ಇಂದು ರಾಷ್ಟ್ರೀಯ ಪಕ್ಷಿ ದಿನ: ಪಕ್ಷಿಗಳ ಮನುಷ್ಯ ಡಾ. ಸಲೀಂಗೆ ಸಲಾಂ!

ಇಂದು ರಾಷ್ಟ್ರೀಯ ಪಕ್ಷಿ ದಿನ. ಜೀವ ಸಂಕುಲದ ರಕ್ಷಣೆಗೆ ಪಕ್ಷಗಳ ಪಾತ್ರ ಅನನ್ಯವಾಗಿದೆ. ರಾಷ್ಟ್ರೀಯ ಪಕ್ಷಿ ದಿನದಂದು ದೇಶದ ಪರಮೋಚ್ಚ ಪಕ್ಷಿ ತಜ್ಞ ಡಾ. ಸಲೀಂ ಅಲಿ ಅವರನ್ನು ದೇಶದಾದ್ಯಂತ ಸ್ಮರಿಸಲಾಗುತ್ತಿದೆ.
ಡಾ. ಸಲೀಂ
ಡಾ. ಸಲೀಂ

ನವದೆಹಲಿ: ಇಂದು ರಾಷ್ಟ್ರೀಯ ಪಕ್ಷಿ ದಿನ. ಜೀವ ಸಂಕುಲದ ರಕ್ಷಣೆಗೆ ಪಕ್ಷಗಳ ಪಾತ್ರ ಅನನ್ಯವಾಗಿದೆ. ರಾಷ್ಟ್ರೀಯ ಪಕ್ಷಿ ದಿನದಂದು ದೇಶದ ಪರಮೋಚ್ಚ ಪಕ್ಷಿ ತಜ್ಞ ಡಾ. ಸಲೀಂ ಅಲಿ ಅವರನ್ನು ದೇಶದಾದ್ಯಂತ ಸ್ಮರಿಸಲಾಗುತ್ತಿದೆ. ಅವರ ಜನ್ಮ ದಿನವನ್ನು ಪಕ್ಷಿ ದಿನವನ್ನಾಗಿ ಆಚರಿಸಲಾಗುತ್ತದೆ. ಸಲೀಂ ಅಲಿ ಅವರ 125 ನೇ ಜನ್ಮದಿನದಂದು  ಪಕ್ಷಿಗಳ ಸಂತತಿ ಬಗ್ಗೆ ಅವರಿಗಿದ್ದ ಅಪಾರ ಜ್ಞಾನಕ್ಕೆ ಎಲ್ಲರೂ ಮಾರು ಹೋಗುತ್ತಾರೆ. 

ಡಾ. ಸಲೀಂ ಅವರನ್ನು ಬೆಂಳೂರಿನ ಜ್ಞಾನಭಾರತಿ ಪಕ್ಷಿ ತಜ್ಞರು ಸದಾ ಸ್ಮರಿಸುತ್ತಲೇ ಇರುತ್ತಾರೆ. ಜ್ಞಾನಭಾರತಿ ಆವರಣದ ಜೀವ ವೈವಿಧ್ಯ ವನ ಹಲವು ಪಕ್ಷಿಗಳಿಗೆ ಆಸರೆಯಾಗಿದೆ. ಪಕ್ಷಿ ಪ್ರಿಯರು ಇಲ್ಲಿ ಬಂದು ಪಕ್ಷಿ ವೀಕ್ಷಣೆಯಲ್ಲಿ ತೊಡಗುತ್ತಾರೆ. ಪಕ್ಷಿಗಳ ಫೋಟೋ ಕ್ಲಿಕ್ಕಿಸುತ್ತಾರೆ. ಅವರು ಕಾಣುವ ವಿಶೇಷಣಗಳನ್ನು ದಾಖಲಿಸುತ್ತಾರೆ. 

ಶಾಲ ಕಾಲೇಜುಗಳಿಂದ ವಿದ್ಯಾರ್ಥಿಗಳು ಬಂದು ವನಸಿರಿ ಯನ್ನು ಕಣ್ತುಂಬಿಕೊಂಡು ಹೋಗುತ್ತಾರೆ. ಕಲಿಯುತ್ತಾರೆ. ಕಲಿಸುತ್ತಾರೆ. ಈಗಾಗಲೇ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಬಂದು ಹೋಗಿರುವುದನ್ನು ಸ್ಮರಿಸಬಹುದು.

ಇದೆಲ್ಲಾ ಆದದ್ದಾದರೂ ಹೇಗೆ ?

ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಜ್ಞಾನಭಾರತಿ ಆವರಣದಲ್ಲಿ ಜೀವವೈವಿಧ್ಯ ವನ ನಿರ್ಮಾಣ ಕಾರ್ಯ ಆರಂಭವಾಯಿತು. ಹಲವು ಜಾತಿಯ ಗಿಡ ಮರಗಳನ್ನು ಬೆಳೆಸುವ ಕೆಲಸ ನಡೆಯಿತು. ಕಲ್ಯಾಣಿ, ಚೆಕ್ ಡ್ಯಾಂಗಳ ನಿರ್ಮಿಸಲಾಯಿತು. ಇದರಿಂದ ಒಂದು ಸಹಜ ಕಾಡಿನಲ್ಲಿ ಇರಬಹುದಾದ ವಾತಾವರಣ ಜ್ಞಾನಭಾರತಿ ಆವರಣಕ್ಕೆ ಪ್ರಾಪ್ತವಾಯಿತು. ಹಲವು ಜಾತಿಯ ಪಕ್ಷಿಗಳು ಇಲ್ಲಿ ನೆಲೆ ಕಂಡುಕೊಂಡವು.

Bird Man of Inida ಸಲೀಂ ಅಲಿ ಹೇಳುವಂತೆ ಜನರು ಪಕ್ಷಿದಾಮವೆಂದರೆ ಅದೊಂದು glorified zoo ಎಂದು ಭಾವಿಸಿದ್ದಾರೆ. ಆದರೆ ಅವರಿಗೆ ಅರ್ಥವಾಗದ ವಿಷಯವೇನೆಂದರೆ ಒಂದು ಸಂರಕ್ಷಿತ ಪರಿಸರವಿದ್ದಾಗ ಹಕ್ಕಿ ಪಕ್ಷಿಗಳು ತಂತಾನೆ ಬರುತ್ತವೆ. ಅಲ್ಲಿ ಅವುಗಳಿಗೆ ಆಹಾರ ನೀರು ಸಿಕ್ಕಾರೆ, ಆ ಪ್ರದೇಶ ಗೂಡು ಕಟ್ಟಲು ಸುರಕ್ಷಿತ ಸ್ಥಳವೆನಿಸಿದರೆ ಅಲ್ಲಿಯೇ ಬದುಕುತ್ತವೆ ಇವೆಲ್ಲವನ್ನೂ ಜ್ಞಾನಭಾರತಿ ಪಕ್ಷಿ ಪ್ರಿಯರು ಸ್ಮರಿಸಿಕೊಳ್ಳುತ್ತಾರೆ. ಇದೀಗ ಜ್ಞಾನ ಭಾರತಿ ಆವರಣದಲ್ಲಿ ಆಗಿರುವುದು ಇದೇ. ಇಲ್ಲಿ ಕಾಡು ನಿರ್ಮಾಣಗೊಂಡಿದೆ. ಹಕ್ಕಿ ಪಕ್ಷಿಗಳಿಗೆ ತಂಗಲು ಸುರಕ್ಷಿತ ಪ್ರದೇಶವಾಗಿದೆ. ಅವುಗಳಿಗೆ ಆಹಾರವಿದೆ ನೀರಿದೆ. ಹೀಗಾಗಿ ಸಲೀಂ ಅಲಿ ಹೇಳಿದಂತೆ ನೈಸರ್ಗಿಕವಾದ ಪಕ್ಷಿಧಾಮವಾಗಿ ರೂಪುಗೊಂಡಿದೆ.

ಇಲ್ಲಿಗೆ ಬಂದು ಹೋಗುವ ಅನೇಕ ಪಕ್ಷಿ ತಜ್ಞರು ಅಳಿವಿನಂಚನಲ್ಲಿರುವ ಪಕ್ಷಿಗಳನ್ನೂ ಗುರುತಿಸಿ ಸಂಭ್ರಮಿಸಿದ್ದಾರೆ. ಡಾ.ಗಿರೀಶ್ ಮತ್ತು ಡಾ. ಕುಮಾರ್ ಜ್ಞಾನಭಾರತಿ ಆವರಣದ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರು ಕಂಡದ್ದು ನೋಡಿದ್ದು ತಿಳಿದದ್ದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಪಕ್ಷಿಗಳ ಫೋಟೋಗಳನ್ನೂ ಕೂಡಾ.

ನಿತ್ಯ ಬೆಳಿಗ್ಗೆ ಇಲ್ಲಿ ಸೇರುವ ವಾಕರ್ಸ್ ಜಾಗರ್ಸ್ ಹಕ್ಕಿಗಳ ಚಿಲಿಪಿಲಿ ನಾದದೊಂದಿಗೆ ತಮ್ಮ ದಿನ ಆರಂಭಿಸುತ್ತೀರಲ್ಲವೇ ?. ಹಕ್ಕಿಗಳ ಚಿಲಿಪಿಲಿಯನ್ನು ಧ್ಯಾನವಿಟ್ಟು ಕೇಳಿಸಿಕೊಳ್ಳಿ. ಅವೆಲ್ಲವೂ ಸಲೀಂ ಅಲಿ ಅವರಿಗೆ 125 ನೇ ಜನ್ಮದಿನದ ಶುಭಾಶಗಳನ್ನು ಕೋರಬಹುದು ಎನ್ನುತ್ತಾರೆ ಇಲ್ಲಿನ ಪಕ್ಷಿ ಪ್ರಿಯರು. 

ಇಂಥದೊಂದು ಮಾನವ ನಿರ್ಮಿತ ವನ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಾದ್ದು ಎಲ್ಲಾ ಜವಾಬ್ದಾರಿಯುತ ನಾಗರೀಕರ, ಸಂಸ್ಥೆಗಳ, ಸರ್ಕಾರಗಳ ಕರ್ತವ್ಯವಾಗಬೇಕು. ಅದು ಬಿಟ್ಟು ಈ ವನಕ್ಕೆ ಕೊಡಲಿ ಹಾಕುವುದೆಂದರೆ ಮುಂದಿನ ಪೀಳಿಗೆಯ ಕತ್ತು ಹಿಚುಕಿದಂತೆ.

ಪಕ್ಷಿಗಳ ದಿನದ ಈ ಸಂದರ್ಭದಲ್ಲಿ  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ದೇಶದ ಜನತೆಗೆ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.ಪಕ್ಷಿ ಮಾನವ ಎಂದೇ ಪ್ರಸಿದ್ಧರಾಗಿದ್ದ ಸಲೀಂ ಅಲಿ ಅವರು ಸಂಪೂರ್ಣ ಭಾರತದ ಪಕ್ಷಿಗಳ ಕುರಿತು ಸರ್ವೇಕ್ಷಣೆ ಕೈಗೊಂಡು ಆ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದರು. 

ಇದೇ ವೇಳೆ ಸಚಿವ ಪ್ರಕಾಶ್ ಜಾವಡೇಕರ್, ಇಂಡಿಯನ್ ರೋಲರ್ ಅಥವಾ ನೀಲ್ ಕಂಠ್ ಎಂಬ ಪಕ್ಷಿಯ ಕುರಿತು ಕುತೂಹಲ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ನೀಲ್ ಕಂಠ್ ಪಕ್ಷಿ ಕರ್ನಾಟಕ, ತೆಲಂಗಾಣ ಹಾಗೂ ಒಡಿಶಾದ ರಾಜ್ಯ ಪಕ್ಷಿಯಾಗಿರುವುದು ವಿಶೇಷನೀಯ. ಈ ಪಕ್ಷಿಯನ್ನು ಸಲೀಂ ಅಲಿ,  ರೈತನ ಅತ್ಯುತ್ತಮ ಮಿತ್ರ ಎಂದು ಕರೆದಿದ್ದರು ಎಂದು ತಿಳಿಸಿದ್ದಾರೆ.

ಬಿಹಾರದ ಬೆಗೂಸ ರಾಯಿ ನಲ್ಲಿರುವ ಖಬರ್ ತಾಲ್ ರಾಮ್ ಸರ್ ಸೈಟ್ ಪಟ್ಟಿಯಲ್ಲಿ ಸೇರಿರುವ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.  ರಾಮ್ ಸರ್ ಮೂಲಕ ಅಂತಾರಾಷ್ಟ್ರೀಯ ಕಾಳಜಿಗೆ ಪಾತ್ರವಾಗುವ ಚೌಗು ಪ್ರದೇಶಗಳಲ್ಲಿ ಖಬರ್ ತಾಲ್ ಸೇರಿಕೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com