಸಲು ನಾನು ಯೋಚಿಸಿದೆ.

ಸೀಮೆ ಸುಣ್ಣದ ಪುಡಿ ಮತ್ತು ವೃತ್ತಪತ್ರಿಕೆಯ ಸಂಯೋಜನೆಯು ಕಡಿಮೆ ತೂಕವಿದ್ದು ಅದರಿಂದ ಬಿರುಕು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಭಾಗದಲ್ಲಿ ಇವರೊಬ್ಬರೇ ಕಾಗದದಿಂದ ಗಣೇಶ ತಯಾರಿಸುವವರಾಗಿದ್ದಾರೆ. ಪ್ರತಿ ವರ್ಷ ಸುಮಾರು 600 ವಿಗ್ರಹ ತಯಾರಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com