ಕೋವಿಡ್ 19 ನಿರ್ವಹಣೆ ಹೇಗೆ ಎಂಬುದಕ್ಕೆ ಮೈಸೂರಿನ ಈ ದಲಿತ ಕಾಲೋನಿ ಮಾದರಿ!

ಸದ್ಯದ ಕೋವಿಡ್ 19 ಪರಿಸ್ಥಿತಿಯನ್ನು ಪಟ್ಟಣಗಳು ಹೇಗೆ ನಿರ್ವಹಿಸಬೇಕು ಎಂಬುದನ್ನು ಮೈಸೂರಿನ ಈ ದಲಿತ ಕಾಲೋನಿ ನೋಡಿ ಕಲಿಯಬೇಕಾಗಿದೆ.
ಸತ್ಯಗಾಲ ಗ್ರಾಮಸ್ಥರು
ಸತ್ಯಗಾಲ ಗ್ರಾಮಸ್ಥರು
Updated on

ಮೈಸೂರು: ಸದ್ಯದ ಕೋವಿಡ್ 19 ಪರಿಸ್ಥಿತಿಯನ್ನು ಪಟ್ಟಣಗಳು ಹೇಗೆ ನಿರ್ವಹಿಸಬೇಕು ಎಂಬುದನ್ನು ಮೈಸೂರಿನ ಈ ದಲಿತ ಕಾಲೋನಿ ನೋಡಿ ಕಲಿಯಬೇಕಾಗಿದೆ.

ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬಾರದು ಹಾಗೂ ಆರ್ ಟಿ ಪಿಸಿಆರ್ ಪರೀಕ್ಷೆ ಕೂಡಿ ಮಾಡಿಸಿಕೊಳ್ಳಬೇಕು ಎಂದು ಚಾಮರಾಜನಗರ ಜಿಲ್ಲೆಯ ಸತ್ಯಗಾಲ ಗ್ರಾಮದ ದಲಿತ ಮುಖಂಡ ಎಲ್ಲರಿಗೂ ಜಾಗೃತಿ ಮೂಡಿಸಿದ್ದಾರೆ.

ಇದರ ಜೊತೆಗೆ ಬೆಂಗಳೂರು ಅಥವಾ ಮೈಸೂರಿನಿಂದ ಬರುವ ಯಾರನ್ನು ಗ್ರಾಮಕ್ಕೆ ಬಿಡದಿರಲು ನಿರ್ಧರಿಸಿದ್ದಾರೆ. ಸ್ಥಳೀಯ ಛತ್ರದಲ್ಲಿ ಯುವಕರ ಗುಂಪೊಂದು ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ವೈದ್ಯಕೀಯ ತುರ್ತು ಅವಶ್ಯಕತೆಯಿದ್ದರೇ ಮಾತ್ರ ಗ್ರಾಮದಿಂದ ಹೊರಗೆ ಹೋಗಬೇಕು, ಅನಾವಶ್ಯಕವಾಗಿ ತೆರಳಬಾರದು ಎಂದು ಕಠಿಣ ನಿಯಮಕ್ಕೆ ಆದೇಶಿಸಿದ್ದಾರೆ. 

ಪಿಗ್ಮಿ ಸಂಗ್ರಹಗಾರರು ಸೇರಿದಂತೆ ಯಾವುದೇ ಕಂಪನಿಯ ಏಜೆಂಟ್ ಗಳು ಗ್ರಾಮಕ್ಕೆ ಬರದಂತೆ ತಡೆ ಒಡ್ಡಲಾಗಿದೆ.ಒಂದು ವೇಳೆ ನಿಯಮ ಮೀರಿ ಮಾಸ್ಕ್ ಧರಿಸದೇ ಬಂದರೇ  ದಂಡ ವಿಧಿಸಲು ತೀರ್ಮಾನಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪಂಚಾಯತಿ ನಿರ್ದೇಶನ ನೀಡಿದೆ.

ಹಲವರು ಲಸಿಕೆ ತೆಗೆದುಕೊಳ್ಳಲು ಬಯಸಿದ್ದಾರೆ, ಆದರೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಸಮರ್ಕವಾಗಿ ಕೆಲಸ ಮಾಡುವ ವೈದ್ಯರಿಲ್ಲ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ, ಲಸಿಕೆ ಪಡೆದ ನಂತರ ಏನಾದರೂ ಅಡ್ಡ ಪರಿಣಾಮ ಉಂಟಾದರೇ ನಾವು ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com