ಮಹಿಳಾ ಸಾಕ್ಷರತೆ, ಸಬಲೀಕರಣಕ್ಕಾಗಿ ಗದಗ ಮಹಿಳೆಗೆ ಅಂತಾರಾಷ್ಟ್ರೀಯ ಮನ್ನಣೆ

ಮಹಿಳಾ ಸಾಕ್ಷರತೆ ಮತ್ತು ಸಬಲೀಕರಣಕ್ಕಾಗಿ ಗದಗದ ಅಶ್ವಿನಿ ದೊಡ್ಡಲಿಂಗಣ್ಣನವರ್ ಎಂಬುವರು ಲೆನೆವೋದ ನ್ಯೂ ರಿಯಾಲಿಟಿ, ಟೆನ್ ವುಮೆನ್, ಒನ್ ವರ್ಲ್ಡ್  ನಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ.
ಅಶ್ವಿನಿ ದೊಡ್ಡಲಿಂಗಣ್ಣನವರ್
ಅಶ್ವಿನಿ ದೊಡ್ಡಲಿಂಗಣ್ಣನವರ್

ಗದಗ: ಮಹಿಳಾ ಸಾಕ್ಷರತೆ ಮತ್ತು ಸಬಲೀಕರಣಕ್ಕಾಗಿ ಗದಗದ ಅಶ್ವಿನಿ ದೊಡ್ಡಲಿಂಗಣ್ಣನವರ್ ಎಂಬುವರು ಲೆನೆವೋದ ನ್ಯೂ ರಿಯಾಲಿಟಿ, ಟೆನ್ ವುಮೆನ್, ಒನ್ ವರ್ಲ್ಡ್  ನಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ.

ಈ ಮನ್ನಣೆ ಪಡೆದ ಭಾರತದ ಏಕೈಕ ಮಹಿಳೆಯಾಗಿದ್ದು ಉಳಿದವರು  ವಿವಿಧ ದೇಶಗಳ ಮಹಿಳೆಯರಾಗಿದ್ದಾರೆ. ಅಶ್ವಿನಿ ಅವರಿಗೆ ಈ ಮನ್ನಣೆ ದೊರೆತಿರುವುದಕ್ಕೆ ಇಡೀ ಗ್ರಾಮವೇ ಸಂಭ್ರಮಾಚರಣೆಯಲ್ಲಿ ತೊಡಗಿದೆ.

ನರಗುಂದ ತಾಲೂಕಿನ ಕುರವಿನಕೊಪ್ಪ ಗ್ರಾಮದವರಾಗಿದ್ದಾರೆ,  ಮೇಘಶಾಲಾ  ಮೊಬೈಲ್ ಅಪ್ಲಿಕೇಷನ್ ನಲ್ಲಿ  ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರಿಗೆ ಉತ್ತಮವಾದ ತರಬೇತಿ ನೀಡಲು ಸಹಾಯವಾಗುತ್ತದೆ.

10ನೇ ತರಗತಿ ನಂತರ ವಿವಾಹವಾಗಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವುದು ಗ್ರಾಮೀಣ ಪ್ರದೇಶಗಳಲ್ಲಿ ಸಂಪ್ರದಾಯವಾಗಿದೆ, ಆದರೆ ಅಶ್ವಿನಿ ಈ ಸಂಪ್ರದಾಯಕ್ಕೆ ಕಟ್ಟು ಬೀಳದೇ ಸಾಧನೆ ಮಾಡಬೇಕೆಂಬ ಹಠದಿಂದ  ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಕೌಶಲ್ಯ ಆಧಾರಿತ ಕಲಿಕೆಯನ್ನು ಹುಡುಕುತ್ತಿರುವ ಹೆಣ್ಣುಮಕ್ಕಳಿಗೆ ಸಹಾಯವಾಗಲಿದೆ.

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಗೆ ಸೇರಿದ ಅಶ್ವಿನಿ ಕೌಶಲ್ಯಾಭಿವೃದ್ಧಿ ಕೋರ್ಸ್ ಪೂರ್ಣಗೊಳಿಸಿದರು. ಕಳೆದ 2 ವರ್ಷಗಳಲ್ಲಿ ಅಶ್ವಿನಿ ಹಲವು ಗ್ರಾಮೀಣ ಯುವತಿಯರಿಗೆ ಸಹಾಯ ಮಾಡಿ ಅವರ ಕೌಶಲ್ಯದ ಮೂಲಕ ಉದ್ಯೋಗ ದೊರಕಿಸಿಕೊಡಲು ನೆರವಾಗಿದ್ದಾರೆ.

ಲೆನೊವೊ ತಂಡವು ಆಕೆಯನ್ನು ಸಂಪರ್ಕಿಸಿದ ನಂತರ, ಬಡತನದ ಮಧ್ಯೆ  ಅನುಭವಿಸಿದ ನೋವು ಮತ್ತು  ಹೇಗೆ ಯಶಸ್ಸನ್ನು ಗಳಿಸಿದ ಬಗ್ಗೆ  ಗ್ರಾಮೀಣ ಪ್ರದೇಶಗಳಲ್ಲಿ ಏಕೆ ಶಿಕ್ಷಣ ಪಡೆಯುತ್ತಿದ್ದಾಳೆ ಎಂಬ ಬಗ್ಗೆಯೂ ತನ್ನ ಕಥೆಯನ್ನು ಕಳುಹಿಸಿರು. ಅನೇಕ ಗ್ರಾಮೀಣ ಪ್ರತಿಭೆಗಳಿಗೆ ತಮ್ಮ ಗುರಿಗಳನ್ನು ಸಾಧಿಸಲು ಸರಿಯಾದ ವೇದಿಕೆಯನ್ನು ಪಡೆಯಲು ಸಹಾಯ ಮಾಡಲು ಅವರು ಒತ್ತು ನೀಡಿದರು.

"ಉತ್ತಮ ಉದ್ಯೋಗಗಳನ್ನು ಪಡೆಯಲು ಗ್ರಾಮೀಣ ಮಕ್ಕಳಿಗೆ ಹೊಸ ತಂತ್ರಜ್ಞಾನಗಳು ಮತ್ತು ಕೌಶಲ್ಯಗಳನ್ನು ಕಲಿಸಲು ನಾನು ನಿರ್ಧರಿಸಿದ್ದೇನೆ. ಈಗ ಕೊರೋನಾ ಹೆದರಿಕೆಯ ನಡುವೆ ನಾನು ಆನ್ ಲೈನ್ ಕ್ಲಾಸ್ ನಡೆಸುತ್ತಿದ್ದಾಗಿ ತಿಳಿಸಿದ್ದಾರೆ. ಆದರೆ ನನ್ನ ಸ್ಟೋರಿ ಲೆನೆವೋ ಅವರಿಗೆ ಹೇಗೆ ತಿಳಿಯಿತೊ ಗೊತ್ತಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಕಥೆಯನ್ನು ಶೇರ್ ಮಾಡಿದವರಿಗೆ ನಾನು ಧನ್ಯವಾದ ಹೇಳುತ್ತೇನೆ, ಹೆಣ್ಣು ಮಕ್ಕಳು ಬಯಸಿದೇ ಯಾವ ಸಾಧನೆ ಬೇಕಾದರೂ ಮಾಡಬಹುದು. ಲೆನೆವೋ ತಂಡಕ್ಕೆ ನನ್ನ ಧನ್ಯವಾದ ಎಂದು ಅಶ್ವಿನಿ ತಿಳಿಸಿದ್ದಾರೆ.

ಕೊರೋನಾ ಸಂಕಷ್ಟ ಮತ್ತು ಪ್ರವಾಹದ ನಡುವೆ ಅಶ್ವಿನಿ ಹಲವು  ಹೆಣ್ಣು ಮಕ್ಕಳಿಗೆ ಸಹಾಯ ಮಾಡಿ ಉದ್ಯೋಗ ಪಡೆಯಲು ನೆರವಾಗಿದ್ದಾರೆ, ಆಕೆಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಕುರುವಿನ ಕೊಪ್ಪ ಗ್ರಾಮದ ಕೆಜಿ ಕಲಹರಿ ಎಂಬುವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com